ಶಿವಮೊಗ್ಗ, ಆ.10:
ಕೊರೋನ ಸಂಕಷ್ಟ ಸಮಯದಲ್ಲಿ ಭದ್ರಾವತಿಯ ವಿ ಐ ಎಸ್ ಎಲ್ ನ ನಿವೃತ್ತ ಕಾರ್ಮಿಕರಿಗೆ ಆಸರೆಯಾದ ಸಂಸದರು ಬಿ. ವೈ. ರಾಘವೇಂದ್ರ ಅವರು ನಿವೃತ್ತ ನೌಕರರ ಮನೆ ಬಾಡಿಗೆಯನ್ನು ಶೇಕಡ ನೂರರಷ್ಟು ಹೆಚ್ಚಿಸಿರುವ ಕ್ರಮವನ್ನು ವಿರೋಧಿಸಿ ಮಾನ್ಯ ಸಂಸದರು ಇಂದು ವಿ ಐ ಎಸ್ ಎಲ್ ನ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಕೆ ಎಲ್ ರಾವ್ ರವರನ್ನು ಭೇಟಿ ಮಾಡಿ ಹೆಚ್ಚಿಸಿರುವ ಮನೆ ಬಾಡಿಗೆಯನ್ನು ಶೇಕಡಾ 50 ಇಳಿಸಲು ಕೋರಿದ್ದು ಫಲಪ್ರಧವಾಗಿದೆ. ಶೇ. 50 ರಷ್ಟು ಬಾಡಿಗೆ ಕಡಿಮೆ ಮಾಡಲು ನಿರ್ಧರಿಸಲಾಗಿದೆ.
ಇದೇ ಸಂದರ್ಭದಲ್ಲಿ ಹಾಜರಿದ್ದ ಕಾರ್ಮಿಕ ಮುಖಂಡರೊಂದಿಗೆ ಅನೌಪಚಾರಿಕವಾಗಿ ಮಾತನಾಡುತ್ತಾ, ವಿ ಐ ಎಸ್ ಎಲ್ ಗೆ ತಕ್ಷಣಕ್ಕೆ ಅಗತ್ಯವಿರುವ ಸುಮಾರು 20 ಕೋಟಿ ಬಂಡವಾಳದ ಬಗ್ಗೆ ಈಗಾಗಲೇ ಸೈಲ್ ನ ಚೇರ್ಮನ್ ಬಳಿ ಮಾತನಾಡಿರುವುದು, ಹಾಗೆ ಎಂಪಿಎಂ ನ ಪುನರುಜ್ಜೀವನದ ಬಗ್ಗೆ ಖಾಸಗಿ ಕಂಪನಿಯವರ ಸಹಭಾಗಿತ್ವದಲ್ಲಿ ಪುನರಾರಂಭ ಮಾಡುವ ಚರ್ಚೆ ಪ್ರಾರಂಭಿಸಿರುವುದು, ಸುಮಾರು 3500 ಕಬ್ಬು ಬೆಳೆಗಾರರಿಗೆ ಸಹಾಯವಾಗುವ ನಿಟ್ಟಿನಲ್ಲಿ 2010 -11 ರ ಪ್ರತಿ ಟನ್ ಗೆ ಹೆಚ್ಚುವರಿ ನೂರು ರೂಪಾಯಿಗಳನ್ನು ಕೊಡಿಸುವ ಪ್ರಸ್ತಾವನೆ ಈಗಾಗಲೇ ಅಂತಿಮಗೊಂಡಿರುವ ವಿಷಯ, ಎಂಪಿಎಂ ನ ಕಾರ್ಮಿಕರ ಎಲ್ಲಾ ಸಮಸ್ಯೆಗಳ ಪರಿಹಾರಕ್ಕೆ ಇನ್ನು ಕೆಲವೇ ದಿನಗಳಲ್ಲಿ ಪರಿಹಾರ ದೊರಕಿಸಿಕೊಡುವ ಪ್ರಯತ್ನಗಳ ವಿಷಯವನ್ನು ಗಮನಕ್ಕೆ ತಂದರು.
ನೆರೆದಿದ್ದ ಎಲ್ಲಾ ಕಾರ್ಮಿಕ ಮುಖಂಡರುಗಳು ಈ ಕರೋನಾ ಸಂಕಷ್ಟ ಸಮಯದಲ್ಲಿ ಭದ್ರಾವತಿಗೆ ಆಗಮಿಸಿ ನಿವೃತ್ತ ಕಾರ್ಮಿಕರ ಅಳಲನ್ನು ಸರಿ ಪಡಿಸಿದ್ದಕ್ಕಾಗಿ ಧನ್ಯವಾದಗಳನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮುಖ್ಯ ವ್ಯವಸ್ಥಾಪಕರಾದ ವಿಶ್ವನಾಥ್, ನಿವೃತ್ತ ಕಾರ್ಮಿಕ ಮುಖಂಡರುಗಳಾದ ಹನುಮಂತರಾವ್ ರಾಮಲಿಂಗಯ್ಯ, ನರಸಿಂಹಮೂರ್ತಿ, ಎಸ್ ಎನ್ ಬಾಲಕೃಷ್ಣ, ಚಂದ್ರಹಾಸ್, ಜಗದೀಶ್, ಅಮೃತ್ ಬಿಜೆಪಿ ಮುಖಂಡರುಗಳಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮ ಪ್ರಸಾದ್, ಮಂಡಲ ಅಧ್ಯಕ್ಷರು ಪ್ರಭಾಕರ್, ಕದಿರೇಶ್, ಮಂಗೋಟೆ ರುದ್ರೇಶ್ ಮಂಜುನಾಥ್ ಕದಿರೇಶ್ ಹಾಜರಿದ್ದರು.