ಶಿವಮೊಗ್ಗ: ವಿಧಾನಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಕರ್ತವ್ಯ ನಿರ್ವಹಿಸುವ ಶಿಕ್ಷಕರುಗಳಲ್ಲಿ ಬಹಳಷ್ಟು ಜನ ಇಲ್ಲಿಯವರೆಗೆ ಮತದಾನವನ್ನೇ ಮಾಡಿಲ್ಲ. ಅಧಿಕೃತವಾದ ಅವರ ಮತದಾನ ಮಾಡುವ ಅವಧಿ ಮುಗಿದಿದೆ.


ಕಾರಣವೇನೆಂದರೆ ಚುನಾವಣೆಗೆ ಭಾಗವಹಿಸಲು ಸೂಚಿಸಿದ್ದ ಇಲಾಖೆ ನೀಡಿದ್ದ ಆದೇಶದ ಜೊತೆ ನಮೂನೆ 12ರಲ್ಲಿ ಚುನಾವಣೆಯಲ್ಲಿ ಭಾಗವಹಿಸುವ ನೌಕರರು ನಮೂನೆ 12 19/20 ರಂತೆ ಅದನ್ನು ಏಪ್ರಿಲ್ 25ರೊಳಗೆ ತುಂಬಿ ಆಯಾ ಚುನಾವಣಾ ವ್ಯಾಪ್ತಿಯ ಇಲಾಖೆಗೆ ಸಲ್ಲಿಸಬೇಕಿತ್ತು.


ರಜೆಯ ಅವಧಿಯಲ್ಲಿದ್ದ ಸಾಕಷ್ಟು ಶಿಕ್ಷಕರು ಕೇವಲ ಚುನಾವಣೆಯ ಭಾಗವಹಿಸುವ ಪ್ರಕ್ರಿಯೆಯನ್ನು ವಾಟ್ಸಾಪ್ ಮೂಲಕ ಗಮನಿಸಿ ಸುಮ್ಮನಿದ್ದರು ಎನ್ನಲಾಗಿದೆ. ಎಂದಿನಂತೆ ಮತದಾನದ ದಿನ ಮತದಾನ ಮಾಡಬಹುದು ಎಂದುಕೊಂಡಿದ್ದರು.


ಇಲಾಖೆ ಅಧಿಕಾರಿಗಳೂ ಮಾಹಿತಿ ನೀಡಿಲ್ಲ. ನಿನ್ನೆ ಎರಡನೇ ಹಂತದ ತರಬೇತಿ ನಡೆಯುವ ಸಮಯದಲ್ಲಿ ಬಹುತೇಕ ಅಂದರೆ ಶೇ 40 ರಿಂದ 50 ರಷ್ಟು ಶಿಕ್ಷಕರು ನಮೂನೆ 12 ಅನ್ನು ತುಂಬಿಕೊಂಡು ಹೋಗಿದ್ದರು. ಅದರ ಕೊನೆಯ ಅವಧಿ ಮುಗಿದಿದೆ ಎಂಬ ಕಾರಣಕ್ಕೆ ಅವರಿಗೆ ಮತದಾನ ಮಾಡುವ ಅವಕಾಶವನ್ನು ನೀಡಿಲ್ಲ.


ಶಿವಮೊಗ್ಗ ನಗರ ವ್ಯಾಪ್ತಿಯ ಮತದಾರ ಶಿಕ್ಷಕರು ಮಹಾನಗರ ಪಾಲಿಕೆಗೆ ಗ್ರಾಮಾಂತರ ವ್ಯಾಪ್ತಿಯ ಶಿಕ್ಷಕರು ತಾಲೂಕ ಕಚೇರಿಗೆ ಅರ್ಜಿ ಕೊಡಬೇಕಿತ್ತು ಅವಧಿ ಮುಗಿದಿರುವುದರಿಂದ ಈಗ ಈ ಅವಕಾಶ ಇಲ್ಲ ಎನ್ನುವುದು ಚುನಾವಣಾ ತರಬೇತಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳ ಮಾತು ಹೀಗಾಗಿ ಕೂಡಲೇ ಈ ಶಿಕ್ಷಕರಿಗೆ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಿ ಕೊಡಬೇಕಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!