ಶಿವಮೊಗ್ಗ ನಗರದಲ್ಲಿ ಅಪ್ಪು ಅವರ ಜನ್ಮದಿನಾಚರಣೆಯನ್ನು ಯುವ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದರು.
ನಗರದ ಸೋಮಿನಕೊಪ್ಪದಲ್ಲಿ ಪುನೀತ್ ಕಟೌಟ್ ಗೆ ಹಾಲಿನ ಅಭಿಷೇಕ ಹಾಗೂ ಕೇಕ್ ಕಟ್ ಮಾಡುವ ಮೂಲಕ ಜನ್ಮದಿನಾಚರಣೆ ಆಚರಿಸಿದರೆ, ಕಾಶಿಪುರ ಗೇಟ್ ನಲ್ಲಿ ಬಿರಿಯಾನಿ ಹಂಚುವ ಮೂಲಕ ಆಚರಿಸಿದರು.
ಪುನೀತ್ ನಿಮಗೆ ಸಾವಿಲ್ಲ… ಅಭಿಮಾನಿಗಳ ಉಸಿರಲ್ಲಿ ಎಂದಿಗೂ ನೀವು ಅಜರಾಮರ… ಅಪ್ಪು ಬಾಸ್ ಗೆ ಜೈ ಎಂಬ ವಿವಿಧ ಘೋಷಣೆಗಳ ಮೂಲಕ ಹರ್ಷೋದ್ಗಾರ ಪಟ್ಟರು.
ಲಕ್ಷ್ಮೀ ಟಾಕೀಸ್ ನಲ್ಲಿ ಲಾಠಿಚಾರ್ಜ್ :
ನಗರದ ಲಕ್ಷ್ಮೀ ಚಿತ್ರ ಮಂದಿರದಲ್ಲಿ ನಿನ್ನೆ ರಾತ್ರಿ ಜೇಮ್ಸ್ ಮೂವಿ ನೋಡುತ್ತಿದ್ದ ವೇಳೆ ಮೊದಲ ಹಾಡಿಗೆ ಡ್ಯಾನ್ ಮಾಡಲು ಹೋದ ಅಭಿಮಾನಿಗಳಿಗೆ ಲಾಠಿರುಚಿ ತೋರಿಸಿದ ಘಟನೆ ವರದಿಯಾಗಿದೆ.
ಈ ಸಂದರ್ಭದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಅಭಿಮಾನಿಗಳು ದಿಕ್ಕಾಪಾಲಾಗಿ ಓಡಿಹೋದರು. ಹಾಗೂ ಪೋಲಿಸರ ಈ ವರ್ತನೆ ಸರಿಯೇ ಎಂಬ ಮತುಗಳು ಸಿನೆಮಾ ನೋಡುತ್ತಿದ್ದ ಅಭಿಮಾನಿಗಳಲ್ಲಿ ಗುಸುಗುಡುತ್ತಿತ್ತು

