TUNGA TARANGA | AUG | 05 | 2022 | BHADRAVATHI CRIME NEWS
ಶಿವಮೊಗ್ಗ: ಭದ್ರಾವತಿ ತಾಲೂಕಿನ ಸಿದ್ಧರಮಟ್ಟಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಅಣ್ಣನೇ ನಾಡಬಂದೂಕಿನಿಂದ ತಮ್ಮನ ಮೇಲೆ ಗುಂಡು ಹಾರಿಸಿದ್ದು, ತೊಡೆಗೆ ಗುಂಡು ತಗಲಿದೆ.
ಸಿದ್ದರಮಟ್ಟಿಯ ಬ್ಲಾಕ್ ಗ್ರಾಮದ ಮುರುಗೇಶ್ (35) ಗಾಯಗೊಂಡವರು. ಆತನ ಅಣ್ಣ ಮುನಿಸ್ವಾಮಿ ಗುಂಡು ಹಾರಿಸಿದವ.
ಜಮೀನಿಗೆ ಹೋಗುವ ಮಾರ್ಗದಲ್ಲಿ ಹೂವಿನ ಗಿಡಗಳನ್ನು ನೆಡಲಾಗಿದೆ ಎಂದು ಆರೋಪಿಸಿ ಮುನಿಸ್ವಾಮಿ, ಸಹೋದರ ಮುರುಗೇಶ್ ಅವರ ಪತ್ನಿ ಮತ್ತು ಸಂಬಂಧಿ?ಕರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದರಿಂದ ಸಿಟ್ಟಿಗೆದ್ದ ಮುನಿಸ್ವಾಮಿ ಮನೆಯಲ್ಲಿದ್ದ ನಾಡಬಂದೂಕು ತಂದು ತಮ್ಮನಿಗೇ ಗುಂಡು ಹಾರಿಸಿದ್ದಾನೆ.