ವರ್ಣಿಸಲು ಪದಗಳೇ ಇಲ್ಲ ಈ ಸ್ಥಾನ ತುಂಬಿದ ಮಹಾನ್ ಚೇತನದ ಬಗ್ಗೆ; ಬಾಲ್ಯದಿಂದಲೂ ಅಣ್ಣಾ ತಮ್ಮಂದಿರನ್ನು ಜೊತೆ ಬಾಂಧವ್ಯ ಇಲ್ಲದೇ ಬೆಳೆದ ನಮಗೆ, ಕೇವಲ ಶಾಲಾ ಕಾಲೇಜುಗಳಲ್ಲಿ ಸಿಕ್ಕಂತವರಲ್ಲೇ ಅಣ್ಣಾನ ರೂಪ ಕಂಡು ಸಂತೋಷ ಪಡುತ್ತಿದ್ಧೆವು. ಅವರಲ್ಲಿ ನಮ್ಮ ಸ್ವಂತ ಅಣ್ಣನ್ನು ಕಾಣುತ್ತಿದ್ದೆವು. ಎಲ್ಲರೂ ಸಹ ಎಲ್ಲಾ ಸಂದರ್ಭದಲ್ಲಿ ಜೊತೆಯಾಗಿ ಆ ಸಂಭಂಧ ಉಳಿಸಿಕೊಳ್ಳಲು ಆಗಲಿಲ್ಲ ಕೆಲಸದ ಒತ್ತಡ ಮುತಾಂದ ಕಾರಣಗಳಿಂದ ದೂರವಾದರು. ಆದರೆ ಉನ್ನತ ಶಿಕ್ಷಣದ ಸಮಯದಲ್ಲಿ ಒಂದು ಕೆಟ್ಟ ಸಂದರ್ಭದಲ್ಲಿ; ಸಿಕ್ಕಂತಹ ದೇವರು ಕೊಟ್ಟ ಈ ಜನ್ಮದ ಅದ್ಬುತ ಕೊಡುಗೆ ಎಂದರೇ ನನ್ನ ಅಣ್ಣ. ಜಾತಿಯಲ್ಲಿ ಕೀಳು ಎಂದು ಹಲವಾರು ಜನ ಅವಮಾನ ಮಾಡಿದರೂ, ಆದರೆ ಅಂತಹ ಕೆಟ್ಟ ಸಂದರ್ಭದಲ್ಲಿ ನಮ್ಮನ್ನು ತನ್ನ ಸ್ವಂತ ತಂಗಿಯರಿಗೆ ರಕ್ಷಣೆ ಮಾಡಿದ್ದು ಇದೇ ನನ್ನ ಅಣ್ಣ. ಸಂಭಂಧಿಕರೇ ಕೈ ಚೆಲ್ಲಿ ಹಾಳಾಗಿ ಹೋಗಲಿಯೆಂದು ನಮ್ಮ ಜೀವನ ಹಾಳು ಮಾಡಲು ಹೋದಾಗ ಇದೇ ನನ್ನ ಕೆಳಜಾತಿಯ ಅಣ್ಣಾ ಬಂದು ನಮ್ಮ ಕೈ ಇಡಿದರು. ಇಲ್ಲಿ ಜಾತಿ ಬರಲಿಲ್ಲ, ಕೇವಲ ಮನುಷ್ಯತ್ವ, ಅನುಕಂಪ ಉತ್ತಮ ಸಂಬಂಧ ಮಾತ್ರ. ವ್ಯಕ್ತಿ ಎಷ್ಟೇ ದೊಡ್ಡ ಜಾತಿಯಲ್ಲಿ ಹುಟ್ಟಿದರು.
