ಶಿವಮೊಗ್ಗ: ಲಿಂಗತ್ವಅಲ್ಪಸಂಖ್ಯಾತ ಸಮುದಾಯವನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಕೆಲಸ ಆಗಬೇಕು ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿ ಎಚ್.ಎಂ.ಸುರೇಶ್ ಹೇಳಿದರು.
ಶಿವಮೊಗ್ಗ ನಗರದ ಶ್ರೀ ಕಲಾ ತರಬೇತಿ ಕೇಂದ್ರದ ಸಭಾಂಗಣದಲ್ಲಿ ಜಿಲ್ಲಾಕೌಶಲ್ಯಅಭಿವೃದ್ಧಿ ಇಲಾಖೆ ಮತ್ತುರಕ್ಷಾ ಸಮುದಾಯ ಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಜಿಲ್ಲೆಯಲ್ಲಿರುವ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಜನರಿಗೆ ಕಾನೂನು ಅರಿವು ಮೂಡಿಸುವ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲಿಂಗತ್ವಅಲ್ಪಸಂಖ್ಯಾತರು ಸಮಾಜದ ಸಂಘಟನೆಯಾದ ರಕ್ಷಾ ಸಂಘದ ಜತೆಯಲ್ಲಿ ಉತ್ತಮ ಭಾಂದವ್ಯ ಹೊಂದಬೇಕು. ಸಂಘಟನೆಯೊಂದಿಗೆ ಉತ್ತಮವಾಗಿ ಕೆಲಸ ಮಾಡಬೇಕು.ಸರ್ಕಾರದ ಮನಸ್ವಿನಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಂಡುಉತ್ತಮಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೌಶಲ್ಯಅಭಿವೃದ್ಧಿಇಲಾಖೆಯರಾಷ್ಟ್ರೀಯಜೀವನೋಪಾಯ ವಿಭಾಗದ ಮಿಷನ್ ಮ್ಯಾನೇಜರ್‌ಸಮನ್ವಯ ಕಾಶಿ ಮಾತನಾಡಿ, ಲಿಂಗತ್ವಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಶೈಕ್ಷಣಿಕ ಹಂತದಿಂದಲೇ ಅರಿವು ಮೂಡಿಸುವ ಕಾರ್ಯ ಆಗಬೇಕು. ಪಠ್ಯಕ್ರಮದ ಮುಖಾಂತರ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು ಎಂದು ಹೇಳಿದರು.
ಲಿಂಗತ್ವಅಲ್ಪಸಂಖ್ಯಾತ ಸಮುದಾಯದವರುಜೀವನದ ಪ್ರಮುಖ ಘಟ್ಟಗಳಲ್ಲಿ ಎಲ್ಲರಿಂದಲೂದೂರಆಗುವಂತಹ ವಾತಾವರಣ ಸಮಾಜದಲ್ಲಿದೆ. ಪಾಲಕರು, ಶಿಕ್ಷಕರು ಹಾಗೂ ಸ್ನೇಹಿತರಿಂದಲೂ ದೂರ ಆಗುತ್ತಾರೆ. ಎಲ್ಲರಿಂದ ದೂರ ಆಗುವುದರಿಂದ ಕೀಳರಿಮೆ ಮೂಡುತ್ತದೆ.ಆದ್ದರಿಂದ ವಿದ್ಯಾರ್ಥಿ ಹಂತದಿಂದಲೇ ಲಿಂಗತ್ವಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಅರಿವು ಇದ್ದಲ್ಲಿ ಅವರಲ್ಲಿನ ಕೀಳರಿಮೆ ಹೋಗಲಾಡಿಸಬಹುದಾಗಿದೆ.ಅವರು ಕೂಡ ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು ಎಂದು ತಿಳಿಸಿದರು.
ಸೂಡಾ ಸದಸ್ಯದೇವರಾಜ್ ಮಂಡೇನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದ ಜನರಿಗಾಗಿ ಹೋರಾಟ ನಡೆಸುತ್ತಿರುವ ರಾಜರತ್ನಂ ಅವರು ಲಿಂಗತ್ವ ಸಮುದಾಯದ ಜನರಿಗೆ ಇರುವ ಕಾನೂನುಗಳ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.
ರಕ್ಷಾ ಸಮುದಾಯ ಸಂಘಟನೆಯಅಧ್ಯಕ್ಷ ಪ್ಯಾರೂ, ಅಭಯಧಾಮ ಸಿಬಿಐನ ಪಿಡಿಒಜಯಲಕ್ಷ್ಮೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕುಮಾರಿ ರಮ್ಯಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗೇಂದ್ರ, ಚಾಣಕ್ಯ ಸಂಸ್ಥೆಯ ಅಧ್ಯಕ್ಷ ನಾರಾಯಣ್ ಉಪಸ್ಥಿತರಿದ್ದರು. ಲಕ್ಷ್ಮೀ ಕಾರ್ಯಕ್ರಮದ ನಿರೂಪಣೆ ಮಾಡಿದರು.