ಶಿವಮೊಗ್ಗ,ಜ.05:
ಶಿವಮೊಗ್ಗದಿಂದ ಇತ್ತೀಚೆಗೆ ಓಂ ಶಕ್ತಿ ಯಾತ್ರೆಯಿಂದ ಬಂದವರಿಗೆಲ್ಲಾ ಕೊರೊನಾ, ಓಮಿಕ್ರಾನ್ ಪರೀಕ್ಷೆ ಸರಿಯಾಗಿ ನಡೆದಿದೆಯಾ….?!.., ಶಿವಮೊಗ್ಗ ಮತ್ತೆ ಕೊರೊನಾಗೆ ತತ್ತರಿಸಲಿದೆಯಾ…?
ಇಂತಹದೊಂದು ಪ್ರಶ್ನೆ ಹುಟ್ಟಲು ಕಾರಣ ಶಿವಮೊಗ್ಗ ಬೈಪಾಸ್’ನಲ್ಲಿ ಇಂದು ಬೆಳಗಿನ ಜಾವದಿಂದ ಸಾಲು ಸಾಲು ಬಸ್ ಗಳಲ್ಲಿ ಬಂದವರಿಗೆ ಸ್ಕ್ರೀನಿಂಗ್ ಟೆಸ್ಟ್, ಹಾಗೂ ಥರ್ಮಲ್ ಚೆಕ್ ಮಾಡುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಹೇಳಿದರೆ, ಬೆಳಿಗ್ಗೆಯೇ ಮನೆಗೆ ವಾಪಾಸಾದ ಬಹಳಷ್ಟು ಜನ ಬಸ್ಸಲ್ಲಿ ಒಂದಿಬ್ಬರಿಗೆ ಚೆಕ್ ಮಾಡಿದ್ದಾರೆ ಎಂದಿದ್ದಾರೆ. ಯಾರ ಮಾತನ್ನು ನಂಬಬೇಕು.
ನಗರದಿಂದ ತಮಿಳುನಾಡಿಗೆ ಓಂ ಶಕ್ತಿ ಯಾತ್ರೆಗೆ ತೆರಳಿ ಹಿಂತಿರುಗಿರುವವರಿಗೆ ಬೈಪಾಸ್ ಹಾಗೂ ಸಹ್ಯಾದ್ರಿ ಕಾಲೇಜು ಬಳಿಯಲ್ಲಿ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗುತ್ತಿದೆ.


ಸುಮಾರು 82 ಬಸ್’ಗಳಲ್ಲಿ 4 ಸಾವಿರಕ್ಕೂ ಅಧಿಕ ಮಂದಿ ತಮಿಳುನಾಡಿನ ಓಂ ಶಕ್ತಿ ಯಾತ್ರೆಗೆ ತೆರಳಿದ್ದರು. ಇವರುಗಳೆಲ್ಲಾ ಇಂದು ನಸುಕಿನಿಂದ ನಗರಕ್ಕೆ ವಾಪಾಸಾಗುತ್ತಿದ್ದು, ಸಹ್ಯಾದ್ರಿ ಕಾಲೇಜು ಬಳಿ ಬೈಪಾಸ್ ರಸ್ತೆಯಲ್ಲಿ ಬಸ್’ಗಳನ್ನು ನಿಲ್ಲಿಸಿ ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗುತ್ತಿದೆ.


ಡಿಹೆಚ್ ಓ ಹೇಳುವ ಪ್ರಕಾರ ಎಲ್ಲರ ಪರಿಶೀಲನೆ ನಡೆಸಲಾಗಿದೆ. ನೆಗಿಟೀವ್ ಬಂದಿದೆ. ಆದರೂ ಏಳು ದಿನ ಕ್ವಾರಂಟೈನ್ ನಲ್ಲಿರಲು ಸೂಚಿಸಲಾಗಿದೆ ಎಂದಿದ್ದಾರೆ.


ಮೈಸೂರು, ನಂಜನಗೂಡು, ಶ್ರೀರಂಗಂ, ಕುಂಭಕೋಣಂ, ಮೇಲ್ಮರತ್ತೂರು, ತಿರುವಣ್ಣಾಮಲೈ ಸೇರಿದಂತೆ ಹಲವು ತೀರ್ಥಕ್ಷೇತ್ರಗಳಿಗೆ ಇವರು ತೆರಳಿ ಮರಳುತ್ತಿದ್ದಾರೆ.
ಇದೇ ರೀತಿಯ ಮಂಡ್ಯದಿಂದ ಯಾತ್ರೆಗೆ ತೆರಳಿದ್ದವರಲ್ಲಿ 30ಕ್ಕೂ ಅಧಿಕ ಮಂದಿಯಲ್ಲಿ ಕೊರೋನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ಅವರನ್ನೆಲ್ಲಾ ಐಸೋಲೋಷನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಂಡಿದೆ. ನಗರದ ಆರಂಭದಲ್ಲಿ ನಾಕಾಬಂಧಿ ಹಾಕಿ ಈ ಬಸ್’ಗಳನ್ನು ಅಲ್ಲಿಯೇ ತಡೆದು ಪ್ರತಿಯೊಬ್ಬರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಎಲ್ಲರಿಗೂ ಆರ್’ಟಿಪಿಸಿಆರ್ ಪರೀಕ್ಷೆ ನಡೆಸಿ, ಸ್ಯಾನಿಟೈಸ್ ಮಾಡಲಾಗುತ್ತಿದೆ.


ಅಲ್ಲದೇ, ಮುಂಜಾಗ್ರತಾ ಕ್ರಮವಾಗಿ ಯಾತ್ರೆಯಿಂದ ಹಿಂದಿರುಗಿದ ಎಲ್ಲರಿಗೂ ೭ ದಿನಗಳ ಕಾಲ ಹೋಂಕ್ವಾರಂಟೈನ್ ಮಾಡಲಾಗುತ್ತಿದ್ದು, ಯಾವುದೇ ಕಾರಣಕ್ಕೂ ಮನೆಗಳಿಂದ ಹೊರಕ್ಕೆ ಬಾರದಂತೆ ಸೂಚಿಸಲಾಗಿದೆ. ಒಂದು ವೇಳೆ ಯಾರಿಗಾದರೂ ಜ್ವರ, ಶೀತ, ತಲೆ ನೋವು ಕಾಣಿಸಿಕೊಂಡರೆ ತತಕ್ಷಣವೇ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ.

By admin

ನಿಮ್ಮದೊಂದು ಉತ್ತರ

error: Content is protected !!