ಉತ್ತಮ ವ್ಯಕ್ತಿತ್ವ, ಸಹಾಯ ಮಾಡುವ, ಮನಸ್ಸು, ಯೋಗ್ಯತೆ ಇಲ್ಲಯೆಂದರೆ ಅವನ ಬದುಕಿಗೆ ಬೆಲೆ ಇರುವುದಿಲ್ಲ. ನಾನು ಬೇರೆ ವರ್ಗವಾದರು ಸಹ ನಮ್ಮಗೆ ಅಣ್ಣಾನ ಸ್ಥಾನದಲ್ಲಿ, ತಂದೆಯ ಸ್ಥಾನದಲ್ಲಿ ಇಂದಿಗೂ ನಿಂತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ. ಎಷ್ಟೇ ಎಂತಹದ್ದೆ ಪರಿಸ್ಥಿತಿಯಲ್ಲಿ ಇದ್ದರು ಒಂದು ಕರೆ ಸಾಕು ಓಡಿ ಬರುತ್ತಾರೆ. ಇಂತಹ ಸಂಬಂಧಗಳು ಸಿಗುವುದು ಅಪರೂಪ. ಜೊತೆಯಲ್ಲಿ ಸ್ವಂತ ಅಣ್ಣನಾಗಿ ಹುಟ್ಟಿದ್ದರೂ ಅದರ ಮಹತ್ವ, ಅವನಿಗೆ ಚೆನ್ನಾಗಿ ತಿಳಿದಿತ್ತು. ಪ್ರತಿ ಹಂತದಲ್ಲೂ ನನ್ನ ತಂಗಿಯರು ಎಂದು ಹೇಳುವ ಅವನ ನಿಜವಾದ ನಿಷ್ಕಲ್ಮಶ ಪ್ರೀತಿ ಯಾರು ಕೊಡಲು ಸಾಧ್ಯವಿಲ್ಲ. ಎಕೆಂದರೆ ಈಗಿನ ಕಾಲದಲ್ಲಿ ಲಾಭ ಇಲ್ಲದೇ ಸ್ವಂತ ಚಿಕ್ಕಪ್ಪ ದೊಡ್ಡಪ್ಪರೇ ನಮ್ಮ ಸಹಾಯಕ್ಕೆ ಬರೋಲ್ಲ ಆದರೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿಸ್ವಾರ್ಥ ಮನಸಿನಿಂದ ನಮ್ಮನ್ನು ತನ್ನ ಕುಟುಂಬ ಎಂಬ ಭಾವನೆಯಿಂದ ನಮ್ಮ ಜವಾಬ್ದಾರಿ ಹೊತ್ತುಕೊಂಡಿರುವ ನಿಜವಾದ ಅಣ್ಣಾ. ಎಲ್ಲರೂ ಕೈ ಬಿಟ್ಟಾಗ ನಾನು ಇದ್ದೆನೆ ಎಂದು ಧೈರ್ಯ ತುಂಬಿ, ಬದುಕುವ ಭರವಸೆ, ಆತ್ಮವಿಶ್ವಾಸ ತುಂಬುವ ಕೆಲಸ ಮಾಡುವವರು ತುಂಬಾ ವಿರಳ ಅದರಲ್ಲಿ ನನ್ನ ಅಣ್ಣಾ ಕೂಡ ಒಬ್ಬರು. ಎಲ್ಲರೂ ಕೈ ಬಿಟ್ಟಾಗ ನಾನು ಇದ್ದೆನೆ ಎಂದು ನಮ್ಮ ಪಾಲಿಗೆ ದೊಡ್ಡ ಶಕ್ತಿಯಾಗಿ ನಿಂತವನು. ಆ ಶಕ್ತಿಯೇ ಇಂದಿಗೂ ನಮ್ಮನ್ನು ತುಳಿಯಬೇಕು, ಹಾಳು ಮಾಡಬೇಕು ಎಂದು ಹೊಂಚು ಹಾಕುವವರಿಗೆ ಮುಳ್ಳಾಗಿದೆ. ದೇವರು ಕಷ್ಟ ಸಂದರ್ಭದಲ್ಲಿ ಒಳ್ಳೆಯವರಿಗೆ ಯಾವುದಾದರೂ ರೂಪದಲ್ಲಿ ಬಂದು ಕಾಪಾಡುತ್ತಾನೆ ಎಂದು ಹೇಳುತ್ತಾರೆ. ಅದ್ಕೆ ಈ ನನ್ನ ಅಣ್ಣಾನೇ ಉತ್ತಮ ಸಾಕ್ಷಿ. ಕೇವಲ ಓಡಿ ಹುಟ್ಟಿದವರು ಮಾತ್ರ ಅಣ್ಣಾ ತಂಗಿ ಅಲ್ಲ. ನಮ್ಮನ್ನು ತನ್ನ ಕುಟುಂಬವೆಂದು ಭಾವಿಸಿ ಸದಾ ಶುಭ ಹಾರೈಸುವ ಎಲ್ಲಾ ನಿಷ್ಕಲ್ಮಶ, ಅಣ್ಣಾ ತಂಗಿಯ ಬಾಂಧವ್ಯದಲ್ಲಿ ನಿಜವಾದ ಪ್ರೀತಿ, ಪ್ರೇಮ, ಇರುತ್ತದೆ. ಅಂತಹ ಸ್ಥಾನ ತುಂಬಿದ ನನ್ನ ಅಣ್ಣ ಪ್ರವೀಣ್ ಶಾಮನೂರುಗೆ ಈ ಜೀವನ ಪೂರ್ತಿ ಎಷ್ಟು ಋಣ ತೀರಿಸಲು ಹೋದರು ಕಡಿಮೆ. ಇಂತಹ ದೊಡ್ಡ ದೈತ್ಯ ಶಕ್ತಿಯೇ ನಮ್ಮ ಬಳಿ ಇದೆ. ಈಗಾಗಲೇ ಹೇಳಿದೆ ಕೆಳವರ್ಗವೆಂದು ಆದರೆ ವ್ಯಕ್ತಿತ್ವದಲ್ಲಿ ಇವನನ್ನು ಮೀರಿಸಲು ಯಾರಿಂದಲೂ ಸಾಧ್ಯವಿಲ್ಲ. ಕೆಲವು ಸಂಭಂಧಿಕರು ಅವಹೇಳನ ಮಾಡುತ್ತಾರೆ ನಿಮ್ಮ ಅಣ್ಣಾ ಇದ್ದಾನೆ ಅವನೇ ನೋಡಿಕೊಳ್ಳುತ್ತಾರೆ. ಆದರೆ ತಮ್ಮ ಜವಾಬ್ದಾರಿ ಎನು ತಮ್ಮ ಮಕ್ಕಳು ಇವರು ಎಂಬುದು ಮಾತ್ರ ಅರಿವು ಇರುವುದಿಲ್ಲ. ಸಂಬಂಧವೇ ಇಲ್ಲದ ನನ್ನ ಅಣ್ಣನಿಗೆ ನಮ್ಮ ಮೇಲೆ ಕಾಳಜಿ ಇದೆ. ಇಂತಹ ಮನೋಭಾವ ಎಲ್ಲರಲ್ಲೂ ಇರುವುದಿಲ್ಲ. ಯಾವ ಜಾತಿಯೂ ಕೀಳು ಅಲ್ಲ; ಎಲ್ಲಾ ಜಾತಿಯಲ್ಲೂ ಕೀಳು ಮಟ್ಟದ ಮನಸ್ಥಿತಿ ಇರುವ ಜನರು ಇರುತ್ತಾರೆ ಎಂಬುದಕ್ಕೆ ನಾನೇ ಉದಾಹರಣೆ. ನಾನು ಮೇಲು ಜಾತಿ ಆದರೆ ಕೀಳು ಮಟ್ಟದ ಜನರು ನಮ್ಮಲ್ಲಿ ಇದ್ದರು ಆದರೆ ನನ್ನ ಅಣ್ಣ ಕೆಳಜಾತಿ ಎಂದು ಅವಮಾನ ಮಾಡಿದರು ಆದರೆ ಮೇಲು ಮಟ್ಟದ ಮನಸ್ಥಿತಿ ಇದೆ. ನಮ್ಮಗೆ ಕಷ್ಟ ಬಂದಾಗ ಮದಕರಿ ನಾಯಕನ ರೂಪದಲ್ಲಿ ಬಂದವನು. ನಮ್ಮ ಉಳಿಸಲು ನಾಯಕನ ರೀತಿಯಲ್ಲಿ ಹೋರಾಡಿದ್ದು ಇಂದಿಗೂ ಕಣ್ಣ ಮುಂದೆ ಹಾಗೆ ಇದೆ. ದೊಡ್ಡ ದೊಡ್ಡ ಭೋಧನೆ ಮಾಡಿದ ಮಹಾನುಭಾವರು ಕೈ ಬಿಟ್ಟಾಗ ಇದೇ ನನ್ನ ಅಣ್ಣ ದೊಡ್ಡತನ ತೋರಿದ ನಿಜವಾದ ಮದಕರಿ ನಾಯಕ ಎನಿಸಿತು. ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಯಾವುದೇ ಲಾಭ ಅಪೇಕ್ಷೆಣೆಯಿಲ್ಲದೆ ತನ್ನ ಹಲವಾರು ಸಮಾಜಮುಖಿ, ರಾಜಕೀಯ, ಕೆಲಸಗಳ ನಡುವೆ ನಮಗಾಗಿಯೇ ಸಮಯ ಮಾಡಿಕೊಂಡು ನಮ್ಮ ಕಾಳಜಿ ಮಾಡುತ್ತಾರೆ. ತಾನು ರಾಜಕಾರಣಿ ಮುಂದೆ ನನ್ನ ಇಮೇಜುಗೆ ಇದು ಕಪ್ಪು ಚುಕ್ಕೆ ಆಗಬಹುದು ಎಂದು ಸಹ ಯೋಚಿಸದೆ ನಮ್ಮ ಪಾಲಿಗೆ ದೇವರಾಗಿ ಬಂದವನು. ಈ ನನ್ನ ಅಣ್ಣ ಮತ್ತು ನಾನು ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಲಿಲ್ಲ, ಆದರೆ ನಮಗಾಗಿ ಅವನ ಜೀವ ಸದಾ ಮಿಡಿಯುತ್ತಿರುತ್ತದೆ. ವ್ಯಕ್ತಿತ್ವ ಹೇಗೆಂದರೆ ಎಲ್ಲರೂ ಮನುಷ್ಯರೇ ಎಂಬ ಸಾಮಾಜಿಕ ಸಾಮರಸ್ಯದ ಬದುಕನ್ನು ನಡೆಸಲು ಸದಾ ಹಾತೊರೆಯುವ ಎರಡನೇ ಬಸವಣ್ಣನೆಂದು ಹೇಳಬಹುದು. ಯಾರನ್ನು ಸಹ ಹಾಗೆ ಕಳುಹಿಸುವುದಿಲ್ಲ ಅವರ ಕಷ್ಟ ಕಾರ್ಪಣ್ಯಗಳನ್ನು ಕೇಳಿ ಅದಕ್ಕೆ ತನ್ನಿಂದ ಏನಾದರೂ ಸಹಾಯ ಆಗಬಹುದಾದ ಎಲ್ಲವನ್ನೂ ಮಾಡುತ್ತಾನೆ. ಇಂತಹ ಅಣ್ಣಾ ಸಿಕ್ಕಿದ್ದೆ ನಮ್ಮ ಪುಣ್ಯ.
ಇಂತಹ ನನ್ನ ನಲ್ಮೆಯ ಪ್ರೀತಿಯ ಅಣ್ಣಾನಿಗೆ “ರಕ್ಷಾ ಬಂಧನದ ಶುಭಾಶಯಗಳು” ನಮ್ಮ ಜೀವನದಲ್ಲಿ ಏನೇ ಸಾಧನೆ ಮಾಡಿದರು ಸಹ ಈ ನನ್ನ ಅಣ್ಣ ಕೊಟ್ಟ ಭಿಕ್ಷೆ ಎಂದೇ ಹೇಳಬಹುದು. ಜೀವನವೇ ಬೇಡ ಎಂದಿನಿಸಿದಾಗ ಬದುಕುವ ಛಲ ತುಂಬಿ, ಆತ್ಮಸ್ಥೈರ್ಯ ತುಂಬಿ ನಿನಗಾಗಿ ಬದುಕು, ತುಳಿದವರ ಮುಂದೆ ತಲೆ ಎತ್ತು, ನೂರು ಬಾರಿ ಸೋತರೂ ಪರವಾಗಿಲ್ಲ ಆದರೆ ಇಂತಹ ಕೊಳಕು ಜನಗಳಿಗೆ ಹೆದರಿ ಸಾಯಬೇಡವೆಂದಕ ಮತ್ತೆ ಜೀವನೋತ್ಸವ ಚಿಗುರಿಸಿದ. ಇಂದಿಗೆ ಅಣ್ಣಾ ಸಿಕ್ಕು ನಾಲ್ಕು ವರ್ಷಗಳು ಆದವು. ಈ ರಿಕ್ಷಾ ಬಂಧನ ನನ್ನ ಅಣ್ಣಾನ ಎಲ್ಲಾ “ಕನಸು, ಗುರಿ’ಗಳನ್ನು ಈಡೇರಿಸಲು ಉತ್ತಮ ಸ್ಥಾನ ಹೊಂದಿ ದೇಶಕ್ಕೆ ಹೆಸರು ತರಲಿಯೆಂದು ಹಾರೈಸುವೆ.
