ಶಿವಮೊಗ್ಗ : ಸಾಧನೆಗಳ ಸರದಾರ ಡಾ.ಎಸ್.ವಿ.ಶಾಸ್ತ್ರಿಯವರಿಗೆ ಮಾರ್ಚ್ ೧೯ರಂದು ಸಂಜೆ ೬ ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಶ್ರೀ ಗುರುವೇ ನಮಃದ ಮೂಲಕ ಅಭಿನಂದನೆಯನ್ನು ಸಲ್ಲಿಸಲಾಗುವುದು ಎಂದು ಅಭಿನಂದನಾ ಸಮಿತಿಯ ಎಸ್.ಕೆ. ಶೇಷಾಚಲ ಹೇಳಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್.ವಿ. ಶಾಸ್ತ್ರಿಯವರು ಉಪಾಧ್ಯಾಯರಾಗಿ, ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ, ಲೇಖಕರಾಗಿ ಹೆಸರು ಮಾಡಿದ್ದಾರೆ. ಹಲವಾರು ಸಂಸ್ಥೆಗಳನ್ನ ಶಿವಮೊಗ್ಗದಲ್ಲಿ ಆರಂಭಿಸಿದ್ದಾರೆ. ಸಾವಿರಾರು ಯುವಕ ಯುವತಿಯರನ್ನು ಸದಸ್ಯರನ್ನಾಗಿ ಮಾಡಿ, ವ್ಯಕ್ತಿತ್ವ ವಿಕಸನ ಮಾಡಿದ್ದಾರೆ. ಅವರ ಶಿಷ್ಯಂದಿರು ಇಂದು ವಿಶ್ವದಾದ್ಯಂತ ಇದ್ದಾರೆ. ಇಂತಹ ಮಹಾನ್ ಗುರುವನ್ನು ಅಭಿನಂದಿಸುವುದು ನಮ್ಮ ಕರ್ತವ್ಯ ಕೂಡ ಆಗಿದೆ ಎಂದರು.
ಗುರುಕುಲ ಶಿಕ್ಷಣವನ್ನ ಸ್ಥಾಪಿಸಿ, ಪದವಿಪೂರ್ವ, ಪದವಿ ಶಿಕ್ಷಣ ಕಾಲೇಜುಗಳ ಮೂಲಕ ವಿದ್ಯಾದಾನ ಮಾಡಿದ ಮಹಯರು ಕೂಡ ಇವರಾಗಿದ್ದಾರೆ. ಜ್ಯೂಯರ್ ಛೇಂಬರ್ ಮೂಲಕ ಸೇವೆ ಮಾಡಿದ್ದಾರೆ. ಮೊಟ್ಟ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಸಂಸತ್ ಅಧಿವೇಶನದ ಅಣಕು ಪ್ರದರ್ಶನವನ್ನು ವಿದ್ಯಾರ್ಥಿಗಳ ಮೂಲಕ ನೀಡಿದ್ದಾರೆ ಎಂದರು.

ಅಭಿನಂದನಾ ಸಮಾರಂಭವನ್ನು ಸಚಿವ ಕೆ.ಎಸ್. ಈಶ್ವರಪ್ಪ ಉದ್ಘಾಟಿಸುವರು. ಅಭಿನಂದನಾ ಸಮಿತಿಯ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಅಧ್ಯಕ್ಷತೆ ವಹಿಸುವರು. ಸಂಸದ ರಾಘವೇಂದ್ರ ಅಭಿನಂದನಾ ಗ್ರಂಥ ಬಿಡುಗಡೆ ಮಾಡುವರು. ಮುಖ್ಯ ಅತಿಥಿ ಗಳಾಗಿ ಶಾಸಕರಾದ ಅಶೋಕ್ ನಾಯ್ಕ, ಎಸ್. ರುದ್ರೇಗೌಡ, ಮಂಜುನಾಥ ಭಂಡಾರಿ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಾಜಿ ಶಾಸಕರಾದ ಆರ್. ಪ್ರಸನ್ನಕುಮಾರ್ ಸೇರಿದಂತೆ ಹಲವರು ಗಣ್ಯರು ಉಪಸ್ಥಿತರಿರುವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳಾದ ಶಾಂತಾ ಶೆಟ್ಟಿ, ಪುಷ್ಪಾ ಶೆಟ್ಟಿ, ಅ.ನಾ. ವಿಜಯೇಂದ್ರ, ವೆಂಕಟೇಶ್ ಮೂರ್ತಿ, ಜಿ. ವಿಜಯಕುಮಾರ್, ಎನ್. ಪರಮೇಶ್, ಹರ್ಷ ಕಾಮತ್, ಎಸ್.ಎಸ್. ವಾಗೀಶ್, ಅನಂತಶೆಟ್ಟಿ, ಓಂಪ್ರಕಾಶ್ ತೇಲ್ಕರ್ ಮೊದಲಾದವರಿದ್ದರು.