ಶಿವಮೊಗ್ಗ ನಗರದ ವಾರ್ಡ್ ನಂ.01ರ ಸೋಮಿನಕೊಪ್ಪ ವ್ಯಾಪ್ತಿಯಲ್ಲಿ ಕೆಲಸಕ್ಕೆ ಹೋಗುವ ಕಾರ್ಮಿಕರು, ಶಾಲೆಗೆ ತೆರಳುವ ವಿದ್ಯಾರ್ಥಿಗಳು ಬಸ್‌ಗಾಗಿ ಪರದಾಟಿದ ಘಟನೆ ನಡೆದಿದೆ.


ಕಾಶೀಪುರ ಗೇಟ್ ಬಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದ್ದು, 2 ದಿನಗಳ ಕಾಲ ವಾಹನಗಳ ಪ್ರವೇಶವನ್ನು ನಿಷೇಧಿಸಲಾಗಿದ್ದು, ಬೊಮ್ಮನಕಟ್ಟೆ ರೈಲ್ವೆಗೇಟ್‌ನಿಂದ ಸೋಮಿನಕೊಪ್ಪದ ಕಡೆಗೆ ಬದಲಿ ಸಂಚಾರಿ ವ್ಯವಸ್ಥೆಯನ್ನು ಮಾಡಲಾಗಿದ್ದರು ಸಹ ಸರ್ಕಾರಿ ಬಸ್ ವೊಂದು ಬಿಟ್ಟರೆ ಯಾವುದೇ ಸಿಟಿ ಬಸ್‌ಗಳು ಬಂದಿರುವುದಿಲ್ಲವೆಂದು ಬಸ್‌ಗಾಗಿ ಕಾದು ಕುಳಿತ್ತಿದ್ದ ವಿದ್ಯಾರ್ಥಿಗಳು, ಕಾರ್ಮಿಕರು ತಿಳಿಸಿದ್ದಾರೆ.


ಬಸ್‌ಗಳಿಗೆ ಕಾದು ಸುಸ್ತಾಗಿ ಕೆಲವು ಕಾರ್ಮಿಕರು ಕೆಲಗಳಿಗೆ, ವಿದ್ಯಾರ್ಥಿಗಳು ಕಾಲೇಜುಗಳಿಗೆ ಪೊಲೀಸ್ ಚೌಕಿ, ಕಾಶಿಪುರಕ್ಕೆ ನಡೆದುಕೊಂಡೇ ಹೋಗುತ್ತಿರುವುದು ಕಂಡು ಬಂತು. ಇನ್ನೂ ಕೆಲವು ಶಾಲೆಯ ಮಕ್ಕಳು ಶಾಲೆಗೆ ಹೋಗದೇ
ಮೈದಾನದಲ್ಲಿ ಆಟವಾಡುವುದನ್ನು ಚಿತ್ರದಲ್ಲಿ ಗಮನಿಸಬಹುದು.

ನಮಗೆ ಶಾಲೆಯಲ್ಲಿ ಇಂದು ಪರೀಕ್ಷೆ ಇತ್ತು. ಬೆಳಗ್ಗೆ 9 ಗಂಟೆಯಿಂದ ಬಸ್‌ಗಾಗಿ ಕಾದು ಸುಸ್ತಾಗಿ ಯಾರ್ಯಾರದೂ ನೆರವು ಪಡೆದು ತುಂಬಾ ವಿಳಂಬವಾಗಿ ತೆರಳುತ್ತಿದ್ದೇವೆ. ನಾಳೆಯಾದರೂ ಈ ರೀತಿಯಾಗದಂತೆ ಅಧಿಕಾರಿಗಳು ಕ್ರಮಕೈಗೊಳ್ಳಬೇಕು.
-ವಿದ್ಯಾರ್ಥಿಗಳು

By admin

ನಿಮ್ಮದೊಂದು ಉತ್ತರ

error: Content is protected !!