ಶಿವಮೊಗ್ಗ: ಅಂಗನವಾಡಿ ನೌಕರರಿಗೆ ಗ್ಯಾಚ್ಯುಯಿಟಿ ನೀಡಬೇಕೆಂದು ಸುಪ್ರೀಂ ಕೋರ್ಟ್
ಆದೇಶ ನೀಡಿದೆ. ಅದನ್ನು ರಾಜ್ಯ ಸರ್ಕಾರ ತಕ್ಷಣ ನೀಡಬೇಕು ಎಂದು ರಾಜ್ಯ ಅಂಗನವಾಡಿ
ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷಿö್ಮÃ ಹೇಳಿದರು.
ಅವರು ರಾಜ್ಯ ಅಂಗನವಾಡಿ ನೌಕರರ ಸಂಘ(ಸಿಐಟಿಯು) ಜಿಲ್ಲಾ ಸಮಿತಿ ವತಿಯಿಂದ ನಗರದ
ಎನ್ಇಎಸ್ ಹೈಸ್ಕೂಲು ಸಭಾಂಗಣದಲ್ಲಿ ಶನಿವಾರ ಆಯೋಜಿಸಲಾಗಿದ್ದ 3ನೇ ಜಿಲ್ಲಾ ಸಮ್ಮೇಳನ
ಉದ್ಘಾಟಿಸಿ ಮಾತನಾಡಿ ಪ್ರತಿ ತಿಂಗಳ ಒಂದನೇ ತಾರೀಕು ವೇತನ ನೀಡಬೇಕು. ಮುಂಗಡವಾಗಿ
ಮೊಟ್ಟೆ ಖರೀದಿಗೆ ಹಣ ನೀಡಬೇಕು. ಅಂಗನವಾಡಿ ಕಾರ್ಯರ್ತರಿಗೆ ನೀಡುತ್ತಿರುವ ಇತರೆ
ಇಲಾಖೆಗಳ ಕೆಲಸವನ್ನು ನಿರ್ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕಡಿಮೆ ಸಂಬಳ ಕೊಡುತ್ತಿರುವಾಗಲೂ ನಮ್ಮದಲ್ಲದ ಕೆಲಸವನ್ನು ನಾವು ಮಾಡುತ್ತಿz್ದೆÃವೆ.
ಕೇಂದ್ರ ಸರ್ಕಾರದ ಐಸಿಡಿಎಸ್ ಸೇವೆಗೆಂದು ನಮ್ಮನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ
ಎಲ್ಲಾ ಇಲಾಖೆಗಳ ಕಾರ್ಯವನ್ನೂ ನಮ್ಮ ಮೇಲೆ ಹೇರಲಾಗುತ್ತಿದೆ.
ಚುನಾವಣಾ ಕಾರ್ಯಕ್ಕೂ
ನಮ್ಮನ್ನು ನಿಯೋಜಿಸಲಾಗುತ್ತಿದೆ. ಇಷ್ಟೆಲ್ಲಾ ಕೆಲಸಗಳನ್ನು ನೀಡಿ, ಅಂಗನವಾಡಿ
ಮಕ್ಕಳಿಂದ ಉತ್ತಮ ಫಲಿತಾಂಶ ಬರುತ್ತಿಲ್ಲ ಎಂದು ಗೂಬೆ ಕೂರಿಸಲಾಗುತ್ತಿದೆ ಎಂದು
ಆಕ್ರೋಶ ವ್ಯಕ್ತಪಡಿಸಿದರು.
ಆರು ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳನ್ನು ನಿಭಾಯಿಸುವುದು ಎಷ್ಟು ಕಷ್ಟ ಎಂಬುದು
ಎಲ್ಲರಿಗೂ ಗೊತ್ತಿದೆ. ಆದರೂ ಸರ್ಕಾರ ಇನ್ನೂ ಹೆಚ್ಚು ಕೆಲಸ ಮಾಡಬೇಕು ಎಂದು
ಹೇಳುತ್ತಿದೆ. ಅದರ ನಡುವೆ ಅಂಗನವಾಡಿಗಳು ಹಂದಿಗೂಡು ರೀತಿಯಲ್ಲಿ ಇವೆ. ನೂತನ
ಅಂಗನವಾಡಿಗಳ ನಿರ್ಮಾಣಕ್ಕೆ ಸರ್ಕಾರ 10 ರಿಂದ 12 ಲಕ್ಷ ರೂ.
ಖರ್ಚು ಮಾಡುತ್ತಿದೆ.
ಅದನ್ನು 15ರಿಂದ 20 ಲಕ್ಷಕ್ಕೆ ಹೆಚ್ಚಿಸಬೇಕು. 40ರಿಂದ 50 ಮಕ್ಕಳು ಕೂರಲು
ಅಂಗನವಾಡಿಗಳಲ್ಲಿ ವಿಶಾಲ ಸಭಾಂಗಣ, ಶೌಚಾಲಯ, ಸಂಗ್ರಹಗಾರ, ಅಡುಗೆ ಮನೆ ಎಲ್ಲವೂ
ಬೇಕಾಗುತ್ತದೆ. ಸರ್ಕಾರದ 40 ಪರ್ಸೆಂಟ್ ಕಮೀಷನ್ ಕಳೆದರೆ 6 ರಿಂದ 7 ಲಕ್ಷ
ವೆಚ್ಚದಲ್ಲಿ ಅಂಗನವಾಡಿ ಸುಸಜ್ಜಿತವಾಗಿ ನಿರ್ಮಾಣ ಆಗುವುದಿಲ್ಲ ಎಂದರು.