ಕಾವ್ಯಕಟ್ಟುವ ಕೆಲಸ ಸವಾಲಿನದ್ದು. ಕಾವ್ಯದ ಮೂಲಕ ಮನಸ್ಸಿನ ತುಮುಲಗಳನ್ನು ಅಭಿವ್ಯಕ್ತಗೊಳಿಸುವ ಜೊತೆಗೆ ಸಮಾಜಕ್ಕೆ ಸಂದೇಶ ಕೊಡಲು ಸಾಧ್ಯ ಎಂದು ಸಾಹಿತಿ ಡಾ. ನಾ.ಡಿಸೋಜ ತಿಳಿಸಿದರು.


ಇಲ್ಲಿನ ಸಾಹಿತ್ಯ ಭವನದಲ್ಲಿ ಶನಿವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಅಂತರಂಗ ಪ್ರಕಾಶನ ಹೊರತಂದಿರುವ ಶಿಕ್ಷಕ ಎಸ್.ಎನ್.ಪಾಲಾಕ್ಷಪ್ಪ ರಚಿಸಿರುವ ‘ಮಾನವೀಯತೆಯ ಮಾತು’ ಕವನ ಸಂಕಲನವನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಶಿಕ್ಷಕರಾದವರು ಪಠ್ಯದ ಜೊತೆ ಇಂತಹ ಸಾಹಿತ್ಯ ಹವ್ಯಾಸ ಬೆಳೆಸಿಕೊಂಡರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಸಾಹಿತ್ಯ ಬೆಳವಣಿಗೆ ನಿರಂತರವಾಗಿ ಸಾಗಬೇಕಾದರೆ ಶಿಕ್ಷಕರಾದಿಯಾಗಿ ಎಲ್ಲರೂ ಸಾಹಿತ್ಯದ ಸಾಂಗತ್ಯವನ್ನು ಬೆಳೆಸಿಕೊಳ್ಳಬೇಕು.

ಪಾಲಾಕ್ಷಪ್ಪ ಅವರ ಮಾನವೀಯತೆ ಮಾತು ಕವನ ಸಂಕಲನ ಬದುಕಿನ ಬೇರೆಬೇರೆ ಮಜಲುಗಳ ಮೇಲೆ ಬೆಳಕು ಚೆಲ್ಲುವ ಜೊತೆಗೆ ವಾಸ್ತವಿಕ ಸಮಾಜದ ಸ್ಥಿತಿಗತಿಯನ್ನು ಪರಿಚಯಿಸುವ ಕೆಲಸ ಮಾಡಿದೆ. ಪಾಲಾಕ್ಷಪ್ಪ ಅವರು ಇನ್ನಷ್ಟು ಕೃಷಿ ಮಾಡಿದರೆ ಕನ್ನಡ ಸಾಹಿತ್ಯ ಲೋಕಕ್ಕೆ ಮೌಲಿಕ ಕೃತಿಗಳನ್ನು ಕೊಡಲು ಸಾಧ್ಯ ಎಂದರು.


ಕೃತಿ ಕುರಿತು ಮಾತನಾಡಿದ ಆನವಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಪಕ ಪ್ರೊ. ಸುರೇಶ್ ಜಂಬಾನಿ, ಮಾನವೀಯತೆಯ ಮಾತು ಕವನ ಸಂಕಲನ ಬದುಕಿನ ಸತ್ಯ ಸಂಗತಿಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತದೆ. ಸಾಹಿತಿ ಶಿಕ್ಷಕ ಪಾಲಾಕ್ಷಪ್ಪ ದೀಪ ಎಂಬ ಕವನದಲ್ಲಿ ಮಾನವೀಯತೆಯನ್ನು ಬಿತ್ತುವ ಮೂಲಕ ಸೌಹಾರ್ದ ಸಮಾಜವನ್ನು ಕಟ್ಟುವ ತಮ್ಮ

ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಅಂತರಂಗ ಪ್ರಕಾಶನದ ಅ.ರಾ.ಶ್ರೀನಿವಾಸ್ ಮಾತನಾಡಿದರು. ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕೃತಿಕಾರ ಎಸ್.ಎನ್.ಪಾಲಾಕ್ಷಪ್ಪ, ಸರ್ಕಾರಿ ನೌಕರರ ಸಂ

ಘದ ಅಧ್ಯಕ್ಷ ಜಿ.ಪರಮೇಶ್ವರಪ್ಪ, ಮುಖ್ಯ ಶಿಕ್ಷಕ ಯಮನೂರಪ್ಪ, ಮಹಾಬಲೇಶ್ವರ ಜಿ., ಲಕ್ಷ್ಮಣ್ ಆರ್. ನಾಯ್ಕ್ ಇನ್ನಿತರರು ಉಪಸ್ಥಿತರಿದ್ದರು.
ಭಾಸ್ಕರ್ ಪ್ರಾರ್ಥಿಸಿದರು. ದತ್ತಾತ್ರೇಯ ಭಟ್ ಸ್ವಾಗತಿಸಿದರು. ಜಿ. ನಾಗೇಶ್ ವಂದಿಸಿದರು. ನಾರಾಯಣಮೂರ್ತಿ ನಿರೂಪಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!