ಶಿವಮೊಗ್ಗ, ನ.28:
ಶಿವಮೊಗ್ಗ ಮಹಾನಗರ ಪಾಲಿಕೆಯಾಗಿ ಸಾಕಷ್ಟು ಅಭಿವೃದ್ಧಿ ಕಂಡಿದೆ. ಅದಕ್ಕೆ ಮುಖ್ಯಮಂತ್ರಿ ಆಗಿದ್ದ ಯಡಿಯೂರಪ್ಪ ಸಂಸದ ರಾಘವೇಂದ್ರ ಅವರಂತೆ ಬಿಜೆಪಿಯ ಪ್ರಮುಖರು ಕಾರಣಕರ್ತರಾಗಿದ್ದಾರೆ. ಇಲ್ಲಿನ ಹೆಡ್ಡಿಂಗ್ ಪ್ರಶ್ನೆ ಈ ಉದ್ದೇಶಕ್ಕಲ್ಲ.
ಸಾರ್ವಜನಿಕ ವಲಯದ ಒಂದು ವರ್ಗ ಅದರಲ್ಲೂ ಬಿಜೆಪಿಯ ಹಲವರು ಪಕ್ಷದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಆಗಮನಕ್ಕೆ ಶಿವಮೊಗ್ಗ ನಗರದಲ್ಲಿ ಅಳವಡಿಸಿರುವ ಫ್ಲಕ್ಸಿಗಳ ವಿಚಾರದಲ್ಲಿ ಮಹಾನಗರ ಪಾಲಿಕೆ ಎಷ್ಟರಮಟ್ಟಿಗೆ ತೆರಿಗೆ ಕಟ್ಟಿಸಿಕೊಂಡಿದೆ ಎಂಬುದಾಗಿದೆ.


ಶಿವಮೊಗ್ಗದ ಹಾದಿ ಬೀದಿಗಳಲ್ಲಿ ಬಿವೈ ವಿಜಯೇಂದ್ರ ಅವರ ಆಗಮನಕ್ಕೆ ಶುಭ ಕೋರಿ ಪ್ಲೆಕ್ಸಿಗಳನ್ನು ಹಾಕಿಕೊಂಡಿರುವ ಮಹಾನ್ ವ್ಯಕ್ತಿಗಳು ಇದಕ್ಕೆ ಪೂರಕವಾದ ತೆರಿಗೆಯನ್ನು ಮಹಾನಗರ ಪಾಲಿಕೆಗೆ ಕಟ್ಟಿದ್ದಾರಾ? ಕಟ್ಟದೆ ಇರುವ ಫ್ಲಕ್ಸಿಗಳನ್ನು ಯಾವ ಬೆದರಿಕೆಯಿಂದ ಉಳಿಸಿಕೊಂಡಿದ್ದೀರಿ? ಎಂಬುದು ಇಲ್ಲಿಗ ಬಿಜೆಪಿಯ ಇನ್ನೊಂದು ದೊಡ್ಡ ಪ್ರಶ್ನೆಯಾಗಿ ಉಳಿದಿದೆ.


ನಗರದ ಎಲ್ಲೆಡೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಆಗಮಿಸುವ ಅವಧಿಯಲ್ಲಿ ನನ್ನ ಮುಖವನ್ನು ನೋಡಬೇಕು ಎಂಬ ಕಾರಣಕ್ಕೆ ಕೆಲವೇ ಕೆಲವು ರೂಪಾಯಿ ಖರ್ಚು ಮಾಡಿ ಪ್ಲೆಕ್ಸಿ ಹಾಕಿಕೊಂಡಿದ್ದು, ಅದಕ್ಕೆ ಕಟ್ಟಬೇಕಿರುವ ಸಾರ್ವಜನಿಕ ತೆರಿಗೆ ಅತ್ಯಂತ ಕಡಿಮೆಯಾಗಿದ್ದು, ಅದನ್ನು ಕಟ್ಟದೆ ನಗರ ಪಾಲಿಕೆ ವಿರುದ್ಧ ಸೆಡ್ಡು ಮಸೆದಿರುವ ವ್ಯಕ್ತಿಗಳ ವಿರುದ್ಧ ಪಾಲಿಕೆಯ ಆಡಳಿತ ವರ್ಗ ಸಿಡಿದೇಳದಿರಲು ಕಾರಣವೇನು?

ಈ ಸುದ್ದಿಯನ್ನೂ ಓದಿ

ನಾಳೆ ಶಿವಮೊಗ್ಗಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಗಮನ | ಎರಡು ಸಾವಿರ ಬೈಕ್ ರ‍್ಯಾಲಿ ಅಪಾರ ಅಭಿಮಾನಿಗಳೊಂದಿಗೆ ಮೆರವಣಿಗೆ https://tungataranga.com/?p=25558
ಗಾಯಕ ರಾಜೇಶ್ ಕೃಷ್ಣನ್ ಕಂಠಸಿರಿಯಲ್ಲಿ ಶಿವಮೊಗ್ಗ ಸಿರಿ ವೈಭವ ಗೀತೆ | ಪ್ರೋಮೊ ಬಿಡುಗಡೆ https://tungataranga.com/?p=25529

