ಶಿವಮೊಗ್ಗ ಕೋಟೆ ಮಾರಿಕಾಂಬ ಜಾತ್ರೆ ಆರಂಭಕ್ಕೆ ಕ್ಷಣಗಣನೆ, ಅಮ್ಮನ ದರುಶನಕ್ಕೆ ವ್ಯವಸ್ಥಿತ ತಂತ್ರ ಹೇಗಿದೆ ನೋಡಿ
ಶಿವಮೊಗ್ಗ, ಮಾ.22:
ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ಜಾತ್ರೆಗೆ ಸಕಲಸಿದ್ದತೆಗಳಾಗಿದ್ದು, ಜಾತ್ರೆ ಹಾಗೂ ಅಮ್ಮನವರ ಪೂಜೆ ಈಗಷ್ಟೇ ಆರಂಭಗೊಳ್ಳಲಿದೆ.
ಮಾ.22ರ ಇಂದು ಬೆಳಿಗ್ಗೆ ಏಳುಗಂಟೆಗೆ ಗಾಂಧಿಬಜಾರಿನ ಪೂಜೆ ಆರಂಭಕ್ಕೆ ಅಪಾರ ಭಕ್ತಸಮೋಹ ಕಾಯುತ್ತಿದೆ.
ಕೋಟೆ ಮಾರಿಕಾಂಬ ಸೇವಾಸಮಿತಿ ಮಹಾನಗರಪಾಲಿಕೆ, ರಕ್ಷಣಾ ಇಲಾಖೆ, ಜಿಲ್ಲಾಡಳಿತದ ನೆರವಿನೊಂದಿಗೆ ಪ್ರತಿ ಭಕ್ತರು ಅತ್ಯಂತ ವ್ಯವಸ್ಥಿತವಾಗಿ ಅಮ್ಮನ ದರುಶನ ಪಡೆಯಲು, ಜಾತ್ರೆಯಲ್ಲಿ ಸಂಚರಿಸಲು, ಅಮ್ಮನವರ ಪ್ರಸಾದ ಪಡೆಯಲು ಸಕಲ ವ್ಯವಸ್ಥೆ ಮಾಡಿದೆ.
ಪ್ರತಿ ಎರಡು ವರುಷಕ್ಕೊಮ್ಮೆ ಊರ ದೇವಿಯ ಈ ಜಾತ್ರೆಯಲ್ಲಿ ಯಾವುದೇ ತೊಂದರೆಯಿಲ್ಲದೇ, ಭಕ್ತರು ಮುಕ್ತವಾಗಿ ಅಮ್ಮನವರಿಗೆ ಹರಕೆ ಒಪ್ಪಿಸಲು ಹಾಗೂ ಅಮ್ಮನ ಸನ್ನಿದಿಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಈ ಬಾರೀ ಇನ್ನಷ್ಟು ವಿಶೇಷವಾಗಿ ಗಾಂಧಿಬಜಾರ್ ಹಾಗೂ ಕೋಟೆ ಮಾರಿಕಾಂಬ ಸನ್ನಿದಿಯಲ್ಲಿ ಒಳಾಂಗಣದ ರೂಟ್ ಮ್ಯಾಪ್ ಸಿದ್ದಪಡಿಸಿದೆ. ಸಮಿತಿಯೇ ಮುಂದೆ ನಿಂತು ಈ ಜವಾಬ್ಧಾರಿ ಕೆಲಸ ಮಾಡಿದ್ದು ವೃದ್ದರು, ಮಹಿಳೆಯರಿಗೆ ವಿಶೇಷ ಅವಕಾಶ ನೀಡಿದೆ.
Shimoga/ ಮಾರಿಕಾಂಬ ಜಾತ್ರೆ ಪ್ರಯಕ್ತ ಸಿಟಿ ರೂಟ್ ಮ್ಯಾಪ್ ಹೀಗಿದೆ ನೋಡಿ…, ಬಹಳಷ್ಟು ರಸ್ತೆಗಳಿಗೆ ಬ್ರೇಕ್ https://tungataranga.com/?p=9487
ಜಾತ್ರೆಯ ಈ ಐದೂ ದಿನ ವಿವಿಧ ಸಮುದಾಯದ ಪೂಜೆಗಳು ನಡೆಸಲು ಕ್ರಮ ಕೈಗೊಳ್ಳಲಾಗಿದೆ. ಅಂತೆಯೇ ಮಾ. 26ರ ಶನಿವಾರ ರಾತ್ರಿ ಎಂಟಕ್ಕೆ ರಾಜಬೀದಿ ಉತ್ಸವದೊಂದಿಗೆ ವನ ಪ್ರವೇಶಿಸಲಿರುವ ಅಮ್ಮನ ಪೂಜೆಯ ಪ್ರತಿಕ್ಷಣದ ಆರಾಧನೆ ನಡೆಯುವವರೆಗೂ ಶಿವಮೊಗ್ಗ ನಗರದ ರೂಟ್ ಮ್ಯಾಪ್ ಬದಲಿಸಲಾಗಿದೆ.