ಭಜರಂಗ ದಳ ಕಾರ್ಯಕರ್ತ ಹರ್ಷನ ಕೊಲೆ ನಡೆದ ನಂತರ ಶಿವಮೊಗ್ಗ ನಗರ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಗೆ ಒಳ ಪಡುವ ಎಲ್ಲಾ ಪ್ರದೇಶಗಳಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸಾವಿರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಇನ್ನು ನಗರದಾದ್ಯಂತ ಭದ್ರತೆಗಾಗಿ ಇಬ್ಬರು ಎಸ್’ಪಿ, ಒಬ್ಬರು ಹೆಚ್ಚುವರಿ ರಕ್ಷಣಾಧಿಕಾರಿ, 12 ಡಿವೈಎಸ್’ಪಿ, 39 ಇನ್ಸ್’ಪೆಕ್ಟರ್, 54 ಸಬ್ ಇನ್ಸ್’ಪೆಕ್ಟರ್, ೪೮ ಎಎಸ್‘ಐ, 819 ಕಾನ್ಸ್’ಟೇಬಲ್, 20 ಕೆಎಸ್’ಆರ್’ಪಿ, 10 ಡಿಎಎಆರ್ ಹಾಗೂ 1ರ್ಯಾಪಿಡ್ ಆಕ್ಷನ್ ಫೋರ್ಸ್ ತುಕಡಿ ಸೇರಿದಂತೆ ಸುಮಾರು ೨೦೦೦ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ನಗರದಲ್ಲಿ ರೂಟ್ ಮಾರ್ಚ್
ಇನ್ನು, ನಿನ್ನೆ ಗಲಭೆ ನಡೆದ ಹಿನ್ನೆಲೆಯಲ್ಲಿ ಆರ್’ಎಎಫ್ ತುಕಡಿಗಳ ರೂಟ್ ಮಾರ್ಚ್ ನಡೆಸಲಾಯಿತು.
ನಿನ್ನೆ ಗಲಭೆ ನಡೆದ ಹಳೇ ಶಿವಮೊಗ್ಗ ಭಾಗದ ಗಾಂಧಿ ಬಜಾರ್, ರವಿವರ್ಮಾ ಬೀದಿ, ಸಿದ್ದಯ್ಯ ರಸ್ತೆ ಅಲ್ಲದೇ ಓಟಿ ರಸ್ತೆ, ಎಂಕೆಕೆ ರಸ್ತೆ, ಅಮೀರ್ ಅಹಮದ್ ರಸ್ತೆ ಸೇರಿದಂತೆ ಹಲವು ಪ್ರಮುಖ ರಸ್ತೆಗಳಲ್ಲಿ ರೂಟ್ ಮಾರ್ಚ್ ನಡೆಸುವ ಮೂಲಕ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿ, ಸಾರ್ವಜನಿಕರಲ್ಲಿ ಧೈರ್ಯ ತುಂಬುವ ಕಾರ್ಯ ಮಾಡಲಾಯಿತು.