ಶಿವಮೊಗ್ಗ: ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬವನ್ನು ಇಂದು ಆಚರಿಸಲಾಗುತ್ತಿದ್ದು, ಅವರ ನಟನೆಯ ಕೊನೆಯ ಸಿನಿಮಾ “ಜೇಮ್ಸ್’ ಬಿಡುಗಡೆಯಾಗಿದ್ದು, ಚಿತ್ರ ನೋಡಿ ಅಭಿಮಾ ನಿಗಳು ಕಣ್ಣೀರಿಟ್ಟಿದ್ದಾರೆ. ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜೇಮ್ಸ್ ಚಿತ್ರ ನೋಡಿದ ಅಭಿಮಾನಿಗಳು ನೆಚ್ಚಿನ ನಟನನ್ನು ನೋಡಿ ಸಂಭ್ರಮಿಸಿದರೆ, ಅದೇ ಕ್ಷಣ ಅವರಿಲ್ಲವಲ್ಲ ಎಂದು ಭಾವುಕರಾ ಗುತ್ತಿದ್ದಾರೆ. ಚಿತ್ರ ಬಿಡುಗಡೆಯಾದಾಗ ಪುನೀತ್ ರಾಜ್ಕುಮಾರ್ ತಮ್ಮೊಂದಿಗಿಲ್ಲ ಸತ್ಯವನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದೆ ಹಲ ವಾರು ಚಿತ್ರ ಮಂದಿರದಲ್ಲಿ ಕಣ್ಣೀರಿಟ್ಟ ಘಟನೆ ವರದಿಯಾಗಿದೆ. ಚಿತ್ರ ಮಂದಿರಗಳ ಎದುರು ಭಾರಿ ಸಂಖ್ಯೆಯ ಅಭಿಮಾನಿಗಳು ಕಂಡು ಬಂದಿದ್ದು, ಈಗಾಗಲೇ ಹಲವು ಚಿತ್ರಮಂದಿ ರಗಳಲ್ಲಿ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ.
ಅಪ್ಪು ಅಭಿಮಾನಿಗಳು ಹುಟ್ಟುಹಬ್ಬವನ್ನು ನಾನಾ ರೀತಿಯ ಸಾಮಾಜಿಕ ಕಾರ್ಯಗಳ ಮೂಲಕ ಆಚರಿಸುತ್ತಿದ್ದು ಶಿವಮೊಗ್ಗದಲ್ಲಿ ಅನ್ನಸಂತರ್ಪಣೆ ಹಾಗೂ ರಕ್ತದಾನ ಮಾಡುವ ಮೂಲಕ ಹಾಗೂ ಭದ್ರಾವತಿಯಲ್ಲಿ ನಿನ್ನೆ ರಾತ್ರಿ ಆಟೋಗಳಲ್ಲಿ ಅಪ್ಪು ಅವರ ಕಟೌಟ್ಗಳನ್ನು ಮೆರವಣಿಗೆ ಮಾಡಿ ನಂತರ ಡ್ಯಾನ್ಸ್ ಸಹ ಮಾಡಿದರು.
ನಗರದ ಹೆಚ್ಪಿಸಿ ಹಾಗೂ ಲಕ್ಷ್ಮೀ, ಭರತ್ ಸಿನಿಮಾಸ್ ಚಿತ್ರಮಂದಿರಗಳಲ್ಲಿ ಜೇಮ್ಸ್ ತೆರೆ ಕಂಡಿದ್ದು, ಅಪ್ಪು ಜನ್ಮದಿನ ದಂದೇ ಅವರ ಕೊನೆಯ ಚಿತ್ರ ಬಿಡುಗಡೆಯಾ ಗುತ್ತಿರುವುದರಿಂದ ಅಭಿಮಾನಿಗಳಲ್ಲಿ ನೋವಿನ ನಡುವೆ ಸಂಭ್ರಮ ಮನೆ ಮಾಡಿದೆ. ಜೇಮ್ಸ್ ಬಿಡುಗಡೆ ಹಿನ್ನೆಲೆಯಲ್ಲಿ ಚಿತ್ರಮಂದಿರ ಗಳ ಎದುರು ಜಮಾವಣೆ ಗೊಂಡಿರುವ ನೂರಾರು ಅಭಿಮಾನಿಗಳು ಅಪ್ಪು ಅವರ ಕಟೌಟ್ಗೆ ಹಾಲಿನ ಅಭಿಷೇಕ ನೆರವೇರಿಸಿ ಅಭಿಮಾನ ಮೆರೆದರು. ಜೇಮ್ಸ್ ಟಿ ಶರ್ಟ್ ಧರಿಸಿ ಚಿತ್ರ ವೀಕ್ಷಣೆಗೆ ಆಗಮಿಸಿದ್ದ ಪ್ರೇಕ್ಷಕರು ಗಮನಸೆಳೆದರು.
“ಜೇಮ್ಸ್’ ಚಿತ್ರ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದ್ದು, ನಾಲ್ಕು ಸಾವಿರಕ್ಕೂ ಹೆಚ್ಚು ಶೋಗೆ ಸಾಕ್ಷಿಯಾಗಲಿದೆ. ಕೇವಲ ಕನ್ನಡವಷ್ಟೇ ಅಲ್ಲದೇ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಿದೆ.
ಜೇಮ್ಸ್’ ಚಿತ್ರ ಬಿಡುಗಡೆ ಮತ್ತು ಜನ್ಮದಿನದಂದು ಅವರ ಕುಟುಂಬ ವರ್ಗಕ್ಕೆ ಇದು ಅಪ್ಪು ಅವರ ಕೊನೆಯ ಸಿನಿಮಾ ಎಂಬುದನ್ನು ನೆನೆಸಿಕೊಂಡರೆ ಹೃದಯ ಭಾರವಾಗುತ್ತಿದೆ. ಈಗ ಅಪ್ಪು ಅವರ ಕೊನೆಯ ಸಿನಿಮಾದಲ್ಲಿ ಶಿವರಾಜ್ಕುಮಾರ್ ಹಾಗೂ ರಾಘವೇಂದ್ರ ರಾಜ್ಕುಮಾರ್ ನಟಿಸಿದ್ದು, ಮೂವರು ಅಣ್ಣ ತಮ್ಮಂದಿರು ಒಂದೇ ಚಿತ್ರದಲ್ಲಿ ನಟಿಸಬೇಕೆಂಬ ಆಸೆ ಉಳಿದು ಹೋಗಿತ್ತು.