
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ಕನ್ನಡ ಜನಶಕ್ತಿ ಕೇಂದ್ರ
ಇವರ ಸಂಯುಕ್ತ ಆಶ್ರಯದಲ್ಲಿ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರ ಜನ್ಮಶತಮಾನೋತ್ಸವ ಕಾರ್ಯಕ್ರಮ ಮಾರ್ಚ್ 20ರಂದು ಸಂಜೆ 5 ಗಂಟೆಗೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ನಡೆಯಲಿದೆ ಎಂದು ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ. ಆರ್.ಎಂ.
ಮಂಜುನಾಥಗೌಡ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋಪಾಲಗೌಡರು ಕರ್ನಾಟಕ ಮಾತ್ರವಲ್ಲದೆ
ಭಾರತದಲ್ಲಿ ಹೆಸರಾದವರು. ಅವರ ಹೋರಾಟದ ಮನೋಭಾವ ಸ್ಫೂರ್ತಿದಾಯಕವಾದುದು. ಅವರು ಇಂದಿಗೂ
ಪ್ರಸ್ತುತರಾಗಿದ್ದಾರೆ. ಅವರ ಆದರ್ಶಗಳ ಅರಿವನ್ನು ವಿಸ್ತರಿಸುವುದು ಮತ್ತು ಅವರನ್ನ
ಮತ್ತೆ ಮತ್ತೆ ನೆನಪು ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ
ಸಾಂಸ್ಕೃತಿಕ ವೇದಿಕೆಯ ಸಹಕಾರದಲ್ಲಿ ಪಕ್ಷಾತೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ
ಎಂದರು.
ಕರ್ನಾಟಕ ಬಂದ್: ಸಾಗರದಲ್ಲಿ ವ್ಯಾಪಾರ ವಹಿವಾಟು ಬಂದ್ ಮಾಡುವ ಮೂಲಕ ಬೆಂಬಲ https://tungataranga.com/?p=9410
ಸಂಪೂರ್ಣ ಸುದ್ದಿ ಓದಲು ಮೇಲಿನ 👆 ಲಿಂಕ್ ಕ್ಲಿಕ್ ಮಾಡಿ
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ. 9448256183, 7483162573, tungataranga@gmail.com
ಗೋಪಾಲಗೌಡರು ಕೇವಲ ಗೇಣಿದಾರರ ಪರ ಮಾತ್ರ ಹೋರಾಟ ಮಾಡಿದವರಲ್ಲ. ರೈತರ, ಕೃಷಿ
ಕಾರ್ಮಿಕರ, ಮಹಿಳೆಯರ ಹೀಗೆ ದಮನಿತರ ಪರವಾಗಿ ಹೋರಾಟ ನಡೆಸಿದವರು. ಅವರ ಗೇಣಿದಾರರ
ಹೋರಾಟ ಇಂದಿಗೂ ಪ್ರಸ್ತುತವಾಗಿದೆ. ಅದೇ ಮಾದರಿಯ ಹೋರಾಟ ಬಗರ್ ಹುಕುಂ ಸಾಗುವಳಿದಾರರ
ಪರವಾಗಿ ನಡೆಯುತ್ತಿದೆ. ಇದಕ್ಕೆ ಸ್ಫೂರ್ತಿಯೇ ಗೋಪಾಲಗೌಡರಾಗಿದ್ದಾರೆ. ಬಗರ್ ಹುಕುಂ
ಸಮಸ್ಯೆ ಇಂದು ಬಹುವಾಗಿ ಕಾಡುತ್ತಿದೆ. ಕೇವಲ ೊಂದು ಗುಂಟೆ ಸಾಗುವಳಿ ಮಾಡಿದ ರೈತನನ್ನು
ಜೈಲಿಗೆ ಹಾಕುವ ಪರಿಸ್ಥಿತಿ ಬಂದಿದೆ. ಇಂತಹ ಸಂದರ್ಭದಲ್ಲಿ ಗೋಪಾಲಗೌಡರು
ವರ್ತಮಾನದಲ್ಲಿರುತ್ತಾರೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ. ಮಂಜುನಾಥ್ ಮಾತನಾಡಿ, ಮಾಜಿ
ಮಂತ್ರಿ ಸಮಾಜವಾದಿ ಕಾಗೋಡು ತಿಮ್ಮಪ್ಪ ಅವರು ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನ
ಉದ್ಘಾಟಿಸುವರು. ಗೃಹ ಸಚಿವ ಆರಗ ಜ್ಞಾನೇಂದ್ರ ಶಾಂತವೇರಿ ಒಡನಾಡಿಗಳಿಗೆ ಅಭಿನಂದನೆ
ಸಲ್ಲಿಸುವರು. ಜನಶಕ್ತಿ ಕೇಂದ್ರದ ಅಧ್ಯಕ್ಷ ಸಿ.ಕೆ. ರಾಮೇಗೌಡ ಪ್ರಾಸ್ತಾವಿಕವಾಗಿ
ಮಾತನಾಡುವರು. ಡಾ. ಆರ್.ಎಂ. ಮಂಜುನಾಥಗೌಡ ಆಶಯ ಭಾಷಣ ಮಾಡುವರು. ಡಿ. ಮಂಜುನಾಥ್
ಅಧ್ಯಕ್ಷತೆ ವಹಿಸುವರು ಎಂದರು.
