ಶಿವಮೊಗ್ಗ, ಆ.12:
ಹೇಳಿಕೇಳಿ ಗಾಂಜಾ, ಅಫೀಮಿ ನಂತಹ ಮಾದಕ ದ್ರವ್ಯಗಳನ್ನು ಮಾರುವವರ ಮನೋಸ್ಥಿತಿ ಹೇಗಿರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗುತ್ತದೆ.

ಮನೋಸ್ಥಿತಿ ಕಳೆದುಕೊಂಡವರಾಗುವ ಸ್ಥಿತಿಯನ್ನಿಲ್ಲಿ ಕಾಣಬಹುದಾಗಿದೆ.
ಇಬ್ಬರು ಗಾಂಜಾ ಮಾರಾಟಗಾರರನ್ನು ಬಂಧಿಸಲು ಹೋಗಿದ್ದ ಕುಂಸಿ ಪೊಲೀಸ್ ಠಾಣೆಯ ಪಿಎಸ್ಐ ನವೀನ್ ಕುಮಾರ್ ಮಠಪತಿ ಎಂಬುವರ ಮೇಲೆ ಆರೋಪಿಗಳು ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಡಘಟ್ಟ ದಲ್ಲಿ ಮಧು ಮತ್ತು ಮನು ಎಂಬುವರು ಗಾಂಜಾ ಪಾಕೆಟ್ ಗಳನ್ನು ಮಾಡಿ ಮಾರಾಟ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪಿಎಸ್ ಐ ಹೆಡ್ ಕಾನ್ಸ್ಟೇಬಲ್ ಬಸವಂತಪ್ಪ ಎಂಬುವರನ್ನು ಕರೆದುಕೊಂಡು ಹೋಗಿದ್ದಾರೆ. ಆರೋಪಿಗಳನ್ನು ಹಿಡಿದು ಬಂಧಿಸಿ ಕಾಣೆಗೆ ಕರೆತರುವಾಗ ಮಧು ಬಸವಂತಪ್ಪ ಅವರನ್ನು ನೆಲಕ್ಕೆ ಬೀಳುವಂತೆ ತಳ್ಳಿದ್ದಾರೆ. ಈ ಸಂದರ್ಭದಲ್ಲಿ ಪಿಎಸ್ಐ ಬಿಡಿಸಿಕೊಳ್ಳಲು ಹೋದಾಗ ನೆಲ ದಂಬಾಸ್ ಮಾಡುವ ರಾಡಿನಿಂದ ಹಲ್ಲೆ ಮಾಡಿದ್ದಾರೆ. ನಂತರದ ಬೆಳವಣಿಗೆಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ನವೀನ್ ಅವರ ಕಿವಿಯ ಭಾಗದಲ್ಲಿ ಹೊಡೆತ ಬಿದ್ದಿದ್ದು, ಸ್ಟಿಚ್ ಹಾಕಲಾಗಿದೆ. ಕಳೆದ ಒಂದೂವರೆ ದಿನಗಳ ಕಾಲ ಆಸ್ಪತ್ರೆಯಲ್ಲಿದ್ದ ನವೀನ ಈಗ ಬಿಡುಗಡೆಯಾಗಿದ್ದಾರೆ.
ಇತ್ತೀಚಿನ ಕೆಲ ದಿನಗಳ ಹಿಂದಷ್ಟೇ ಸಚಿವ ಕೆ ಎಸ್ ಈಶ್ವರಪ್ಪ ಅವರು ಶಿವಮೊಗ್ಗ ಜಿಲ್ಲಾ ಪೊಲೀಸ್ ವ್ಯವಸ್ಥೆಯ ವಿರುದ್ಧ ರಾಂಗಾಗಿ ಗಾಂಜಾ, ಇಸ್ಪೀಟ್, ಓಸಿ ವಿರುದ್ಧ ಕಿಡಿಕಾರಿದ್ದರು. ನಂತರ ಎಚ್ಚರಗೊಂಡ ಪೊಲೀಸರು ನಿತ್ಯ ನಿರಂತರ ಹತ್ತಾರು ಪ್ರಕರಣಗಳನ್ನು ಭೇಧಿಸುತ್ತಿದ್ದಾರೆ.
ಡಿಸಿಐಬಿಗೆ ಅನ್ಯ ವಿಷಯ ಇಲ್ಲವೇ?
ಶಿವಮೊಗ್ಗ ಜಿಲ್ಲೆಯಲ್ಲಿ ಅಕ್ರಮ ಗಾಂಜಾ ಮಾರಾಟ ಇಸ್ಪೀಟ್ ಓಸಿ ಅಡ್ಡೆಯನ್ನು ನಿಯಂತ್ರಿಸುವಲ್ಲಿ ಪೊಲೀಸರು ಕಾನೂನು ಕ್ರಮಗಳನ್ನು ಕೈಗೊಳ್ಳುತ್ತಿರುವುದು ಸರಿಯಷ್ಟೇ. ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಯಲ್ಲಿರುವ ಮೂಲೆ-ಮೂಲೆಗಳಲ್ಲಿನ ಅಕ್ರಮ ಒಸಿ ಇಸ್ಪೀಟ್ ದಂಡೆಗಳನ್ನು ಬೆನ್ನತ್ತಿದೆ. ಡಿಸಿಐಬಿ ಅದಕ್ಕೆ ಮಾತ್ರ ಸೀಮಿತ ಎಂಬಂತೆ ಕಾರ್ಯನಿರ್ವಹಿಸುತ್ತಿರುವುದು ನಾನಾ ಅನುಮಾನ ಮೂಡಿಸಿದೆ.
ಕೊಲೆ, ದರೋಢೆ ಗಾಂಜಾ, ರೌಡಿಸಂ ಅಂತಹ ಪ್ರಕರಣಗಳು ಈ ವ್ಯಾಪ್ತಿಯಲ್ಲಿ ಬರುವುದಿಲ್ಲವೆಂಬ ಪ್ರಶ್ನೆ ಇದೇ ವಲಯದಲ್ಲಿ ಚರ್ಚೆಗೆ ಬರುತ್ತಿದೆ. ಡಿಸಿಐಬಿ ಈ ಎಲ್ಲೆಡೆಯ ಅಕ್ರಮಗಳನ್ನೂ ಸಮತಟ್ಟು ಮಾಡಿ ಅಫರಾಧಿಗಳನ್ನು ಹತ್ತಿಕ್ಕಲಿ ಎಂಬುದು ನಮ್ಮ ಆಶಯ.

By admin

ನಿಮ್ಮದೊಂದು ಉತ್ತರ

You missed

error: Content is protected !!