ಶಿವಮೊಗ್ಗ, ಆ.09:
ಶಿವಮೊಗ್ಗ ಕೋವಿಡ್ ಚೆಕ್ ಮಾಡಿಸಿಕೊಂಡ ಕೇವಲ 410 ಜನರಿಗಷ್ಟೆ ನೆಗಿಟೀವ್ ಬಂದಿದ್ದು ಉಳಿದವರಿಗೆಲ್ಲಾ ಪಾಸೀಟೀವ್ ಬಂದಿದೆ. ಅದೂ ಹೇಳಿಕೇಳಿ 210 ಜನರಿಗೆ ಪಾಸಿಟೀವ್ ಬಂದಿದೆ. ಅದರಲ್ಲೂ ಶಿವಮೊಗ್ಗ ನಗರ ಸಂಪೂರ್ಣಮಯವಾಗ ಹೊರಟಿದೆ.
ಇಂದು ಕೊರೊನಾ ಪರೀಕ್ಷೆ ಮಾಡಿಸಿಕೊಂಡ 743ಜನರಲ್ಲಿ 210 ಜನರಿಗೆ ಪಾಸಿಟೀವ್ ಬಂದಿರುವುದು ಭಯದ ವಾತಾವರಣ ಮೂಡಿಸಿದೆ.
ಶಿವಮೊಗ್ಗ ಜಿಲ್ಲೆಯ ಕೊರೊನಾ ಸಾವಿನ ಕಂಟಕಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಂದು ಸಹ ಮತ್ತೆ ಮೂವರು ಸಾವು ಕಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು, ನಿಧನ ಹೊಂದಿದವರ ಸಂಖ್ಯೆ 62 ಬಂದಿರುವುದು ಆತಂಕದ ಸಂಗತಿ.
ಇಂದಿನ ಈ ಜಿಲ್ಲಾ ವರದಿಯಲ್ಲಿ ಶಿವಮೊಗ ಜಿಲ್ಲೆಯಲ್ಲಿ 210 ಜನರಿಗೆ ಸೊಂಕು ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ರಾಜ್ಯ ವರದಿಯಲ್ಲಿ ಇಂದಿನ ಸಂಖ್ಯೆ ಎಂದಿನಂತೆ ವ್ಯತ್ಯಾಸವಾಗಿದೆ.
ಇದು ಜನಸಾಮಾನ್ಯರಿಗಿಂತ ಹೆಚ್ಚು ಅನ್ಯರಿಗೆ ಅಂದರೆ ಇತರೆ ಕಾಯಿಲೆ ಹೊಂದಿದವರು, ಸ್ಥಿತಿವಂತರು, ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು, ನೌಕರರನ್ನೆ ಕಾಡುತ್ತಿದೆ. ಇದು ನಮ್ಮ ಇಂದಿನ ವ್ಯವಸ್ಥೆಯ ಬುಡಗಳಿಗೆ ಟಾರ್ಗೇಟ್ ಮಾಡುತ್ತಿರುವುದು ಆತಂಕಕಾರಿ.
ಇಂದು ಸಂಜೆ ಹೊರಬಿದ್ದ ಶಿವಮೊಗ್ಗ ಕೋವಿಡ್-19 ವರದಿಯಲ್ಲಿ 410ನೆಗಿಟೀವ್ ಇದ್ದರೆ 210 ಪಾಸಿಟಿವ್ ಬಂದಿದೆ.
ಭಯ ಬರಲು ಕಾರಣ ಎಲ್ಲೆಡೆ ಕೊರೊನಾ ಕಂಟಕ ಕಾಣುತ್ತಿರುವುದು ಎನ್ನಲಾಗಿದೆ.
ಇವತ್ತು 96 ಜನ ಡಿಸ್ಚಾರ್ಜ್ ಆಗಿದ್ದರೂ ಸಹ 3057 ಸೋಂಕಿತರಲ್ಲಿ 1827 ಜನ ಗುಣಮುಖರಾಗಿದ್ದಾರೆ.
ಇಂದಿನ ಈ ವರದಿಯಲ್ಲಿ ಶಿವಮೊಗ್ಗದಲ್ಲಿ ರಾಕ್ಷಸ ಕಳೆಯೆಂಬಂತೆ 138, ಶಿಕಾರಿಪುರದಲ್ಲಿ 11, ಭದ್ರಾವತಿಯಲ್ಲಿ ಇವತ್ತೂ 33, ಸಾಗರದಲ್ಲಿ 01, ಹೊಸನಗರ 09, ತೀರ್ಥಹಳ್ಳಿಯಲ್ಲಿ 04,ಸೊರಬ 03, ಪ್ರಕರಣಗಳು ಪತ್ತೆಯಾಗಿವೆ. ಹೊರಜಿಲ್ಲೆಯ 11 ಪ್ರಕರಣಗಳು ಪತ್ತೆಯಾಗಿವೆ.
ಇಂದಿನವರೆಗೆ ಸಾವು ಕಂಡವರ ಸಂಖ್ಯೆ 62 ಆಗಿದ್ದು, ಅದರ ಸಂಖ್ಯೆ ಹೆಚ್ಚಾಗುತ್ತಿದೆ
ದಿನೇ ದಿನೇ ಸಾವಿನ ಸಂಖ್ಯೆ ಶಿವಮೊಗ್ಗದಲ್ಲಿ ಹೆಚ್ಚುತ್ತಿರುವುದು ಭಯ ಹುಟ್ಟಿಸಿದೆ.
ನಮ್ಮ ಜಾಗೃತೆ ಮಾತ್ರ ನಮ್ದಾಗಿದೆ. ಯಾರನ್ನೂ ನಂಬುವಂತಿಲ್ಲ. ಸರ್ಕಾರದ ಆಸರೆ ಹಣದ ಜೊತೆಗಿರುವಂತಿದೆ.

  • ತುಂಗಾತರಂಗ ದಿನಪತ್ರಿಕೆ

ನಮ್ಮದು, ಜಾಗೃತೆ ನಿಮ್ಮದು. ನಿಮ್ಮ ಜೊತೆ ತುಂಗಾತರಂಗ ಸದಾ ಶಕ್ತಿಯಾಗಿ ಇರುತ್ತೆ.

By admin

ನಿಮ್ಮದೊಂದು ಉತ್ತರ

You missed

error: Content is protected !!