ಶಿವಮೊಗ್ಗ, ಜು.28: ಶಿವಮೊಗ್ಗ ಜಿಲ್ಲೆಯ ಕೊರೊನಾ ಸಾವಿನ ಕಂಟಕಗಳು ದಿನೇ ದಿನೇ ಹೆಚ್ಚುತ್ತಿದ್ದು, ಇಂದು ಇಬ್ಬರು ಸಾವು ಕಂಡಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದ್ದು, ಸತ್ತವರ ಸಂಖ್ಯೆ 3 ದಶಕದತ್ತ (30) ಬಂದಿರುವುದು ಆತಂಕದ ಸಂಗತಿ.
ಇಂದಿನ ಈ ಜಿಲ್ಲಾ ವರದಿಯಲ್ಲಿ ಶಿವಮೊಗದಲ್ಲಿ ಮೂವರು ಸಾವು ಕಂಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ ರಾಜ್ಯ ವರದಿಯಲ್ಲಿ ಇಂದು 131 ಜನರಿಗೆ ಸೊಂಕು ಕಂಡುಬಂದಿದೆ.
ಇಂದು ಸಂಜೆ ಹೊರಬಿದ್ದ ಶಿವಮೊಗ್ಗ ಕೋವಿಡ್-19 ವರದಿಯಲ್ಲಿ 127 ನೆಗಿಟೀವ್ ಇದ್ದರೆ 170 ಪಾಸಿಟಿವ್ ಬಂದು ಭಯ ಹುಟ್ಟಿಸಿದೆ. 30 ಡಿಸ್ಚಾರ್ಜ್ ಆಗಿದ್ದರೂ ಸಹ 1603 ಸೋಂಕಿತರಲ್ಲಿ 834 ಜನ ಗುಣಮುಖರಾಗಿದ್ದಾರೆ. ಈ ವರದಿಯಲ್ಲಿ ಶಿವಮೊಗ್ಗ ನಗರದಲ್ಲಿ 90, ಶಿಕಾರಿಪುರದಲ್ಲಿ 08, ಭದ್ರಾವತಿಯಲ್ಲಿ11, ಸಾಗರ ಹಾಗೂ ತೀರ್ಥಹಳ್ಳಿಯಲ್ಲಿ ತಲಾ 2 ಹೊಸನಗರದಲ್ಲಿ 6, ಸೊರಬದಲ್ಲಿ 05, ಇತರೆ ಜಿಲ್ಲೆಗಳ 3 ಪ್ರಕರಣಗಳು ಪತ್ತೆಯಾಗಿವೆ.
ಇಂದಿನವರೆಗೆ ಸಾವು ಕಂಡವರ ಸಂಖ್ಯೆ 30 ಆಗಿದ್ದು, ಅದರ ಸಂಖ್ಯೆ ಹೆಚ್ಚಾಗಲಿದೆ. ದಿನೇ ದಿನೇ ಸಾವಿನ ಸಂಖ್ಯೆ ಶಿವಮೊಗ್ಗದಲ್ಲಿ ಹೆಚ್ಚುತ್ತಿರುವುದು ಭಯ ಹುಟ್ಟಿಸಿದೆ.