ಇನ್ನು ಈ ರಿಕ್ಷಾ ಬಂಧನ ನಮ್ಮ ಸಂಸ್ಕೃತಿಯ ಪವಿತ್ರವಾದ ಹಬ್ಬವಾಗಿದೆ. ಇದರ ಹಿಂದಿನ ಕಥೆಯೇ ಮನಮೋಹಕರವಾಗಿದೆ.
ರಕ್ಷಾ ಬಂಧನದ ಇತಿಹಾಸವೆನೆಂದರೆ ಹಿಂದೂ ಕ್ಯಾಲೆಂಡರ್ ಪ್ರಕಾರ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ರಾಖಿಯನ್ನು ಸಹೋದರಿ ಸಹೋದರನ ಮಣಿಕಟ್ಟಿಗೆ ಕಟ್ಟುತ್ತಾರೆ. ಜತೆಗೆ, ಸಹೋದರ ತನ್ನ ಸಹೋದರಿಗೆ ಉಡುಗೊರೆಯನ್ನು ನೀಡುತ್ತಾರೆ. ಭಾರತದಲ್ಲಿ, ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ರಕ್ಷಾ ಬಂಧನ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರತಿ ಸಹೋದರಿಯು ಪ್ರತಿವರ್ಷ ತನ್ನ ಸಹೋದರರ ಮಣಿಕಟ್ಟಿನ ಮೇಲೆ ‘ರಾಖಿ’ಎಂದು ಕರೆಯಲ್ಪಡುವ ಪವಿತ್ರ ದಾರವನ್ನು ಕಟ್ಟಲು ಕಾಯುತ್ತಾಳೆ.
ಇತಿಹಾಸ, ದಂತಕಥೆ
ದಂತಕತೆಗಳ ಪ್ರಕಾರ ಅಲೆಕ್ಸಾಂಡರನು ಭಾರತದ ಮೇಲೆ ದಂಡೆತ್ತಿ ಬಂದಾಗ ಅವನನ್ನು ಧೈರ್ಯದಿಂದ ಎದುರಿಸಿದವನು ಪೋರಸ್. ಆಗ ಅವರಿಬ್ಬರ ನಡುವೆ ಯುದ್ಧ ಆರಂಭಗೊಂಡಿತು. ಇದೇ ಸಮಯದಲ್ಲಿ ಅಲೆಕ್ಸಾಂಡರನ ಪತ್ನಿ ರೊಕ್ಸಾನಳು ಪೋರಸ್‌ಗೆ ಒಂದು ಪವಿತ್ರ ದಾರವನ್ನು (ರಾಖಿ) ಕಳುಹಿಸಿದಳು. ಅದರ ಜೊತೆಗೆ ಒಂದು ಮನವಿ ಸಹ ಇತ್ತು. ತನ್ನ ಪತಿಯನ್ನು ಕೊಲ್ಲದಿರುವಂತೆ ಕೇಳಿಕೊಂಡ ಮನವಿ ಅದಾಗಿತ್ತು. ಮುಂದೆ ನಡೆದ ಯುದ್ಧದಲ್ಲಿ ಪೋರಸ್ ಅಲೆಕ್ಸಾಂಡರನನ್ನು ಕೊಲ್ಲದೆ ಉಳಿಸಿದನು. ಇದಕ್ಕೆ ಕಾರಣ ಆತನ ಕೈಯಲ್ಲಿ ಆತ ಕಟ್ಟಿಕೊಂಡಿದ್ದ ರಾಖಿ ಅವನನ್ನು ತಡೆದು ನಿಲ್ಲಿಸಿತ್ತು. ಮತ್ತೊಂದು ಘಟನೆಯಲ್ಲಿ ಚಿತ್ತೂರಿನ ರಾಣಿ ಕರ್ಣಾವತಿಯು ಗಂಡನನ್ನು ಕಳೆದುಕೊಂಡು ವೈಧವ್ಯದ ಜೀವನ ನಡೆಸುತ್ತಿದ್ದಳು. ಆಗ ಆಕೆಯು ಚಕ್ರವರ್ತಿ ಹುಮಾಯುನನಿಗೆ ರಾಖಿಯನ್ನು ಕಳುಹಿಸಿದಳು. ಇದಕ್ಕೆ ಕಾರಣ ಚಕ್ರವರ್ತಿ ಬಹದ್ದೂರ್ ಷಾನು ಈಕೆಯ ರಾಜ್ಯದ ಮೇಲೆ ದಂಡೆತ್ತಿ ಬರುವ ನಿರ್ಧಾರಕ್ಕೆ ಬಂದಿದ್ದನು. ಆಗ ಆಕೆಯು ಹುಮಾಯೂನನ ಸಹಾಯವನ್ನು ಬಯಸಿ ರಾಖಿಯನ್ನು ಕಳುಹಿಸಿದ್ದಳು.ಇದನ್ನು ಮುಟ್ಟುವ ಮೂಲಕ ಸ್ವೀಕರಿಸಿದ ಹುಮಾಯೂನನು ತನ್ನ ಸೇನೆಯನ್ನು ರಾಣಿ ಕರ್ಣಾವತಿಯ ಸಹಾಯಕ್ಕೆ ಧಾವಿಸುವಂತೆ ಸೂಚಿಸಿದನು. ಆದರೆ ಸೈನ್ಯವು ಅಲ್ಲಿಗೆ ತಲುಪಲು ತಡವಾಯಿತು. ಇದೇ ವೇಳೆಗೆ ರಾಣಿ ಕರ್ಣಾವತಿಯು ಇತರೆ ಹೆಂಗಸರೊಂದಿಗೆ ಕೂಡಿ, ತನ್ನ ಮಾನ ರಕ್ಷಣೆಗಾಗಿ ಜೌಹರ್ ಮಾಡಿಕೊಳ್ಳುವ ಮೂಲಕ ಪ್ರಾಣ ತ್ಯಾಗ ಮಾಡಿದ್ದಳು. ಮುಂದೆ ಬಹದ್ದೂರ್ ಷಾನನ್ನು ಹುಮಾಯೂನ್ ಹೊರಗೆ ಹಾಕಿ, ಕರ್ಣಾವತಿಯ ಮಗ ವಿಕ್ರಮಜೀತನನ್ನು ಸಿಂಹಾಸನದಲ್ಲಿ ಕೂರಿಸಿದನು.
ಈ ರಕ್ಷಾಬಂಧನವು ಭಾರತೀಯ ಸಂಸ್ಕೃತಿಯಲ್ಲಿ ತನ್ನದೇ ಮಹತ್ವ, ಪ್ರಾಮುಖ್ಯತೆ ಪಡೆದಿದೆ. ರಕ್ಷಾಬಂಧನಕ್ಕೆ ಭಾರತದಲ್ಲಿ ಹೆಚ್ಚು ಮಹತ್ವವಿದೆ. ಇದನ್ನು ಹಬ್ಬದಂತೆ ಆಚರಿಸಲಾಗುತ್ತದೆ. ಸಹೋದರ – ಸಹೋದರಿಯರ ನಡುವಿನ ಪ್ರೀತಿಗೆ ಈ ದಿನ ಸಮರ್ಪಣೆಯಾಗಿದೆ. ಹಿಂದೂ ಧರ್ಮದಲ್ಲಿ ರಕ್ಷಾ ಬಂಧನಕ್ಕೆ ಹೆಚ್ಚು ಪ್ರಾಮುಖ್ಯತೆ ಇದೆ.ರಕ್ಷಾ ಬಂಧನ ರಕ್ಷೆ ಹಾಗೂ ಬಂಧನ ಎಂಬ ಎರಡು ಪದಗಳಿಂದ ಕೂಡಿದೆ. ಪ್ರಸ್ತುತ, ಈ ಹಬ್ಬವು ಸಹೋದರ-ಸಹೋದರಿಯರ ನಡುವಿನ ಪ್ರೀತಿ ಮತ್ತು ಬಂಧದ ಸಮಾನಾರ್ಥಕವಾಗಿದೆ ಮತ್ತು ಇದು ಸಹೋದರಿ ಮತ್ತು ಸಹೋದರರ ನಡುವಿನ ಪ್ರೀತಿಯನ್ನು ಬಲಪಡಿಸುವ ಮತ್ತು ಪುನರುಚ್ಚರಿಸುವ ಉತ್ಸವವಾಗಿದೆ ಎಂದು ಹೇಳಬಹುದು. ಒಂದು ಕಡೆ, ಸಹೋದರನು ತನ್ನ ಸಹೋದರಿಯನ್ನು ನೋಡಿಕೊಳ್ಳುವುದಾಗಿ ಮತ್ತು ತನ್ನ ಜೀವನಪರ್ಯಂತ ಅವಳನ್ನು ರಕ್ಷಿಸುವುದಾಗಿ ಭರವಸೆ ನೀಡುತ್ತಾನೆ. ಮತ್ತೊಂದೆಡೆ, ಸಹೋದರಿ ತನ್ನ ಸಹೋದರನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತಾಳೆ. ಈ ರಕ್ಷಾ ಬಂಧನಕ್ಕೆ ಪ್ರತಿ ಹಿಂದೂ ಮನೆಗಳಲ್ಲಿ ಹಬ್ಬದ ತಿಂಗಳು ಬರುವ ಮುನ್ನವೇ ತಯಾರಿಗಳು ಆರಂಭವಾಗಿರುತ್ತದೆ. ಸಹೋದರನಿಗೆ ಕಟ್ಟಲು ರಾಖಿಯನ್ನು ಆಯ್ಕೆ ಮಾಡುವ ವಿಚಾರದಲ್ಲೂ ಸಹೋದರಿ ಖುಷಿ ಖುಷಿಯಾಗಿ ಇರುತ್ತಾರೆ. ರಕ್ಷಾ ಬಂಧನದ ಹಿಂದಿನ ದಿನ ರಾತ್ರಿಯೇ ಸಿಹಿ ತಿಂಡಿಗಳನ್ನು ತಯಾರು ಮಾಡಲಾಗುತ್ತಿದೆ. ಈ ರೀತಿಯಾಗಿ ರಕ್ಷಾ ಬಂಧನವನ್ನು ಆಚರಣೆ ಮಾಡುತ್ತಾರೆ. ಇಂತಹ ಬಾಂಧವ್ಯಕ್ಕೆ ಒಡಹುಟ್ಟಿದವರೇ ಆಗಬೇಕಿಲ್ಲ ಈ ಸ್ಥಾನ ತುಂಬುವವರು ಎಲ್ಲರೂ ಸಹೋದರರು ಆಗುತ್ತಾರೆ.
ಈ ಬಾಂಧವ್ಯವನ್ನು ಬೆಸೆಯಲು ಕೇವಲ ಒಡಹುಟ್ಟಿದವರೊಂದಿಗೆ ಆಚರಣೆ ಮಾಡಬೇಕೆಂದಿಲ್ಲ ನಮ್ಮನ್ನು ಕಾಪಾಡುವ ಸೈನಿಕರು ಸಹ ನಮ್ಮ ಅಣ್ಣ ತಮ್ಮಂದಿರು ಆಗುತ್ತಾರೆ. ಅವರಿಗೂ ಸಹ ನಮ್ಮ ರಕ್ಷಾ ಬಂಧನದ ಹಾರೈಕೆ ಇರಬೇಕು. ಎಕೆಂದರೆ ದೇಶವನ್ನು ಕಾಪಾಡುತ್ತಾರೆ, ಅವರಿಗೆ ಸದಾ ನಮ್ಮ ಶ್ರೀರಕ್ಷೆ ಕಳುಹಿಸಬೇಕು. ಅವರೇ ಇಲ್ಲದೇ ಹೋದರೆ ನಾವುಗಳು ದೇಶದ ಒಳಗಡೆ ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಸೈನಿಕರು ನಮ್ಮ ನಿಜವಾದ ಅಣ್ಣಾ ತಮ್ಮಂರಿರು ಇವರುಗಳನ್ನು ಸದಾ ದೇವರು ಚೆನ್ನಾಗಿ ಇಟ್ಟಿರಲೆಂದು ಆ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾನೆ.
ಮತ್ತೋಮ್ಮೆ ನನ್ನ ಎಲ್ಲಾ ಯೋಧರಿಗೆ ಹಾಗೂ ನನ್ನ ಅಣ್ಣಾನಿಗೆ ‘ರಕ್ಷಾ ಬಂಧನದ: ಶುಭಾಶಯಗಳು. ಈ ಬಂಧನ ಏಳೇಳು ಜನ್ಮದ ಅನುಬಂಧನವಾಗಿರಲಿ.
ಬಿಂದು ಆರ್ .ಡಿ. ರಾಂಪುರ