ಶಂಕರಘಟ್ಟ, ಫೆ. 21: ರಾಜ್ಯದ ಉನ್ನತ ಶಿಕ್ಷಣ ಇಲಾಖೆ, ಕುವೆಂಪು ವಿಶ್ವವಿದ್ಯಾಲಯ ಮತ್ತು ಅಮೇರಿಕಾದ ಅಥೆನ್ಸ್ ವಿಶ್ವವಿದ್ಯಾಲಯಗಳು ತ್ರಿಸದಸ್ಯ ಶೈಕ್ಷಣಿಕ – ಸಂಶೋಧನಾ ಕಾರ್ಯಕ್ರಮದ ಒಪ್ಪಂದವೊಂದಕ್ಕೆ ಸಹಿ ಹಾಕಲಿವೆ.

ಮಂಗಳವಾರ ಸಂಜೆ 8 ಗಂಟೆಗೆ ಆನ್‌ಲೈನ್ ಮೂಲಕ ನಡೆಯುವ ಸಭೆಯಲ್ಲಿ ಮೂರೂ ಸಂಸ್ಥೆಗಳ ಗಣ್ಯರು, ತಜ್ಞರು ಭಾಗವಹಿಸಲಿದ್ದು ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳಿಗೆ ಪರಸ್ಪರ ಸಹಕಾರ ನೀಡುವ ಒಪ್ಪಂದವನ್ನು ಜಾರಿಗೊಳಿಸಲಿದ್ದಾರೆ. ಈ ಒಪ್ಪಂದದಡಿ ಅಲಬಾಮದಲ್ಲಿರುವ ಅಥೆನ್ಸ್ ವಿವಿ ಮತ್ತು ಕುವೆಂಪು ವಿವಿಗಳ ನಡುವೆ ಶೈಕ್ಷಣಿಕ ಮತ್ತು ಸಂಶೋಧನಾ ಚಟುವಟಿಕೆಗಳನ್ನು ಕೈಗೊಳ್ಳಲು ಬೋಧಕರು ಮತ್ತು ವಿದ್ಯಾರ್ಥಿಗಳ ವಿನಿಮಯ, ಉಭಯ ಸಂಸ್ಥೆಗಳಿಂದ ವಿಶೇಷ ವಿಷಯಗಳ ಮೇಲೆ ಪದವಿಗಳ ಆರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಕೆಲಸಕ್ಕೆ ಬೇಕಾಗಿದ್ದಾರೆ.
ಕಾರ್ಕಳದ ಸ್ಪಂದನ ಜೀವ ಆಯುರ್ವೇದ ಕಂಪೆನಿಗೆ ಎಸ್ಸೆಸ್ಸೆಲ್ಸಿ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ 40 ವರ್ಷದೊಳಗಿನ ಪುರುಷ ಹಾಗೂ ಮಹಿಳೆಯರು ಕೆಲಸಕ್ಕೆ ಬೇಕಾಗಿದ್ದಾರೆ.
ಆಸಕ್ತರು ಕೂಡಲೇ ಸಂಪರ್ಕಿಸಿ.:
ವಿಳಾಸ: D.NO: 414/33 2nd Floor S.J.Arcade, Karkala
ಮೊಬೈಲ್ ನಂ: 8105295921, 7204210734/

ಆನ್‌ಲೈನ್ ಸಭೆಯಲ್ಲಿ ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಡಾ. ಸಿ. ಎನ್. ಅಶ್ವತ್ಥನಾರಾಯಣ್, ಕರ್ನಾಟಕ ಉನ್ನತ ಶಿಕ್ಷಣ ಮಂಡಳಿಯ ಉಪಾಧ್ಯಕ್ಷ ಪ್ರೊ. ಬಿ. ತಿಮ್ಮೇಗೌಡ, ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರೊ. ಗೋಪಾಲಕೃಷ್ಣ ಜೋಶಿ, ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯ್ಕ್ ಜಿ. ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ಕುಲಸಚಿವೆ ಅನುರಾಧ ಜಿ., ಪರೀಕ್ಷಾಂಗ ಕುಲಸಚಿವ ಪ್ರೊ. ಸಿ. ಎಂ. ತ್ಯಾಗರಾಜ್ ಹಾಗೂ ಅಲಬಾಮದ ಅಥೆನ್ಸ್ ವಿವಿಯ ಅಧ್ಯಕ್ಷ ಡಾ. ಫಿಲಿಪ್ ವೇ, ಉಪಾಧ್ಯಕ್ಷ ಡಾ. ಕ್ಯಾಥರೀನ್ ವೆಲ್‌ಬರ್ಗ್ ಸೇರಿದಂತೆ ಇತರ ತಜ್ಞರು, ಸದಸ್ಯರು ಹಾಜರಿರಲಿದ್ದಾರೆ.

By admin

ನಿಮ್ಮದೊಂದು ಉತ್ತರ

You missed

error: Content is protected !!