Tunga Taranga | April, 06, 2022 | Shivamoga, Koteganugu News

ಶಿವಮೊಗ್ಗ : ನಗರ ಸಮೀಪದ ಕೋಟೆಗಂಗೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕೆಂದು ಸ್ತ್ರೀ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಗ್ರಾಮಸ್ಥರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.


ಗ್ರಾಮದಲ್ಲಿ ಎಎನ್‌ಎಂ ಇಲ್ಲದೆ ಸುತ್ತಮುತ್ತಲ ಹಳ್ಳಿಗಳಲ್ಲಿ ಮಕ್ಕಳು, ಮಹಿಳೆಯರು, ಗರ್ಭಿಣಿ ಸ್ತ್ರೀಯರಿಗೆ ಸಾಮಾನ್ಯ ಆರೈಕೆಗೆ ಸಮಸ್ಯೆಯಾಗಿದೆ. ಏನೇ ತೊಂದರೆಯಾದರೂ ಶಿವಮೊಗ್ಗ ನಗರಕ್ಕೆ ಅವರನ್ನು ಕರೆದುಕೊಂಡು ಹೋಗಬೇಕಾದ ಅನಿವಾರ್ಯತೆ ಇದೆ. ಗ್ರಾಮದಲ್ಲಿ ಆಸ್ಪತ್ರೆ ಮತ್ತು ವಸತಿ ಗೃಹವಿದ್ದರೂ ಅವು ಖಾಲಿ ಇವೆ. ಗ್ರಾಮಪಂಚಾಯಿತಿಗೆ ಈ ಬಗ್ಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಆರೋಗ್ಯ ಇಲಾಖೆಗೂ ಮನವಿ ಸಲ್ಲಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.


ಕೋಟೆಗಂಗೂರಿಗೆ ದಿನಕ್ಕೆ ಎರಡು ಬಾರಿ ಸರಕಾರಿ ಸಾರಿಗೆ ಬಸ್ ಸಂಚರಿಸುತ್ತದೆ. ಶಾಲಾ ವೇಳೆಯಲ್ಲಿ ಪ್ರತಿನಿತ್ಯ ಸಂಚರಿಸುವ ಈ ಬಸ್ ರಜಾದಿನಗಳಲ್ಲಿ ಬರುವುದೇ ಇಲ್ಲ. ಇದರಿಂದ ಗ್ರಾಮಸ್ಥರು ಸಾರಿಗೆ ಸೌಕರ್ಯದಿಂದ ವಂಚನೆಗೊಳಗಾಗಲಿದ್ದಾರೆ. ಆದ್ದರಿಂದ ಪ್ರತಿದಿನವೂ ಸಾರಿಗೆ ಸೌಕರ್ಯ ಕಲ್ಪಿಸಬೇಕೆಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ. ಗ್ರಾಮದಲ್ಲಿಯೇ ರೈಲು ಸಂಚಾರವಿದ್ದರೂ ಯಾವ ರೈಲುಗಾಡಿಗಳು ನಿಲುಗಡೆ ಇರುವುದಿಲ್ಲ ಇನ್ನು ಮುಂದೆ ರೈಲ್ವೆ ನಿಲುಗಡೆ ವ್ಯವಸ್ಥೆ ಕಲ್ಪಿಸಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.


ಈ ಸಂದರ್ಭ ಆಶಾ ಡಿಮೆಲ್ಲೊ, ಸರಸ್ವತಿ,ಬೇಬಿ,ಸುಮಿತ್ರ,ಸಂಗೀತ, ಅಶ್ವಿನಿ, ಮಂಗಳಗೌರಿ ,ಮಂಜುಳ ಮತ್ತಿತರರು ಹಾಜರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!