ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಹುಟ್ಟುಹಬ್ಬದ ಅಂಗವಾಗಿ ಜಿಲ್ಲಾ ಥ್ರೋಬಾಲ್ ಅಸೋಸಿಯೇಷನ್ ವತಿಯಿಂದ ಫೆಬ್ರವರಿ 27ರಂದು ಜಿಲ್ಲಾ ಮಟ್ಟದ ಹೊನಲು ಬೆಳಕಿನ ಥ್ರೋಬಾಲ್ ಪಂದ್ಯಾವಳಿ “ಯಡಿಯೂರಪ್ಪ ಕಪ್ ಸಂಭ್ರಮ” ಹೆಸರಿನಲ್ಲಿ ನಡೆಯಲಿದೆ ಎಂದು ಅಸೋಸಿಯೇಷನ್ ಖಜಾಂಚಿ ಎಸ್.ಆರ್. ಸೋಮಶೇಖರ್ ಹೇಳಿದರು.

ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಥ್ರೋ ಬಾಲ್ ಸಂಸ್ಥೆ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಥ್ರೋಬಾಲ್ ಪಂದ್ಯಾವಳಿ ಫೆ. 27 ರಂದು ನೆಹರೂ ಕ್ರೀಡಾಂಗಣದಲ್ಲಿ ನಡೆಯಲಿದೆ. ಸಂಸದ ಬಿ.ವೈ. ರಾಘವೇಂದ್ರ ಪಂದ್ಯಾವಳಿಗೆ ಚಾಲನೆ ನೀಡುವರು. ನಮ್ಮ ಸಂಸ್ಥೆ ಅಧ್ಯಕ್ಷ ಡಿ.ಎಸ್. ಅರುಣ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಹೊನಲು ಬೆಳಕಿನ ಈ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪುರುಷ ಮತ್ತು ಮಹಿಳಾ ಹಾಗೂ ಪ್ರೌಢಶಾಲಾ ಬಾಲಕ, ಬಾಲಕಿಯರ 15 ತಂಡಗಳು ಭಾಗವಹಿಸಲಿವೆ. ನಾಕೌಟ್ ರೀತಿಯಲ್ಲಿ ಪಂದ್ಯಗಳು ನಡೆಯಲಿದ್ದು, ವಿಜೇತ ತಂಡಗಳಿಗೆ ನಗದು ಬಹುಮಾನ ನೀಡಲಾಗುವುದು. ಪಂದ್ಯಾವಳಿಗಾಗಿ ಹೊನಲು ಬೆಳಕಿನ ಮೂರು ಥ್ರೋಬಾಲ್ ಅಂಕಣದ ವ್ಯವಸ್ಥೆ ಮಾಡಲಾಗಿದೆ. ಉದ್ಘಾಟನೆಯ ದಿನ ಹಗಲು ಹೊತ್ತು ಪಂದ್ಯಾವಳಿ ನಡೆದು ನಂತರ ಫೈನಲ್ ಪಂದ್ಯಗಳು ಹೊನಲು ಬೆಳಕಲ್ಲಿ ನಡೆಯಲಿವೆ ಎಂದರು.

ಪುರುಷ ವಿಭಾಗಕ್ಕೆ ಪ್ರಥಮ ಬಹುಮಾನ 10 ಸಾವಿರ ರೂ., ದ್ವಿತೀಯ ಬಹುಮಾನ 8 ಸಾವಿರ ರೂ., ತೃತೀಯ ಬಹುಮಾನ 5 ಸಾವಿರ ರೂ. ನೀಡಲಾಗುವುದು. ಬಾಲಕರ ವಿಭಾಗಕ್ಕೆ ಕ್ರಮವಾಗಿ 8 ಸಾವಿರ ರೂ., 6 ಸಾವಿರ ರೂ., 3 ಸಾವಿರ ರೂ., ನಗದು ಬಹುಮಾನ ನೀಡಲಾಗುವುದು. ಮಹಿಳೆಯರಿಗೆ ಕ್ರಮವಾಗಿ 10, 8, 5 ಸಾವಿರ ರೂ., ಬಾಲಕಿಯರಿಗೆ 8, 6 ಹಾಗೂ 3 ಸಾವಿರ ರೂ. ಬಹುಮಾನ ನೀಡಿ ಪ್ರೋತ್ಸಾಹಿಸಲಾಗುವುದು ಎಂದರು.ತಂಡಗಳು ಕಡ್ಡಾಯವಾಗಿ ಕ್ರೀಡಾ ಸಮವಸ್ತ್ರ ಧರಿಸಬೇಕು. 17 ವರ್ಷ ದಾಟಿರಬಾರದು. ಗುರುತಿನ ಚೀಟಿ ತರಬೇಕು. ವಿದ್ಯಾರ್ಥಿಗಳ ಆಧಾರ್ ಗುರುತಿನ ಕಾರ್ಡ್ ಮತ್ತು ಭಾವಚಿತ್ರಗಳನ್ನು ಕಡ್ಡಾಯವಾಗಿ ತರಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಜಯಪ್ಪ ಪಿ., ಕೆ.ಜಿ. ಮಠಪತಿ, ದೀಪಕ್ ಜೋಶಿ, ಮೋಹನ್, ಸುರೇಶ್ ನಾಯ್ಕ್, ಮಧುಮತಿ, ಗೀತಾ, ಅಂಬಿಕಾ, ಮೊಹಮ್ಮದ್ ಯೂಸುಫ್ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!