ಶಿವಮೊಗ್ಗ, ಆ.10:
ಬರುವ ಗೌರಿ ಗಣೇಶ ಉತ್ಸವ ಹಾಗೂ ಈದ್ ಮಿಲಾದ್ ಆಚರಣೆಯ ಜೊತೆಗೆ ಲಾಕ್ಡೌನ್ ಅವಧಿ ಮುಗಿದಿದ್ದು ಜಿಲ್ಲೆಯ ಶಾಂತಿ-ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿನ ಎಲ್ಲಾ ರೌಡಿಗಳನ್ನು ವಿಭಾಗವಾರು ಕರೆಸಿ ವಿಚಾರಣೆಗೊಳಪಡಿಸಿ ಎಚ್ಚರಿಕೆ ನೀಡಿದ್ದಾರೆ..
ಕೊರೊನಾ ಹಿನ್ನೆಲೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣಾ ಅಧಿಕಾರಿಗಳು ಮೂರು ವಿಭಾಗದ ಮೂಲಕ ರೌಡಿಗಳನ್ನು ಠಾಣೆ ಕರೆಸಿ ಇತ್ತೀಚಿನ ಅವರ ನಂತರದ ದಿನಗಳ ವರ್ತನೆ, ದಿನಚರಿ, ಕಾರ್ಯವೈಖರಿ ಬಗ್ಗೆ ಮಾಹಿತಿ
ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಇಂದು ಶಿವಮೊಗ್ಗದ ಈ ಠಾಣಾ ವ್ಯಾಪ್ತಿಯಲ್ಲಿ 52 ರೌಡಿಗಳನ್ನು ಕರೆಸಿ ವಿಚಾರಿಸಲಾಯಿತು. ಈ ಸಂದರ್ಭದಲ್ಲಿ ಡಿಎಸ್ಪಿ ಉಮೇಶ್ ಚಂದ್ರ ಈಶ್ವರ್, ಸರ್ಕಲ್ ಇನ್ಸ್ ಸ್ಪೆಕ್ಟರ್ ವಸಂತಕುಮಾರ್ , ಸಬ್ ಇನ್ಸ್ಪೆಕ್ಟರ್ ಎಂ. ವೈ. ಶಂಕರಮೂರ್ತಿ ಹಾಗೂ ಇತರರು ಮೊದಲನೇ ಹಂತದ ರೌಡಿಗಳನ್ನು ವಿಚಾರಿಸಿದರು. ಶಾಂತಿ ಸುವ್ಯವಸ್ಥೆ ಕಾಪಾಡಲು ಸೂಚಿಸಿದರು.