ಶಿವಮೊಗ್ಗ:
ಬಜರಂಗದಳ ಕಾರ್ಯಕರ್ತ ಹರ್ಷನ ಹತ್ಯೆ ಪ್ರಕರಣ ಪ್ರಧಾನಿಯವರೆಗೂ ತಲುಪಿದ್ದು, ನಗರದಲ್ಲಿ ಶಾಂತಿ ಕಾಪಾಡುವಂತೆ ನರೇಂದ್ರ ಮೋದಿಯವರು ಸೂಚನೆ ನೀಡಿದ್ದಾರೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಈ ನಡುವೆ ಯಡಿಯೂರಪ್ಪ ಸಹ ಜಿಲ್ಲೆಯ ಶಾಂತಿ ಕಾಪಾಡಲು ಮನವಿ ಮಾಡಿದ್ದಾರೆ.
ಹರ್ಷನ ಮನೆಗೆ ಭೇಟಿ ನೀಡಿದ ನಂತರ ಮಾತನಾಡಿದ ಈಶ್ವರಪ್ಪ, ಘಟನೆ ಪ್ರಧಾನಿಯವರೆಗೂ ತಲುಪಿದೆ. ಮೊಟ್ಟ ಮೊದಲನೆಯದಾಗಿ ನಗರದಲ್ಲಿ ಶಾಂತಿ ಕಾಪಾಡಿ, ಕಾನೂನು ಸುವ್ಯವಸ್ಥೆ ನಿಯಂತ್ರಿಸುವಂತೆ ಮೋದಿಯವರು ಸೂಚಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೂ ಸಹ ತುರ್ತು ಸಭೆ ನಡೆಸಿದ್ದು, ಶಾಂತಿ ಕಾಪಾಡುವಂತೆ ಸೂಚನೆ ನೀಡಿದ್ದು, ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೂ ಸಹ ಇದನ್ನೇ ಸೂಚಿಸಿದ್ದಾರೆ. ಹೀಗಾಗಿ, ಪ್ರಧಾನಿ, ಮುಖ್ಯಮಂತ್ರಿಯವರ ಮಾತಿಗೆ ಬೆಲೆ ಕೊಡಬೇಕಾಗಿರುವುದು ಎಲ್ಲರ ಕರ್ತವ್ಯ.
ಆದ್ದರಿಂದ ಭಾವೋದ್ವೇಗಕ್ಕೆ ಒಳಗಾಗದೇ ನಾಗರೀಕರು ಶಾಂತಿ ಕಾಪಾಡಲು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಕೆಲಸಕ್ಕೆ ಬೇಕಾಗಿದ್ದಾರೆ.
ಕಾರ್ಕಳದ ಸ್ಪಂದನ ಜೀವ ಆಯುರ್ವೇದ ಕಂಪೆನಿಗೆ ಎಸ್ಸೆಸ್ಸೆಲ್ಸಿ ಮೇಲ್ಪಟ್ಟು ವಿದ್ಯಾರ್ಹತೆ ಹೊಂದಿರುವ 40 ವರ್ಷದೊಳಗಿನ ಪುರುಷ ಹಾಗೂ ಮಹಿಳೆಯರು ಕೆಲಸಕ್ಕೆ ಬೇಕಾಗಿದ್ದಾರೆ.
ಆಸಕ್ತರು ಕೂಡಲೇ ಸಂಪರ್ಕಿಸಿ.:
ವಿಳಾಸ: D.NO: 414/33 2nd Floor S.J.Arcade, Karnataka
ಮೊಬೈಲ್ ನಂ: 8105295921, 7204210734/

By admin

ನಿಮ್ಮದೊಂದು ಉತ್ತರ

You missed

error: Content is protected !!