ಕಾರ್ಯಕ್ರಮ ನಿಮಿತ್ತ ಗ್ರಾಮಕ್ಕೆ ಹೋಗಿದ್ದ ಕುಟುಂಬದವರಿಗೆ ಮನೆಗೆ ವಾಪಾಸ್ಸು ಬಂದಾಗ ಕಾದ್ದಿತ್ತು ಶಾಕ್ ! ಏನು ಗೊತ್ತಾ https://tungataranga.com/?p=25551
ಮೇಲಿನ 👆👆ಸಂಪೂರ್ಣ ಸುದ್ದಿ ಓದಲು ಕೊಟ್ಟಿರುವ ಕೊಟ್ಟಿರುವ‌ ಆಯಾ ಲಿಂಕ್ ಬಳಸಿ
Touch
News
tungataranga.com,
Paper
tungataranga.blogspot.co
Tungataranga Watsp Group

https://chat.whatsapp.com/KyoZCzag0jMDbw1OKyX1Vr


ಅಷ್ಟೊಂದು ಭಯ ಹುಟ್ಟಿಸುವ ವ್ಯಕ್ತಿಗಳಾ ಇವರು? ಕನಿಷ್ಠಪಕ್ಷ ಕಡಿಮೆ ತೆರಿಗೆಯನ್ನು ಪಾವತಿಸದೆ ದೌರ್ಜನ್ಯವೆಸಿಗೆ ಪಾಲಿಕೆಯ ಅಧಿಕಾರಿಗಳಿಗೆ ಹಾಗೂ ನೌಕರರಿಗೆ ಬೆದರಿಸಿರುವ ಇಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ಪಾಲಿಕೆ ಆಡಳಿತ ವ್ಯವಸ್ಥೆ ನೋಡಿಕೊಳ್ಳಲು ಸಾಧ್ಯವಿಲ್ಲವೇ? ಜಿಲ್ಲಾಡಳಿತ ಇತ್ತ ಗಮನ ಹರಿಸಬೇಕು. ಬಿವೈ ವಿಜಯೇಂದ್ರ ಅವರ ಆಗಮನಕ್ಕೆ ಶುಭ ಕೋರುತ್ತಲೇ ಸಾರ್ವಜನಿಕ ವಲಯದ ಈ ಪ್ರಶ್ನೆಯನ್ನು ನಗರಪಾಲಿಕೆಯ ಆಡಳಿತ ವ್ಯವಸ್ಥೆ ವಿರುದ್ಧ ಕೇಳಲೇಬೇಕಾದ ಅನಿವಾರ್ಯತೆ ಇಲ್ಲಿ ಬಂದಿದೆ.


ನಗರದ ಎಲ್ಲೆಂದರಲ್ಲಿ ರಸ್ತೆ ನಿಯಮವನ್ನು ಪಾಲಿಸದೆ ಪ್ಲೆಕ್ಸಿಗಳನ್ನು ಅಳವಡಿಸಲಾಗಿದೆ. ಓನ್ಲಿ ತಾನು ಕಾಣಬೇಕು ಎಂಬ ಉದ್ದೇಶದಿಂದ, ತಮ್ಮನ್ನು ತಾವು ಹೀರೋಗಳನ್ನಾಗಿ ಮಾಡಿಕೊಳ್ಳುವ ಮಹಾ ಉದ್ದೇಶದಿಂದ ಇವುಗಳನ್ನು ಹಾಕಿಕೊಳ್ಳಲಾಗಿದೆ. ಇದಕ್ಕೆ ಮಹಾನಗರ ಪಾಲಿಕೆ ಅವಕಾಶ ನೀಡಿದೆಯಾ? ಎಂಬುದಿಲ್ಲಿ ಗಂಭೀರ ಪ್ರಶ್ನೆ.


ಇಡೀ ಬೀದಿಯಲ್ಲಿ ನಗರಪಾಲಿಕೆ ಅಧಿಕಾರಿಗಳು ಹಾಗೂ ನೌಕರರು ಒಮ್ಮೆ ಸುತ್ತಾಡಿ ಬರಲಿ. ಇದರಿಂದಲಾದರೂ ನಗರಪಾಲಿಕೆಗೆ ಒಂದಿಷ್ಟು ನ್ಯಾಯಯುತ ತೆರಿಗೆ ಸಿಗಬಹುದು ತೆರಿಗೆ ಸಿಗಬಹುದು. ತಪ್ಪು ಮಾಡಿದ್ದರೆ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಬಹುದಲ್ಲವೇ ಎಂಬುದು ಸಾರ್ವಜನಿಕರ, ಅದರಲ್ಲೂ ಸಣ್ಣಪುಟ್ಟ ಫ್ಲೆಕ್ಸಿ ಹಾಕಿಕೊಂಡು ನಿರಂತರವಾಗಿ ನಗರ ಪಾಲಿಕೆಯ ನೌಕರರಿಂದ ಉಗಿಸಿಕೊಳ್ಳುವ, ಅವರಿಂದಲೇ ತಮ್ಮ ಪ್ಲೆಕ್ಸಿಯನ್ನು ಕೀಳಿಸಿಕೊಳ್ಳುವ ನೊಂದವರ ಅಳಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!