ಗೋಪಾಲಗೌಡರು ಸಾಹಿತ್ಯ – ರಾಜಕಾರಣ ಕುರಿತು ಮಾಜಿ ಸಚಿವರ ಕಿಮ್ಮನೆ ರತ್ನಾಕರ್, ಸಮಾಜವಾದ ಕುರಿತು ಡಾ. ಪ್ರಕಾಶ್ ಕಮ್ಮರಡಿ, ಯುವಜನತೆ – ಸಮಾಜವಾದ ಕುರಿತು ಬಿ.ಆರ್. ಜಯಂತ್, ಗೇಣಿಪರ ಹೋರಾಟ ಕುರಿತು ಕೆ.ಟಿ. ಗಂಗಾಧರ್, ರೈತ ಈ ಹೊತ್ತಿನ ಆತಂಕ ಕುರಿತು ಕಂಬಳಗೆರೆ ರಾಜೇಂದ್ರ ಮಾತು ಮಂಥನ ಕಾರ್ಯಕ್ರಮದಲ್ಲಿ ಮಾತನಾಡುವರು ಎಂದರು.
ಗೋಪಾಲಗೌಡರ ಒಡನಾಡಿಗಳಾದ ಕೋಣಂದೂರು ಲಿಂಗಪ್ಪ, ಎ.ಪಿ. ರಾಮಪ್ಪ, ಕಾಮ್ರೆಡ್ ಲಿಂಗಪ್ಪ,
ಕಡಿದಾಳು ಶಾಮಣ್ಣ, ಪಿ. ಪುಟ್ಟಯ್ಯ, ಕೋಡ್ಲು ಯಜ್ಞಯ್ಯ, ಕೊಲ್ಲಪ್ಪಗೌಡರು
ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಶಬನಂ, ನೀರು
ಸರಬರಾಜು ಮತ್ತು ಒಳಚರಂಡಿ ನಿಗಮದ ನಿರ್ದೇಶಕ ಆರ್. ಮದನ್, ಬೆಂಗಳೂರಿನ ರಾಮಮನೋಹರ
ಲೋಹಿಯಾ, ಮಾಜಿ. ತಾ.ಪಂ. ಅಧ್ಯಕ್ಷ ಕೆ.ಟಿ. ನಟರಾಜ್ ಸೇರಿದಂತೆ ಹಲವರು ಭಾಗವಹಿಸುವರು
ಎಂದರು.
ಕಾರ್ಯಕ್ರಮಕ್ಕೂ ಮೊದಲು ಮಧ್ಯಾಹ್ನ 2.30ಕ್ಕೆ ಆರಗ ಸಮೀಪದ ಶಾಂತವೇರಿಯಿಂದ ಜಾಗೃತಿ
ಜ್ಯೋತಿಯೊಂದಿಗೆ ದ್ವಿಚಕ್ರವಾಹನಗಳಲ್ಲಿ ಮೆರವಣಿಗೆ ನಡೆಯಲಿದೆ. ಸಂಜೆ 4ಕ್ಕೆ
ಸೀಬಿನಕೆರೆ ವೃತ್ತದಲ್ಲಿರುವ ಗೋಪಾಲಗೌಡರ ಪ್ರತಿಮೆಗೆ ಗಣ್ಯರಿಂದ ಮಾಲಾರ್ಪಣೆ
ನಡೆಯಲಿದೆ. ಸಂಜೆಯ ಕಾರ್ಯಕ್ರಮದಲ್ಲಿ ಅಂಟಿಕೆ – ಪಂಟಿಕೆ, ರೈತಗೀತೆ, ಜಾನಪದ ಹಾಡುಗಳ
ಗಾಯನ ನಡೆಯಲಿದ್ದು, ಗೋಪಾಲಗೌಡರ ಮನೆಯಿಂದ ರಂಗಮಂದಿರದವರೆಗೆ ಜನಪದ ಕಲಾತಂಡಗಳು,
ಜನಪ್ರತಿನಿಧಿಗಳು, ಸಂಘ-ಸಂಸ್ಥೆಯ ಪದಾಧಿಕಾರಿಗಳು ಪಾದಯಾತ್ರೆ ನಡೆಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್. ರತ್ನಯ್ಯ ಇದ್ದರು.