ಬೆಂಗಳೂರು, ಅ.29:
ಕರುನಾಡಿನ ಹೆಮ್ಮೆಯ ಚಲನಚಿತ್ರನಟ ನಟ ಫವರ್ ಸ್ಠಾರ್ ಪುನೀತ್ ರಾಜ್ಕುಮಾರ್ ಅವರು ಇನ್ನಿಲ್ಲ. ಅವರಿಗೆ 46 ವರುಷ ವಯಸ್ಸಾಗಿತ್ತು.
ಇಂದು ಬೆಳಿಗ್ಗೆ ಜಿಲ್ ಅವಧಿಯಲ್ಲಿ ಹೃದಯಾಘಾತವಾಗಿದ್ದು, ಮದ್ಯಾಹ್ನದ ಹೊತ್ತಿಗೆ ಅವರ ಆರೋಗ್ಯ ಗಂಭೀರವಾಗಿತ್ತು. ಈಗಷ್ಟೆ ವಿಕ್ರಂ ಆಸ್ಪತ್ರೆ ವೈದ್ಯರ ಹೇಳಿಕೆಯಲ್ಲಿ ಪುನೀತ್ ವಿಧಿವಶರಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ.
ಪ್ರೇಮದ ಕಾಣಿಕೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟದ ಪುನೀತ್ ಯುವರತ್ನದ ತನಕ 49 ಚಲನಚಿತ್ರಗಳಲ್ಲಿ ಅಭಿನಯಿಸಿದ್ದರು.
ರಾಜಣ್ಣ ಅವರ ಮಯೂರ ಸಿನಿಮಾ ಶೂಟಿಂಗ್ ವೇಳೆಯಲ್ಲಿ ಅಂದರೆ ಮಾ.15,1972ರಂದು ಪುನೀತ್ ಜನಿಸಿದ್ದರು.

ಕಂಠೀರವ ಕ್ರೀಡಾಂಗಣದಲ್ಲಿ ಅಂತಿಮ ದರ್ಶನ
ರಾಜಣ್ಣ ಅವರ ಕೊನೆ ಮಗ ಎನ್ನುವ ಜೊತೆ ಅವರ ಅಭಿನಯದ ಸಿನಿಮಾಗಳಲ್ಲಿ ರಾಜ್ಯದ ಅಪಾರ ಅಭಿಮಾನಿಗಳನ್ನು ಹೊಂದಿದ್ದರು.
ಪುನೀತ್ ನಿಧನಕ್ಕೆಕರುನಾಡು ಹಾಗೂ ದೇಶ ವಿದೇಶಗಳಲ್ಲಿ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಇಡೀ ಚಿತ್ರತಂಡ ಆಸ್ಪತ್ರೆ ಆವರಣದಲ್ಲಿ ಬಿಕ್ಕಿ ಬಿಕ್ಕಿ ಕಂಬನಿಗರೆಯುತ್ತಿದೆ. ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಶಿವರಾಜ್ ಕುಮಾರ್ ನಡೆಸಲಿರುವ ಪತ್ರಿಕಾಗೋಷ್ಟಿಯಲ್ಲಿ ಪುನೀತ್ ಆರೋಗ್ಯ ಸ್ಥಿತಿಯ ಸ್ಪಷ್ಟ ಚಿತ್ರಣ ದೊರೆಯಲಿದೆ ಎನ್ನಲಾಗಿತ್ತು. ಆದರೆ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಯಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ಐಸಿಯುನಲ್ಲಿ ವೈದ್ಯರು ಚಿಕಿತ್ಸೆ ನೀಡಲಾಗುತ್ತಿತ್ತು. ಬೆಳಿಗ್ಗೆ ಮನೆಯಲ್ಲಿ ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ಸ್ವಲ್ಪ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆತರಲಾಗಿದೆ.
ವಿಷಯ ಬಹಿರಂಗ ವಾಗುತ್ತಿದ್ದಂತೆಯೇ ಆಸ್ಪತ್ರೆಯ ಬಳಿ ಅಭಿಮಾನಿಗಳು ಗುಂಪು ಸೇರುತ್ತಿದ್ದಾರೆ. ಜತೆಗೆ ಪೊಲೀಸರು ಸಹ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಇಂದೇ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-೨ ಸಿನಿಮಾ ರಿಲೀಸ್ ಆಗಿದ್ದು, ಶಿವಣ್ಣ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಮಾಹಿತಿ ತಿಳಿದಾಕ್ಷಣ ಶಿವಣ್ಣ ಆಸ್ಪತ್ರೆಗೆ ಬಂದಿದ್ದಾರೆ.
ಸ್ಥಳಕ್ಕೆ ಬೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಇಡೀ ಚಿತ್ರ ತಂಡದ ನಾಯಕ, ನಾಯಕಿಯರು ಕಲಾವಿದರು ಹಾಗೂ ಅಪಾರ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಆಸ್ಪತ್ರೆ ಆವರಣಕ್ಕೆ ಬಿಗಿ ಬಂದೂಬಸ್ತ್ ಏರ್ಪಡಿಸಲಾಗಿದೆ. ಕಂಠೀರವ ಕ್ರೀಡಾಂಗಣದಲ್ಲಿ ಅವರ ಅಂತಿಮ ದರುಶನಕ್ಕೆ ವ್ಯವಸ್ಥೆ ಮಾಡಲಾಗಿದೆ.


