Tunga Taranga | April, 06, 2022 | Badravathi News

ಭದ್ರಾವತಿ ಹಳೆನಗರ ಪೊಲೀಸ್ ಠಾಣೆಯಲ್ಲಿ ಹಿಂದೂ ಸಮಾಜದ ಮುಖಂಡರಿಗೆ ಬೆದರಿಕೆ ಒಡ್ಡಿರುವ ಆರೋಪದ ಮೇರೆಗೆ ಮಾಜಿ ಕೇಂದ್ರ ಸಚಿವ ಸಿ.ಎಂ. ಇಬ್ರಾಹಿಂ ಅವರ ಸಹೋದರ ಸಿ.ಎಂ. ಖಾದರ್ ವಿರುದ್ಧ ದೂರು ದಾಖಲಾಗಿದೆ.


ಹಿಂದೂ ಸಮಾಜದ ಮುಖಂಡರಿಗೆ ಬೆದರಿಕೆ ಒಡ್ಡಿರುವುದರ ಜೊತೆಗೆ ಸಮಾಜಕ್ಕೆ ನೋವುಂಟು ಮಾಡುವ, ಆ ಮೂಲಕ ಅವರ ಭಾವನೆಗೆ ಧಕ್ಕೆ ತಂದಿರುವ ಆರೋಪದಡಿ ಬಜರಂಗದಳ ಮುಖಂಡ ಹೊಸಮನೆ ವಡಿವೇಲು ಅವರು ಖಾದರ್ ವಿರುದ್ಧ ದೂರು ದಾಖಲಿಸಿದ್ದಾರೆ.


ದೂರಿನಲ್ಲೇನಿದೆ
ಹಲಾಲ್ ಹಾಗೂ ಜಟ್ಕಾ ಕಟ್ ವಿವಾದ ಸಂಬಂಧ ಖಾಸಗಿ ನ್ಯೂಸ್ ಚಾನಲ್ ಒಂದರಲ್ಲಿ ಕಾರ್ಯಕ್ರಮ ಪ್ರಸಾರ ಆಗುತ್ತಿದ್ದಾಗ ಅದರಲ್ಲಿ ಮಾತನಾಡುತ್ತಿದ್ದ ವ್ಯಕ್ತಿಯ ಫೋಟೊ ಹಾಕಿ, ಕೆಳಗೆ ’ಹಲಾಲ್ ಮಾಡುವುದೇ… ಇದಕ್ಕಾಗಿ’ ಎಂದು ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ. ಹಿಂದೂ ಯುವಕರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಾಚ್ಯ ಶಬ್ದ ಬಳಸಿ ಸಾಮಾಜಿಕ ಆಶಾಂತಿ ಉಂಟುಮಾಡುವ ಪ್ರಯತ್ನವನ್ನು ಸಿ.ಎಂ. ಖಾದರ್ ಮಾಡಿದ್ದಾರೆ’ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

By admin

ನಿಮ್ಮದೊಂದು ಉತ್ತರ

You missed

error: Content is protected !!