ಶಿವಮೊಗ್ಗ,ಮಾ.23:
ಇಲ್ಲಿನ ವಿಧಾನಪರಿಷತ್ ಶಾಸಕ ಡಿ.ಎಸ್. ಅರುಣ್ ಅವರಿಗೆ ದೂರವಾಣಿ ಮೂಲಕ ಮುಸ್ಲಿಂ ಎಂದು ಹೇಳಿ ಅಸಬ್ಯವಾಗಿ ನಿಂಧಿಸುವ ಜೊತೆ ಇಡೀ ಕುಟುಂಬಕ್ಕೆ ಜೀವಬೆದರಿಕೆ ಹಾಕಿದ್ದವ ಬೇರೆ ಯಾರೂ ಅಲ್ಲ. ಆತನೊಬ್ಬ ಹಿಂದೂ. ಅವನ ಹೆಸರು ಶ್ರೀಕಾಂತ್..!


ಇಂತಹದೊಂದು ಮಾಹಿತಿ ಈಗಷ್ಟೆ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆ ಗೋಕಾಕ್ ತಾಲ್ಲೂಕಿನ ಶಿಂದಿ ಕುರಾಬೆಟ್ ಗ್ರಾಮದ ಈ ಶ್ರೀಕಾಂತ ಈಗ ಬಾಗಲಕೋಟೆ ಪೊಲೀಸರಿಗೆ ಸಿಕ್ಕಿಬಿದ್ದು ತಪ್ಪು ಒಪ್ಪಿಕೊಂಡಿದ್ದಾನೆನ್ನಲಾಗಿದೆ.
ಶಿವಮೊಗ್ಗ ಬಜರಂಗದಳದ ಹರ್ಷ ಕೊಲೆ ನಂತರ ಅರುಣ್ ಅವರಿಗೆ ಕಾಲ್ ಮಾಡಿದ್ದ ಶ್ರೀಕಾಂತ ಯಾರು, ಆತ ಯಾವ ಸಂಘಟನೆಯಲ್ಲಿದ್ದಾನೆ ಎಂಬುದನ್ನು ಪತ್ತೆ ಹಚ್ಚಲು ಪೊಲೀಸರು ಮುಂದಾಗಿದ್ದಾರೆನ್ನಲಾಗಿದೆ.
ರಾಜಕಾರಣಿ ಎಂಬುದಕ್ಕಿಂತ ಯುವ ಪಡೆಯ ಜೊತೆ ಸಾಂಸ್ಕೃತಿಕ, ಕಲಾತ್ಮಕತೆ, ಕ್ರೀಡೆ, ವಾಣಿಜ್ಯ, ಉದ್ಯಮದ ಜೊತೆ ಗುರುತಿಕೊಂಡು ಬೆಳೆದು ಈಗ ವಿಧಾನಪರಿಷತ್ ಶಾಸಕರಾದ ಡಿಎಸ್ ಅರುಣ್ ಶತೃಗಳನ್ನು ಸೃಷ್ಟಿಸಿಕೊಳ್ಳದಂತಹವರು. ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅವರನ್ನು ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಿಸಿ ಸಂಪುಟದರ್ಜೆ ಸ್ಥಾನ ನೀಡಿತ್ತು.


ಅಂತಹವರಿಗೆ ಪಾಪಿಷ್ಟ ಮನಸಿನ ವ್ಯಕ್ತಿಯೊಬ್ಬ ಅಸಭ್ಯ ಹಾಗೂ ಅಶ್ಲೀಲವಾಗಿ ಭೆದರಿಕೆ ಕರೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಅರುಣ್ ಅವರ ಆಪ್ತ ಸಹಾಯಕ ವಾಗೀಶ್ ಅವರು, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಭದ್ರತೆ ಒದಗಿಸುವಂತೆ ಕೋರಲಾಗಿದೆ. ಅಲ್ಲದೇ, ಸಿಇಎನ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿತ್ತು.
ಇಂತಹದೊಂದು ದೂರು ಶಿವಮೊಗ್ಗ ಸಿಎನ್ಎನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.


ಅರುಣ್ ಅವರಿಗೆ ಫೆ.21 ರಂದು ಮುಸ್ತಾಕ್ ಅಲಿ ಎಂಬಾತ ಬೆದರಿಕೆ ಕರೆ ಮಾಡಿದ್ದನು ಹಾಗೂ
ಸಾಮಾಜಿಕ ಜಾಲತಾಣದಲ್ಲಿ ಮುಸ್ತಾಕ್ ಅಲಿ ಹೆಸರಿನಲ್ಲಿ ಬೆದರಿಕೆ ಪೋಸ್ಟ್ ಹಾಕಿದ್ದನು. ಕಾಲ್ ಮಾಡಿ ನಿಮ್ಮ ತಲೆಯಲ್ಲಿ ಇಂದು ಒಬ್ಬ ಹಿಂದೂ ಕಾರ್ಯಕರ್ತ ಸತ್ತಿದ್ದಾನೆ ಅಷ್ಟೆ. ಆದರೆ ಮುಂದಿನ ದಿನ ನಿಮ್ಮ ಹೆಂಡಿರು-ಮಕ್ಕಳೇ ನಮ್ಮ ಟಾರ್ಗೆಟ್ ನೆನಪಿಡಿ. ಷಂಡ ಸರ್ಕಾರದ ಭಂಡರಂತೆ ವರ್ತಿಸುವ ಪ್ರಚಂಡರೇ ಎಂದು ಬೆದರಿಕೆ ಹಾಕಿದ್ದಾನೆ ಎಂದು ದೂರು ದಾಖಲಾಗಿತ್ತು.

By admin

ನಿಮ್ಮದೊಂದು ಉತ್ತರ

You missed

error: Content is protected !!