ಶಿವಮೊಗ್ಗ,
ಸಿದ್ದರಾಮಯ್ಯ ಅವರ ಹೆಣವನ್ನು ನಾಯಿಯೂ ಮೂಸುವುದಿಲ್ಲ. ಜೀವಂತವಾಗಿ ರುವಾಗಲೇ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳು ವುದಿಲ್ಲ ಇನ್ನು ಅವರ ಹೆಣವನ್ನು ನಾವೇಕೆ ತೆಗೆದುಕೊಳ್ಳುತ್ತೇವೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದರು.
ಅವರು ಇಂದು ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯ ಅವರು ನನ್ನ ಹೆಣ ಕೂಡ ಬಿಜೆಪಿಯನ್ನು ಸೇರುವುದಿಲ್ಲ ಎಂದು ಹೇಳಿದ್ದಾರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯ ಅವರನ್ನು ನಾವು ಜೀವಂತವಾಗಿದ್ದಾಗಲೇ ಬಿಜೆಪಿಗೆ ಸೇರಿಸಿ ಕೊಳ್ಳುವುದಿಲ್ಲ. ಇನ್ನು ಅವರೇ ಹೇಳಿದಂತೆ ಅವರ ಹೆಣವನ್ನೇಕೆ ನಾವು ಸೇರಿಸಿಕೊಳ್ಳುತ್ತೇವೆ. ಅವರ ಹೆಣವನ್ನು ನಾಯಿಯೂ ಮೂಸಲ್ಲ. ಹತಾಶರಾಗಿರುವ ಅವರು ಇನ್ನೂ ಏನೇನು ಹೇಳಿಕೆ ಕೊಡುತ್ತಾರೋ ಗೊತ್ತಿಲ್ಲ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರನ್ನು ಬಫೂನ್ ಎಂದು ಕರೆದಿದ್ದಾರೆ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಈ ರೀತಿ ಹೇಳುವುದರಿಂದ ಅವರ ಯೋಗ್ಯತೆ ಅರ್ಥವಾಗುತ್ತದೆ. ಇದು ಅವರಿಗೆ ಶೋಭೆ ತರುವುದಿಲ್ಲ. ನಮಗೂ ಮಾತನಾಡಲು ಬರುತ್ತದೆ. ಜವಾಬ್ದಾರಿಯಿಂದ ಮಾತನಾಡ ಬೇಕು. ಸಿದ್ದರಾಮಯ್ಯ ಇದೇರೀತಿ ಮಾತನಾಡಿ ದರೆ ಸರಿ ಇರುವುದಿಲ್ಲ ಎಂದ ಎಚ್ಚರಿಸಿದರು.
ಸಿದ್ದರಾಮಯ್ಯ ಅವರ ಹಣೆಬರಹ ಮತದಾರರಿಗೆ ಗೊತ್ತು. ಈತ ನಂಬಿಕಸ್ಥ ಮನುಷ್ಯ ಅಲ್ಲ. ಚುನಾವಣೆಯಲ್ಲಿ ಜನರು ತಮ್ಮನ್ನು ಸೋಲಿಸುತ್ತಾರೆ ಎಂಬ ಕಾರಣಕ್ಕೆ ಕ್ಷೇತ್ರಗಳನ್ನು ಹುಡುಕುತ್ತಾ ಹೋಗುತ್ತಿದ್ದಾರೆ ಎಂದ ಅವರು, ಸಂಸದೆ ಸುಮಲತಾ ಬಿಜೆಪಿಗೆ ಸೇರ್ಪಡೆ ವಿಷಯದ ಬಗ್ಗೆ ರಾಷ್ಟ್ರೀಯ ನಾಯ ಕರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ನಳಿನ್‌ಕುಮಾರ್ ಕಟೀಲ್ ಅವರು ಕಾಲಲ್ಲಿ ಚಕ್ರ ಹಾಕಿಕೊಂಡು ರಾಜ್ಯವನ್ನು ಸುತ್ತುತ್ತಿದ್ದಾರೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಫೆ.೫ರಂದು ಬೆಳಿಗ್ಗೆ ೧೧ ಗಂಟೆಗೆ ಎನ್‌ಇಎಸ್ ಮೈದಾನದಲ್ಲಿ ಪೇಜ್ ಪ್ರಮುಖರ ಸಮಾವೇಶ ನಡೆಯಲಿದೆ. ವೋಟರ್ ಲಿಸ್ಟಿನಲ್ಲಿ ಪೇಜಿಗೆ ಒಬ್ಬರಂತೆ ಬಿಜೆಪಿ ಕಾರ್ಯಕರ್ತರನ್ನು ನೇಮಕ ಮಾಡಲಾಗಿದೆ. ಸುಮಾರು ೮೨೦೦ ಪೇಜ್ ಪ್ರಮುಖರು ಸಭೆಗೆ ಬರಲಿದ್ದಾರೆ. ಶಿವಮೊಗ್ಗದಲ್ಲಿ ಸಭೆ ನಡೆದ ನಂತರ ಭದ್ರಾವತಿ ಹಾಗೂ ಉಳಿದ ಕಡೆಗಳಲ್ಲಿ ಪೇಜ್ ಪ್ರಮುಖರ ಸಭೆ ನಡೆಯಲಿದೆ ಎಂದರು.
ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಅದರ ಬಗ್ಗೆ ಡಿ.ಕೆ. ಶಿವಕುಮಾರ್ ಏನೂ ಉತ್ತರ ಕೊಟ್ಟಿಲ್ಲ. ಯಾವ್ಯಾವ ದೇಶದಲ್ಲಿ ಮನೆ ಮಾಡಿದ್ದಾರೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಅವರ ಬಗ್ಗೆ ವೈಯಕ್ತಿಕವಾಗಿ ಅಭಿಪ್ರಾಯಿಸು ವುದಿಲ್ಲ. (೨ನೇ ಪುಟಕ್ಕೆ…)ಜೆಡಿಎಸ್ ಮತ್ತ ಕಾಂಗ್ರೆಸ್‌ಗೆ ರಾಜ್ಯಾಧ್ಯಕ್ಷ ಅಂತ ಇರುತ್ತಾರೆ. ಆದರೆ ಈ ಎರಡೂ ಪಕ್ಷದಲ್ಲೂ ನಾನೇ ಅಭ್ಯರ್ಥಿ ಅಂತ ಹೇಳಿಕೊಂಡು ತಿರುಗುತ್ತಾರೆ. ನಿಖಿಲ್ ಅಭ್ಯರ್ಥಿ ಅಂತ ಹೆಚ್‌ಡಿ. ಕುಮಾರಸ್ವಾಮಿ ಘೋಷಣೆ ಮಾಡಿದ್ರು. ಭವಾನಿ ರೇವಣ್ಣ ತಾನೂ ಅಭ್ಯರ್ಥಿ ಎನ್ನುತ್ತಾರೆ. ಸಿದ್ದರಾಮಯ್ಯ ಕೋಲಾರಕ್ಕೆ ತಾನು ಅಭ್ಯರ್ಥಿ ಎಂದು ಹೇಳುತ್ತಾರೆ. ಇವರಿಗೆ ಪಕ್ಷದ ಶಿಸ್ತು ಇಲ್ಲ ಎಂದರು.