ಶಿವಮೊಗ್ಗ, ಮಾ.18:
ಶಿವಮೊಗ್ಗ ಜಿಲ್ಲೆಯ ಜನರ ಹಿತಾಕಾಂಕ್ಷೆ ಕಾಪಾಡುವ ಜೊತೆ ಭದ್ರತೆ ಕಾಪಾಡಲು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಅವರ ಜಿಲ್ಲಾಡಳಿತ ಸಕಲ ವ್ಯವಸ್ಥೆ ಮಾಡಿದ್ದು ನಿಷೇದಾಜ್ಣೆ ಎಂದಿನಂತೆ ಮಾ. 21ರ ತನಕ ಮುಂದುವರೆದಿದೆ.
ಕೆಲ ಅನ್ಯ ಕಲಹಗಳನ್ನು ತಪ್ಪಿಸಲು ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಕಷ್ಡು ರಕ್ಷಣಾ ವ್ಯವಸ್ಥೆಯನ್ನು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರ ತಂಡ ಮಾಡಿದೆ.
ಇದರ ನಡುವೆ ಜಿಲ್ಲಾಧಿಕಾರಿಗಳ ಆದೇಶದನುಸಾರ ಅಬಕಾರಿ ಇಲಾಖೆ ಜಿಲ್ಲಾಧಿಕಾರಿಗಳು ಶಿವಮೊಗ್ಗ, ಭದ್ರಾವತಿ ನಗರ ಸೇರಿದಂತೆ ಬಹಳಷ್ಟು ಕಡೆ ಹೋಳಿ ಆಚರಣೆ ಹಿನ್ನೆಲೆಯಲ್ಲಿ ಇಂದು ಹಾಗೂ ನಾಳೆ ಬೆಳಿಗ್ಗಯಿಂದ ಸಂಜೆ ಐದರವರೆಗೆ ಮದ್ಯಮಾರಾಟವನ್ನು ಸಂಪೂರ್ಣ ನಿಷೇದಿಸಲು ಸೂಚಿಸಿದ್ದಾರೆ.
ಅಂತೆಯೆ ಈ ಎರಡೂ ದಿನ ಬಾರ್ ಅಂಡ್ ರೆಸ್ಟೋರೆಂಟ್ ಗಳು ಸಂಜೆ ಐದರಿಂದ ರಾತ್ರಿ ಹನ್ನೊಂದಿ ಮುವತ್ತರವರೆಗೆ ಹಾಗೂ ವೈನ್ ಸ್ಟೋರ್ ಗಳು ಸಂಜೆ ಐದರಿಂದ ರಾತ್ರಿ ಹತ್ತೂ ಮುವತ್ತರವರೆಗೆ ಕಾರ್ಯ ನಿರ್ವಹಿಸಲು ಸೂಚಿಸಿದ್ದಾರೆನ್ನಲಾಗಿದೆ.



