ಶಿವಮೊಗ್ಗ :ಅಂತೂ ಇಂತು ಹತ್ತು ವರುಷಗಳ ಬಳಿಕ ಶಿವಮೊಗ್ಗ ವಿನೋಬನಗರ ಮಗ್ಗುಲಲ್ಲಿ ನಿರ್ಮಿಸಿದ್ದ ಬೀದಿ ಬದಿ ವ್ಯಾಪಾರಸ್ಥರಿಗೆ ಪುನರ್ವಸತಿ ಕಲ್ಪಿಸುವ ಎಪ್ಪತ್ತು ಮಳಿಗೆಗಳ ಕಟ್ಟಡಕ್ಕೆ ಇಂದು ಶಾಶ್ವತ ಪರಿಹಾರ ದೊರೆತು ಮಳಿಗೆ ಆರಂಭಗೊಂಡಿದೆ.
ನಾಲ್ಕು ಸಾಲುಗಳಲ್ಲಿ ಎಪ್ಪತ್ತು ಮಳಿಗೆಗಳನ್ನು ಹೊಂದಿದ್ದು ಪ್ರತಿಯೊಂದಕ್ಕೂ ಪ್ರತ್ಯೇಖ ವಿದ್ಯುತ್ ಸಂಪರ್ಕ ವ್ಯವಸ್ಥೆಯಿದೆ.
ಒಂದೂವರೆ ಸಾವಿರ ರೂ ಮಾಸಿಕ ಬಾಡಿಗೆ ಜೊತೆಗೆ ಪ್ರತ್ಯೇಖ ವಿದ್ಯುತ್ ದರ, ಸ್ವಚ್ಚತೆಗಾಗಿ ಪ್ರತಿ ಮಾಸಿಕ ಇನ್ನೂರು ರೂ ಶುಲ್ಕ ಪಾವತಿಸಲು ವ್ಯಾಪಾರಸ್ಥರು ಒಪ್ಪಿಗೆ ನೀಡಿದ್ದಾರೆ.
ಹಿಂದೆ ನಗರಸಭೆ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ಅಧ್ಯಕ್ಷರಾಗಿದ್ದ ಎನ್.ಜೆ. ರಾಜಶೇಖರ್, ಚನ್ನಬಸಪ್ಪ, ಆಯುಕ್ತರಾಗಿ ಜಯಣ್ಣ, ತುಷಾರಮಣಿ ಅವರ ತಂಡದ ಪ್ರಯತ್ನದಿಂದ ಈ ಕಾರ್ಯ ಆಗಿತ್ತು.
ಈ ಮಾರಾಟ ಮಳಿಗೆಗಳನ್ನು ಸ್ಥಳೀಯ ಶಾಸಕ, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಶಾಸಕ ಆಯನೂರು ಮಂಜುನಾಥ್ ಉದ್ಘಾಟಿಸಿದರು.
ಮೇಯರ್ ಸುನೀತಾ ಅಣ್ಣಪ್ಪ, ಉಪಮೇಯರ್ ಶಂಕರ್ ಗನ್ನಿ, ಸದಸ್ಯರಾದ ಸುವರ್ಣ ಶಂಕರ್, ಚನ್ನಚಸಪ್ಪ, ಸುರೇಖಾ ಮುರುಳೀಧರ್, ಯಮುನಾ ರಂಗೇಗೌಡ, ಅನಿತಾ ರವಿಶಂಕರ್, ಜ್ಞಾನೇಶ್ವರ್, ರೇಖಾ ರಂಗನಾಥ್, ಆಯುಕ್ತ ಮಾಯಣ್ಣಗೌಡ, ನಲ್ಮ್ ಯೋಜನೆಯ ಅನುಪಮಾ ಹಾಗೂ ಇತರಿದ್ದರು.