ಶಿವಮೊಗ್ಗ, ಆ.11:
ಶಿವಮೊಗ್ಗ ಅನುಪಿನಕಟ್ಟೆ ಯಲ್ಲಿರುವ ಶ್ರೀರಾಮಕೃಷ್ಣ ಗುರುಕುಲದ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು ಶೇಕಡ 98ರಷ್ಟು ಫಲಿತಾಂಶ ಲಭಿಸಿದೆ.
ಇಲ್ಲಿಯವರೆಗೆ ಶೇಕಡ ನೂರರಷ್ಟು ಫಲಿತಾಂಶ ಹಾಗೂ ಅತಿ ಹೆಚ್ಚು ಅಂಕಗಳನ್ನು ದಾಖಲಿಸುತ್ತಿದ್ದ ಗುರುಕುಲದ ಮಕ್ಕಳು ಕೊರೊನಾ ಹಿನ್ನೆಲೆಯಲ್ಲಿ ತಮ್ಮ ತಮ್ಮ ಮನೆಗಳಿಗೆ ತೆರಳಿದ ನಂತರ ನಡೆದ ಪರೀಕ್ಷೆಯನ್ನು ಶಿವಮೊಗ್ಗದಲ್ಲಿಯೇ ಬಂದು ಬರೆದಿದ್ದು ಶೇಕಡವಾರು ಹಾಗೂ ವಿದ್ಯಾರ್ಥಿಗಳ ಅಂಕದ ಪ್ರಮಾಣ ಶೇಕಡಾ ನಾಲ್ಕರಿಂದ ಐದರಷ್ಟು ಕಡಿಮೆಯಾಗಲು ಕಾರಣ ಎಂದು ಹೇಳಲಾಗಿದೆ.
ಇದರ ನೆಡುವ 45 ಮಕ್ಕಳ ಡಿಸ್ಟಿಂಕ್ಷನ್ ಸೇರಿದಂತೆ ಉಳಿದೆಲ್ಲ ಮಕ್ಕಳು ಅಂದರೆ 57 ಮಕ್ಕಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವುದು ಸಂತಸದ ಸಂಗತಿ.
ಗುರುಕುಲದ ಮೊಹಿತ್ ಟಿ.ಎನ್. 607 ಅಂಕ ಗಳಿಸಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಯಾಗಿದ್ದಾರೆ. ಅಂತೆಯೇ ದರ್ಶನ್ ಗೌಡ ಜಿ.ಎಸ್ . ರವರು 604, ಸಂಜಯ್ ಎಸ್ ಬೋಲಿ ಅವರು 600 ಅಂಕ ಪಡೆದಿದ್ದಾರೆ.
ವಿಷಯವಾರು ಗಮನಿಸುವುದಾದರೆ ಕನ್ನಡ 8, ಇಂಗ್ಲಿಷ್ 2, ಹಿಂದಿ 13, ಗಣಿತ 2, ವಿಜ್ಞಾನ 2, ಸಮಾಜ ವಿಜ್ಞಾನ 2 ವಿದ್ಯಾರ್ಥಿಗಳು ಶೇಕಡ ನೂರರಷ್ಟು ಫಲಿತಾಂಶ ಪಡೆದಿದ್ದಾರೆ.
ಪ್ರತಿವರ್ಷ ನೂರಾರು ಮಕ್ಕಳು ಗುರುಕುಲದಲ್ಲಿ ನಿರೀಕ್ಷೆ ಮೀರಿದ ಫಲಿತಾಂಶ ಪಡೆಯುತ್ತಿದ್ದು ಈ ಬಾರಿಯೂ ಮಕ್ಕಳಲ್ಲಿ ಉತ್ತಮ ಫಲಿತಾಂಶ ಲಭಿಸಿದೆ.
ಉತ್ತಮ ಫಲಿತಾಂಶ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು, ಸಹಕರಿಸಿದ ಪೋಷಕರನ್ನು, ಹಾಗೂ ಅವಿರತವಾಗಿ ಮಕ್ಕಳ ಶ್ರೇಯೋಭಿವೃದ್ಧಿಗೆ ಕರ್ತವ್ಯ ನಿರ್ವಹಿಸಿದ ಎಲ್ಲ ಶಿಕ್ಷಕರನ್ನು ಆಡಳಿತ ಮಂಡಳಿ ಅಧ್ಯಕ್ಷ ಡಾ. ನಾಗೇಶ್ ಹಾಗೂ ಕಾರ್ಯದರ್ಶಿ ಶೋಭಾ ವೆಂಕಟರಮಣ ಅಭಿನಂದಿಸಿದ್ದಾರೆ.