ಶಿವಮೊಗ್ಗ,ಜೂ.22:
ಮೆಗ್ಗಾನ್ ಹೆರಿಗೆ ವಾರ್ಡಿನಲ್ಲಿ ಸರಿತ ಎಂಬ 27 ವರ್ಷದ ಬಾಣಂತಿ ಸಾವನ್ನಪ್ಪಿದ್ದು, ಆಕೆಯ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವಲ್ಲ. ಬದಲಿಗೆ ಆಕೆಯ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಯಕೃತ್ ನ ವೈಪಲ್ಯತೆಯಿಂದಾಗಿ ಸಾವನ್ನಪ್ಪಿರುವುದಾಗಿ ಮೆಗ್ಗಾನ್ ಮತ್ತು ಸಿಮ್ಸ್ ಆಡಳಿತ ಮಂಡಳಿ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದೆ.
ಆಸ್ಪತ್ರೆಯಲ್ಲಿ ಸರಿತ ಎಂಬ ಬಾಣಂತಿ ಮೃತಪಟ್ಟಾಗ ಅವರ ಕುಟುಂಬ ವೈದ್ಯರ ನಿರ್ಲಕ್ಷವೆಂದು ಆರೋಪಿಸಿ ಮುಖ್ಯದ್ವಾರದ ಗಾಜುಗಳನ್ನ ಒಡೆದು ಹಾಕಿದ್ದರು.
ಆದರೆ ಎಲ್ಲಾ ದಾಖಲಾತಿಯನ್ನ ಪರಿಶೀಲಿಸಿ ನೋಡಿದಾಗ ವೈದ್ಯರ ನಿರ್ಲಕ್ಷ ಎಲ್ಲೂ ಕಂಡುಬಂದಿಲ್ಲ. ಬದಲಿಗೆ ಗರ್ಭಿಣಿ ಸರಿತ ಕಾಮಾಲೆ ಮತ್ತು ಹೈಪರ್ ಥೈರಾಯಿಡ್ ಕಾಯಿಲೆಯಿಂದ ಬಳಲುತ್ತಿದ್ದರು. ನಂತರ ಸಿಜರಿನ್ ಮೂಲಕ ಹೆರಿಗೆ ಮಾಡಲಾಗಿ ಗಂಡು ಮಗುವಿಗೆ ಸರಿತ ಜನ್ಮ ನೀಡಿದ್ದಾರೆ.
ಮರುದಿನ ಬಾಣಂತಿಯ ದೇಹದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಇದಕ್ಕೆ ಪೂರಕವಾಗಿ ಎಲ್ಲಾ ಚಿಕಿತ್ಸೆಯನ್ನ ನೀಡಲಾಗಿದೆ. ಆದರೆ ರಕ್ತ ಹೆಪ್ಪುಗಟ್ಟುವಿಕೆ ಮತ್ತು ಯಕೃತ್ ನಲ್ಲಿ ವೈಫಲ್ಯತೆ ಇದ್ದಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಸವಿತ ಸಾವನ್ನಪ್ಪಿದ್ದಾರೆ ಎಂದು ಮೆಗ್ಗಾನ್ ಅಧೀಕ್ಷಕ ಶ್ರೀಧರ್ ಮತ್ತು ಸಿಮ್ಸ್ ನಿರ್ದೇಶಕ ಡಾ.ಸಿದ್ದಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