ಕರುನಾಡಿನ ಹೆಮ್ಮೆಯ ಚಲನಚಿತ್ರನಟ ನಟ ಫವರ್ ಸ್ಠಾರ್ ಪುನೀತ್ ರಾಜ್ಕುಮಾರ್ ಅವರಿಗೆ ಇಂದು ಬೆಳಿಗ್ಗೆ ಲಘು ಹೃದಯಾಘಾತವಾಗಿದ್ದು, ಮದ್ಯಾಹ್ನದ ಹೊತ್ತಿಗೆ ಅವರ ಆರೋಗ್ಯ ಗಂಭೀರವಾಗಿರುವುದು ರಾಜ್ಯವನ್ನೆ ಕಂಬನಿಗರೆಯುವಂತೆ ಮಾಡಿದೆ. ಸದ್ಯದಲ್ಲೇ ಮುಖ್ಯಮಂತ್ರಿ ಬೊಮ್ಮಾಯಿ ಹಾಗೂ ಶಿವರಾಜ್ ಕುಮಾರ್ ನಡೆಸಲಿರುವ ಪತ್ರಿಕಾಗೋಷ್ಟಿಯಲ್ಲಿ ಪುನೀತ್ ಆರೋಗ್ಯ ಸ್ಥಿತಿಯ ಸ್ಪಷ್ಟ ಚಿತ್ರಣ ದೊರೆಯಲಿದೆ.
ಬೆಳಿಗ್ಗೆ ಅವರನ್ನು ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸೇರಿಸಲಾಗಿದೆ. ಆಸ್ಪತ್ರೆಯಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ಐಸಿಯುನಲ್ಲಿ ವೈದ್ಯರು ಚಿಕಿತ್ಸೆ ನೀಡಲಾಗುತ್ತಿದೆ. ಬೆಳಿಗ್ಗೆ ಮನೆಯಲ್ಲಿ ಜಿಮ್ನಲ್ಲಿ ವ್ಯಾಯಾಮ ಮಾಡುವಾಗ ಸ್ವಲ್ಪ ಎದೆ ನೋವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ವಿಕ್ರಂ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಸದ್ಯಕ್ಕೆ ಮಾಹಿತಿ ಲಭ್ಯವಾಗಿದೆ. ಶಿವರಾಜ್ಕುಮಾರ್ ಅವರ ಮಗಳು ಆಸ್ಪತ್ರೆಗೆ ಈಗಾಗಲೇ ಭೇಟಿ ಕೊಟ್ಟಿದ್ದಾರೆ. ವಿಷಯ ಬಹಿರಂಗವಾಗುತ್ತಿದ್ದಂತೆಯೇ ಆಸ್ಪತ್ರೆಯ ಬಳಿ ಅಭಿಮಾನಿಗಳು ಗುಂಪು ಸೇರುತ್ತಿದ್ದಾರೆ. ಜತೆಗೆ ಪೊಲೀಸರು ಸಹ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಇಂದೇ ಶಿವರಾಜ್ ಕುಮಾರ್ ಅಭಿನಯದ ಭಜರಂಗಿ-೨ ಸಿನಿಮಾ ರಿಲೀಸ್ ಆಗಿದ್ದು, ಶಿವಣ್ಣ ಸಿನಿಮಾದ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಮಾಹಿತಿ ತಿಳಿದಾಕ್ಷಣ ಶಿವಣ್ಣ ಆಸ್ಪತ್ರೆಗೆ ಬಂದಿದ್ದಾರೆ.
ಸ್ಥಳಕ್ಕೆ ಬೇಟಿ ನೀಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಇಡೀ ಚಿತ್ರ ತಂಡದ ನಾಯಕ, ನಾಯಕಿಯರುಕಲಾವಿದರು ಹಾಗೂ ಅಪಾರ ಅಭಿಮಾನಿಗಳು ಆಗಮಿಸುತ್ತಿದ್ದಾರೆ. ಆಸ್ಪತ್ರೆ ಆವರಣಕ್ಕೆ ಬಿಗಿ ಬಂದೂಬಸ್ತ್ ಏರ್ಪಡಿಸಲಾಗಿದೆ.
