ಶಿವಮೊಗ್ಗ: ಸೆ.10 ರಂದು ನಡೆಯುವ ಶಾಂತಿ ನಡಿಗೆಯ ಸಿದ್ಧತೆಯ ಹಿನ್ನೆಲೆಯಲ್ಲಿ ಸೆ.2 ರಂದು ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಂತಿ ನಡಿಗೆಯ ಆಯೋಜಕರುಗಳಾದ ವಕೀಲ ಕೆ.ಪಿ. ಶ್ರೀಪಾಲ್ ಮತ್ತು ರಾಜ್ಯ ರೈತ ಸಂಘದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಇಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಶಾಂತಿ ನಡಿಗೆಯು ಸೆ.10 ರಂದು ಶಿವಮೊಗ್ಗದ ದಲ್ಲಿ ನಡೆಯಲಿದೆ ಅದಕೆ ಪೂರಕವಾಗಿ ಸೆ .2 ರಂದು ಪೂರ್ವಬಾವಿಯಾಗಿ
ಸಮಾನ ಅಸಕ್ತರು ಮತ್ತು ಪ್ರಮುಖವಾಗಿ ಯುವಕ ಯುವತಿಯರು ಭಾಗವಹಿಸಬೇಕು ಎಂದರು.

ನಗರದ ಅಭಿವೃದ್ಧಿಗೆ ರಸ್ತೆಗಳು, ಕಟ್ಟಡಗಳು ಮತ್ತು ಮೂಲಸೌಕರ್ಯಗಳು ಬೇಕು. ಆದರೆ ಅವುಗಳಿಗಿಂತ ಮೊದಲು ಸಮಾಜದಲ್ಲಿ ಬೇಕಾಗಿರುವುದು ಪರಸ್ಪರ ನಂಬಿಕೆ, ಸುರಕ್ಷತೆ, ಗೌರವ ಮತ್ತು ಸಹಬಾಳ್ವೆ. ಶಾಂತಿ ಇಲ್ಲದ ಕಡೆ ಅಭಿವೃದ್ಧಿ ಸ್ಥಿರವಾಗುವುದಿಲ್ಲ, ಸೌಹಾರ್ದ ಇಲ್ಲದ ಸಮಾಜದಲ್ಲಿ ಭವಿಷ್ಯದ ಕನಸುಗಳು ಬೆಳೆಯುವುದಿಲ್ಲ ಎಂದರು.

ಕಳೆದ ನಾಲ್ಕು ವರ್ಷಗಳಿಂದ ಶಾಂತಿ ನಡಿಗೆ ಆಯೋಜಿಸುತ್ತಾ ಬಂದಿದ್ದೆವೆ. ಈ ವರ್ಷದ ಶಾಂತಿ ನಡಿಗೆ ಕೇವಲ ಒಂದು ಮೆರವಣಿಗೆಯಾಗದೆ, “ನಾವು ಯಾವ ರೀತಿಯ ಶಿವಮೊಗ್ಗವನ್ನು ಮುಂದಿನ ಪೀಳಿಗೆಗೆ ನೀಡಲು ಬಯಸುತ್ತೇವೆ?” ಎಂಬ ಪ್ರಶ್ನೆಗೆ ಯುವಜನತೆ ಒಟ್ಟಾಗಿ ಉತ್ತರಿಸುವ ಜನ ಚಳುವಳಿಯಾಗಬೇಕು. ಅದಕ್ಕಾಗಿ ಈ ಸಿದ್ದತೆ ಎಂದರು.

ಶಿವಮೊಗ್ಗದ ಬಗ್ಗೆ ಕನಸು ಕಾಣುವ, ಶಿವಮೊಗ್ಗದ ಅಭಿವೃದ್ಧಿಯ ಬಗ್ಗೆ ಯೋಚಿಸುವ, ಶಾಂತಿ ಮತ್ತು ಸೌಹಾರ್ದತೆಯನ್ನು ನಗರದ ಶಕ್ತಿಯೆಂದು ನಂಬುವ ಎಲ್ಲಾ ಜೆನ್ ಝೇಡ್ ಯುವಕ-ಯುವತಿಯರಿಗೆ ಸೆ.2 ರ ಸಂಜೆ 5 ಗಂಟೆಗೆ ಶಿವಮೊಗ್ಗದ ಪತ್ರಿಕಾ ಭವನದಲ್ಲಿ ನಡೆಯುವ ಪೂರ್ವಭಾವಿ ಸಭೆಗೆ ಆತ್ಮೀಯ ಮತ್ತು ಮುಕ್ತ ಆಹ್ವಾನ ನೀಡಲಾಗಿದೆ.

ಶಿವಮೊಗ್ಗದ ಬಗ್ಗೆ ಮಾತನಾಡೋಣ. ನಮ್ಮ ಕನಸಿನ ಶಿವಮೊಗ್ಗವನ್ನು ರೂಪಿಸೋಣ. ಶಾಂತಿ, ಸೌಹಾರ್ದ ಮತ್ತು ಸಹಬಾಳ್ವೆಯನ್ನು ‘ಬ್ರಾಂಡ್ ಶಿವಮೊಗ್ಗ’ದ ಹೆಮ್ಮೆಯ ಗುರುತಾಗಿಸೋಣ” ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಡಿಎಸ್ಎಸ್ ಎಂ ಗುರುಮೂರ್ತಿ, ಓಪನ್ ಮೈಂಡ್ಸ್ ವರ್ಲ್ಡ್ ಸ್ಕೂಲ್ ನ ಕಿರಣ್ ಕುಮಾರ್ ಕೆ, ಎಸ್ಎಂಎಸ್ಎಸ್ನ ಫಾದರ್ ಪಿಯಸ್ ಡಿಸೋಜಾ, ಅಂಕಣಕಾರ ಬಿ.ಚಂದ್ರೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾದ್ಯಕ್ಷ ಮಂಜುನಾx, ಕೆ.ಎಲ್. ಅಶೋಕ್, ಮೊಹಮ್ಮದ್ ಹುಸೇನ್, ಶೇರಾಜ್ ಸಿದ್ದಿಕಿ, ರಾಘವೇಂದ್ರ , ಸುರೇಶ್ ಅರಸಾಳು, ಕರಿಯಪ್ಪ ,
ಜಗದೀಶ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.
==