ಶಿವಮೊಗ್ಗ: ಹೊಸನಗರ ತಾಲೂಕಿನಲ್ಲಿ ಚೀಟಿ ವ್ಯವಹಾರದಲ್ಲಿ ಮೋಸ ಮಾಡಿದ ಆರೋಪದ ಮೇರೆಗೆ ದಂಪತಿಗಳಿಗೆ ಜೈಲು ಶಿಕ್ಷೆ ವಿಧಿಸಿ ಇಲ್ಲಿನ ಮುನ್ಸಿಫ್ ನ್ಯಾಯಾಲಯ ತೀರ್ಪು ನೀಡಿದೆ.
ತಾಲೂಕಿನ ಅಂತೋಣಿ ಡಿಸೋಜ ಹಾಗೂ ಪ್ರಮೀಳಾ ಡಿಸೋಜ ದಂಪತಿಗಳಿಗೆ ಜೆಎಂಎಫ್ ಸಿ ನ್ಯಾಯಾಧೀಶರಾದ ಕೆ.ರವಿಕುಮಾರ್ ಅವರು 2ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಚೀಟಿ ವ್ಯವಹಾರದಲ್ಲಿ ಮೋಸ ಮಾಡಿದ್ದಾರೆ ಎಂದು ಇಪಿಸಿ ಕಲಂ 420 ರ ಅನ್ವಯ ತಾಲೂಕಿನ ವಾರಂಬಳ್ಳಿ ರಾಘವೇಂದ್ರ ಹಾಗೂ ಇತರರು ಪ್ರಕರಣ ದಾಖಲಿಸಿದ್ದರು.
ಪ್ರಕರಣ ವಿವರ: 2007ರಿಂದ 2010ರ ಅವಧಿಯಲ್ಲಿ ಪಟ್ಟಣದಲ್ಲಿ ಚೀಟಿ ವ್ಯವಹಾರ ನಡೆಸುವುದಾಗಿ ರಾಘವೇಂದ್ರ ಅವರಿಂದ ಪ್ರತಿ ಕಂತಿಗೆ 10 ಸಾವಿರದಂತೆ 2 ಲಕ್ಷವನ್ನು ದಂಪತಿ ಪಡೆದಿದ್ದರು. ಚೀಟಿ ಕಂತು ಅವಧಿ ಮುಗಿದಿದ್ದರೂ ದಂಪತಿ ಹಣ ಮರು ಪಾವತಿ ಮಾಡದೇ ಮೋಸ ಮಾಡಿದ್ದಾರೆ ಎಂದು ಹೊಸನಗರ ಠಾಣೆಯಲ್ಲಿ ಪ್ರಕರಣ ಮಾಡಲಾಗಿತ್ತು.
ಸರ್ಕಾರದ ಪರವಾಗಿ ಸಹಾಯಕ ವಕೀಲ ವಿಶ್ವನಾಥ ವಾದ