ಶಿವಮೊಗ್ಗ, ಆ.12:
ಕಳೆದ 25 ವರ್ಷಗಳ ಹಿಂದೆ ಬಹುದೊಡ್ಡ ಕಲ್ಪನೆಯ ನಡುವೆ ವೆಂಕಟರಮಣ ದಾವಣಿಬೈಲು ಅವರು ಆರಂಭಿಸಿದ ರಾಮಕೃಷ್ಣ ವಿದ್ಯಾ ಸಂಸ್ಥೆ ಹಾಗೂ ರಾಮಕೃಷ್ಣ ವಿದ್ಯಾಶ್ರಮ ಟ್ರಸ್ಟ್ ನ ಶಾಲೆಗಳೆಲ್ಲ ಶೇಕಡ 100 ಹಾಗೂ ನೂರರ ಸನಿಹದ ಫಲಿತಾಂಶವನ್ನು ಪಡೆಯುತ್ತಿದೆ.
ಪ್ರಸಕ್ತ ವರ್ಷದ ರಾಮ ಕೃಷ್ಣ ವಿದ್ಯಾನಿಕೇತನ ಗೋಪಾಲ ಹಾಗೂ ಚೋರಡಿಯ ರಾಮಕೃಷ್ಣ ಗುರುಕುಲ ಶಾಲೆಯಲ್ಲಿನ ಎಲ್ಲ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳಿಂದ ಉತ್ತೀರ್ಣರಾಗುವ ಮೂಲಕ ಶೇಕಡ ನೂರರಷ್ಟು ಫಲಿತಾಂಶವನ್ನು ಪಡೆದಿದ್ದಾರೆ.
ಅಂತೆ ವೆಂಕಟರಮಣ ಅವರ ಕನಸಿನ ಅನುಪಿನಕಟ್ಟೆ ರಾಮಕೃಷ್ಣ ಗುರುಕುಲ ಮಾದರಿಯ ಶಾಲೆಯಲ್ಲಿನ ವಸತಿ ವಿದ್ಯಾಲಯದಲ್ಲಿ ಎಲ್ಲಾ ಮಕ್ಕಳ ಫಲಿತಾಂಶ ಲಭಿಸಿದ್ದು ಶೇಕಡ 97ರಷ್ಟು ಫಲಿತಾಂಶ ಈ ಬಾರಿ ಅರ್ಥವಾಗಿದೆ.
ಪ್ರಸಕ್ತ ವರ್ಷದ ಕೊರೋನಾ ಹಿನ್ನೆಲೆಯಲ್ಲಿ ಬಹುತೇಕ ಅನ್ಯ ಜಿಲ್ಲೆಗಳ ಮಕ್ಕಳಿರುವ ಗುರುಕುಲ ವಸತಿ ವಿದ್ಯಾಲಯದಲ್ಲಿನ ಮಕ್ಕಳಲ್ಲಿ ಕೆಲವರ ಗೆಲುವು ಹಾಗೂ ತೊಂದರೆ ನಿಮಿತ್ತ ಪ್ರಸಕ್ತ ವರ್ಷವಷ್ಟೇ ಶೇಕಡ 97ರ ಪಲಿತಾಂಶ ಲಭಿಸಿದೆ ವಿಶೇಷವೆಂದರೆ ಈ ಎಲ್ಲ ಮಕ್ಕಳು ಶೇಕಡಾ 60 ಕ್ಕಿಂತ ಹೆಚ್ಚು ಫಲಿತಾಂಶವನ್ನು ಪಡೆದಿದ್ದಾರೆ ಎಂದು ರಾಮಕೃಷ್ಣ ವಿದ್ಯಾ ಸಂಸ್ಥೆ ಅತ್ಯಂತ ವಿಶ್ವಾಸದಿಂದ ಹೇಳುತ್ತಿದೆ.
ಅಂತೆ ಶೃಂಗೇರಿಯ ರಾಮಕೃಷ್ಣ ವಿದ್ಯಾರ್ಥಿ ಕೇಂದ್ರ ಪ್ರಸಕ್ತ ವರ್ಷ ಶೇಕಡ 98ರಷ್ಟು ಪಡೆದಿದ್ದು ಈ ಬಾರಿಯೂ ತಾಲೂಕಿನಲ್ಲಿ ಅಂಕ ಪಡೆದ ವಿದ್ಯಾರ್ಥಿಗಳಾಗಿದ್ದಾರೆ