ಶಿವಮೊಗ್ಗ, ಆ.11:
ಶಿವಮೊಗ್ಗ ಗೋಪಾಳದ ಶ್ರೀ ರಾಮ ಕೃಷ್ಣ ವಿದ್ಯಾನಿಕೇತನ ಪ್ರಸಕ್ತ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇಕಡ 100ರಷ್ಟು ಫಲಿತಾಂಶ ಪಡೆದಿದ್ದು ಮತ್ತೆ ಈ ಬಾರಿಯೂ ಶಿವಮೊಗ್ಗ ಜಿಲ್ಲೆಯಲ್ಲಿ ಹಲವು ದಾಖಲೆಗಳನ್ನು ಬರೆದಿದೆ.
ಸಿಂಚನ ಎನ್. 625 ಅಂಕಗಳಿಗೆ 622 ಅಂಕ ಗಳಿಸಿದ್ದು 99.52ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ ನಾಲ್ಕನೇ ಸ್ಥಾನ ಹಾಗೂ ಶಿವಮೊಗ್ಗ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಇದೇ ಶಾಲೆಯ ವಿಕಾಸ್ ಎಂ. ಕುಲಕರ್ಣಿ 612 ಅಂಕಗಳಿಸಿ ಶೇಕಡ 98ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯಕ್ಕೆ 13 ನೇ ಸ್ಥಾನ ಪಡೆದಿದ್ದಾರೆ ಎಂದು ವಿದ್ಯಾನಿಕೇತನ ತಿಳಿಸಿದೆ.
ದೀಕ್ಷಿತಾ ಜಿ. ನಾಯ್ಕ್ ಅವರು 608 ಅಂಕ ಗಳಿಸುವ ಮೂಲಕ ಶಾಲೆಯಲ್ಲಿ ತೃತಿಯ ಸ್ಥಾನ ಪಡೆದಿದ್ದಾರೆ.
ತನುಶ್ರೀ ಆರ್. 607, ಸೃಷ್ಟಿ ಎನ್. ಎಂ. 606, ಸಿಂಚನ ಎಂ. 604, ಸುಭಾಷ್ ಜಿ.ಕೆ. 604, ಸಿ. ಸಿಂಚನ 603, ಗಗನ್ ಕುಮಾರ್ 602, ಪ್ರಜೀದಾ 601, ಅಂಜಲಿ ಕೆ.ಪಿ. 600 ಅಂಕ ಗಳಿಸಿದ್ದಾರೆ.
ವಿದ್ಯಾನಿಕೇತನದ 11 ವಿದ್ಯಾರ್ಥಿಗಳು ಆರುನೂರಕ್ಕಿಂತ ಹೆಚ್ಚು ಅಂಕ ಗಳಿಸಿದ್ದರೆ, 599 ಅಂಕಗಳನ್ನು ಮೂರು ಮಕ್ಕಳು ಗಳಿಸಿದ್ದಾರೆ. 590 ಕ್ಕಿಂತ ಹೆಚ್ಚು ಅಂಕವನ್ನು 18 ಮಕ್ಕಳು ಪಡೆದಿರುವುದು ವಿಶೇಷ.
ವಿಷಯವಾರು ಉಲ್ಲೇಖಿಸುವಂತೆ ಸಂಸ್ಕೃತದಲ್ಲಿ ಒಂದು ಕನ್ನಡದಲ್ಲಿ 14 ಇಂಗ್ಲಿಷ್ ನಲ್ಲಿ 11, ಹಿಂದಿಯಲ್ಲಿ 10, ಗಣಿತದಲ್ಲಿ ಒಂದು ವಿಜ್ಞಾನದಲ್ಲಿ ಎರಡು ಹಾಗೂ ಸಮಾಜವಿಜ್ಞಾನದಲ್ಲಿ 6 ವಿದ್ಯಾರ್ಥಿಗಳು ನೂರಕ್ಕೆ ನೂರು ಫಲಿತಾಂಶ ಪಡೆದಿದ್ದಾರೆ. ಎಂದಿನಂತೆ ಜಿಲ್ಲೆಯ ಅತ್ಯಧಿಕ ಪಲಿತಾಂಶದ ಶಾಲೆ ಯಾಗಿರುವ ರಾಮ ಕೃಷ್ಣ ವಿದ್ಯಾನಿಕೇತನ ಈ ಬಾರಿಯೂ 100ರಷ್ಟು ಫಲಿತಾಂಶ ಪಡೆಯುವಲ್ಲಿ ಕಾರಣರಾದ ವಿದ್ಯಾರ್ಥಿಗಳನ್ನು ಹಾಗೂ ಶಿಕ್ಷಕ ವೃಂದ ಮತ್ತು ಪೋಷಕರನ್ನು ರಾಮಕೃಷ್ಣ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ನಾಗೇಶ್ ಹಾಗೂ ಪ್ರಧಾನ ಕಾರ್ಯದರ್ಶಿ ಶೋಭಾ ವೆಂಕಟರಮಣ ಅಭಿನಂದಿಸಿದ್ದಾರೆ.