ಶಿವಮೊಗ್ಗ : ನಗರಕ್ಕೆ ಸಮೀಪದ ಸವಳಂಗ ರಸ್ತೆ, ನವುಲೆಯ ಪುರಾತನ ಪ್ರಸಿದ್ಧ ಶ್ರೀ ಸುಂಕ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಮಾರ್ಚ್ 21 ರಿಂದ 23 ರವರೆಗೆ ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಶ್ರೀ ಸುಂಕ್ಲಮ್ಮ ದೇವಿ ದೇವಸ್ಥಾನದ ಅಧ್ಯಕ್ಷ ಎಂ.ಎನ್. ಶೇಖರಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ನವುಲೆಯ ಶ್ರೀ ಆಂಜನೇಯ ಸ್ವಾಮಿ ಮತ್ತು ಶ್ರೀ ಸುಂಕ್ಲಮ್ಮ ದೇವಿ ದೇವಸ್ಥಾನ ಸಮಿತಿ ಇವರುಗಳ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಈ ಜಾತ್ರಾ ಮಹೋತ್ಸವದಲ್ಲಿ ನವುಲೆಯ ಗ್ರಾಮಸ್ಥರಲ್ಲದೇ ಸುತ್ತಮುತ್ತಲಿನ ಗ್ರಾಮದ ಗ್ರಾಮಸ್ಥರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ದಿನಾಂಕ : 21-03-2022ನೇ ಸೋಮವಾರ ಸಂಜೆ 7-00 ಗಂಟೆಗೆ ನವುಲೆಯ ಬಟ್ಟೆಮಲ್ಲಪ್ಪ ದೇವರ ದೇವಸ್ಥಾನಕ್ಕೆ ಭಕ್ತಾದಿಗಳು ಆಗಮಿಸಿ, ಅಲ್ಲಿ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಾಗಿ ಅವರು ಕೋರಿದರು. ದಿನಾಂಕ : 22-03-2022ನೇ ಮಂಗಳವಾರ ಬೆಳಿಗ್ಗೆ ಶ್ರೀ ಸುಂಕ್ಲಮ್ಮ ದೇವಿಯ ಬೆಳ್ಳಿಯ ಆಭರಣಗಳನ್ನು ನವುಲೆಯ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಮಂಗಳವಾದ್ಯದೊಂದಿಗೆ ಶ್ರೀ ಸುಂಕ್ಲಮ್ಮ ದೇವಿ ದೇವಸ್ಥಾನಕ್ಕೆ ಆಗಮಿಸಿ, ಅಲ್ಲಿ ಶ್ರೀ ದೇವಿಗೆ ಅಭಿಷೇಕ, ಆಭರಣಲಂಕಾರ ಸೇರಿದಂತೆ ಪೂಜಾ ಕಾರ್ಯಕ್ರಮ ಜರುಗಲಿದೆ ಎಂದು ಅವರು ತಿಳಿಸಿದರು.
ದಿನಾಂಕ : 23-03-2022ನೇ ಬುಧವಾರ ಬೆಳಿಗ್ಗೆ 8-00 ಗಂಟೆಗೆ ಶ್ರೀ ಆಂಜನೇಯ ಸ್ವಾಮಿಯ ದೊಡ್ಡ ದೇವರನ್ನು ರಾಜಬೀದಿ ಉತ್ಸವವನ್ನು ನವುಲೆಯ ಪ್ರಮುಖ ರಸ್ತೆಯ ಮೂಲಕ ನಡೆಯಲಿದೆ ಎಂದ ಅವರು, ಶ್ರೀ ಸುಂಕ್ಲಮ್ಮ ದೇವಿಗೆ ಹರಕೆ ಹೊತ್ತು ಕೊಂಡ ಭಕ್ತಾದಿಗಳು ಬೇವಿನ ಉಡುಪಿನ ಮೂಲಕ ರಾಜಬೀದಿ ಉತ್ಸವದಲ್ಲಿ ಪಾಲ್ಗೊಂಡು ನಂತರ ಶ್ರೀ ಸುಂಕ್ಲಮ್ಮ ದೇವಿ ದೇವಸ್ಥಾನಕ್ಕೆ ಬಂದು ತಮ್ಮ ಹರಕೆಯನ್ನು ತೀರಿಸಬೇಕಾಗಿ ಅವರು ಕೋರಿದ್ದಾರೆ.
ಭಕ್ತಾದಿಗಳು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಕುಟುಂಬ ಸಮೇತರಾಗಿ ಪಾಲ್ಗೊಂಡು ಶ್ರೀ ಸುಂಕ್ಲಮ್ಮ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಸುಂಕ್ಲಮ್ಮ ದೇವಿ ದೇವಸ್ಥಾನದ ಅಧ್ಯಕ್ಷ ಎಂ.ಎನ್. ಶೇಖರಪ್ಪ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೆ.ಹೆಚ್. ಆನಂದಪ್ಪ, ಕಾರ್ಯದರ್ಶಿ ವಿ. ಪರಶುರಾಮ, ಸಹ ಕಾರ್ಯದರ್ಶಿ ತಿಪ್ಪಣ್ಣ ಸೇರಿದಂತೆ ದೇವಸ್ಥಾನದ ಪದಾಧಿಕಾರಿಗಳು ಹಾಜರಿದ್ದರು.