ಶಿವಮೊಗ್ಗ,ಆ.೨೯: ಕಸ್ತೂರಿ ರಂಗನ್ ವರದಿ ಸಂಬಂಧಪಟ್ಟಂತೆ ಮುಖ್ಯಮಂತ್ರಿ ಸಭೆ ಕರೆಯುವುದಾಗಿ ಹೇಳಿದ್ದಾರೆ. ಆದರೆ ಇದಕ್ಕೂ ಮುಂಚೆ ಸಿಎಂ ಅಧಿಕಾರಿಗಳೊಂದಿಗೆ ರಾಜ್ಯದ ೧೦ ಜಿಲ್ಲೆಗಳ ಅರಣ್ಯ ಜಂಟಿ ಸರ್ವೇ ಮಾಡಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಸ್ತೂರಿ ರಂಗನ್ ವರದಿ ೭ ನೇ ಕರಡು ಅಧಿಸೂಚನೆ ಬಿಡುಗಡೆಯಾಗಿದ್ದು, ಇದರಿಂದ ರಾಜ್ಯದ ಶಿವಮೊಗ್ಗ-೧೪೬, ಚಿಕ್ಕಮಗಳೂರು-೧೩೭, ಕೊಡಗು-೫೩, ಹಾಸನ-೩೦, ಮೈಸೂರು-೪೮, ಚಾಮರಾಜನಗರ-೨೦, ಉತ್ತರ ಕನ್ನಡ-೫೬೬, ದಕ್ಷಿಣ ಕನ್ನಡ-೪೩, ಉಡುಪಿ ಜಿಲ್ಲೆ ಬೈಂದೂರು ಕ್ಷೇತ್ರ ಕುಂದಾಪು-೩೪, ಬೆಳಗಾವಿ-೪೨ ಜಿಲ್ಲೆಯಗಳ ಒಟ್ಟು ೧೪೩೯ ಗ್ರಾಮಗಳಲ್ಲಿನ ರೈತರು ಹಾಗೂ ಕೂಲಿ ಕಾರ್ಮಿಕರಗಳ ಮೇಲೆ ಪರಿಣಾಮ ಬೀರಿದ್ದು, ಈ ವರದಿಯಿಂದ ಅವರು ಆತಂಕಕ್ಕೆ ಒಳಗಾಗಿದ್ದಾರೆ ಎಂದರು.

ಕಸ್ತೂರಿ ರಂಗನ್ ವರದಿಯ ೭ ನೇ ಕರಡು ಪ್ರತಿ ಪಶ್ಚಿಮ ಘಟ್ಟ ಜನರುಗಳಲ್ಲಿ ಆತಂಕ ಮೂಡಿಸಿದೆ. ಅದರಲ್ಲಿ ಕರ್ನಾಟಕದ ರೈತರು ಭಯ ಭೀತರಾಗಿದ್ದಾರೆ. ಇಡೀ ದೇಶದಲ್ಲಿ ೨೦,೬೬೮ ಚದರ ಕಿಮೀ ಪ್ರದೇಶ ಅರಣ್ಯ ಕರ್ನಾಟಕದಲ್ಲಿದೆ. ನಂತರ ಸ್ಥಾನದಲ್ಲಿ ಮಹರಾಷ್ಟ್ರ ೧೭,೩೬೦ ಚದರ ಕಿಮೀ ಪ್ರದೇಶ ಹೊಂದಿದೆ. ಇನ್ನು ಕೇರಳ, ತಮಿಳುನಾಡು ಗೋವಾ, ರಾಜಸ್ತಾನ ನಂತರದ ಸ್ಥಾನದಲ್ಲಿದೆ. ಕಸ್ತೂರಿ ರಂಗನ್ ವರದಿ ಜಾರಿ ಮಾಡುವುದರಿಂದ ಕರ್ನಾಟಕ ಮಲೆನಾಡು ಭಾಗದ ಜನರಿಗೆ ಹೆಚ್ಚು ಹಾನಿಯಾಗಲಿದೆ ಎಂದು ಮಾಹಿತಿ ನೀಡಿದರು.
ಕಸ್ತೂರಿ ರಂಗನ್ ವರದಿ ೧ ನೇ ಹಾಗೂ ೩ ನೇ ಕರಡು ಪ್ರತಿ ಸಿದ್ದವಾಗಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ, ೪ ಮತ್ತು ೫ನೇ ವರದಿ ಸಿದ್ದವಾಗುವಾಗ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು. ಆಗ ಜನರ ಪರವಾಗಿ ಈ ವರದಿಯನ್ನು ವಿರೋಧಿಸಿ ಕೇಂದ್ರಕ್ಕೆ ಸೂಚನೆ ನೀಡಿದ್ದರು.

ಆಗ ಯಡಿಯೂರಪ್ಪನವರ ೨೦,೬೬೮ ಚದರ ಕಿಮಿ ಪ್ರದೇಶದಲ್ಲಿ ೧೬,೬೦೦ ಚದರ ಕಿಮಿ ಪ್ರದೇಶವನ್ನು ವನ್ಯಜೀವಿಧಾನ ಎಂದು ಪರಿಗಣಿಸಿ, ಉಳಿದ ಪ್ರದೇಶವವನ್ನು ಅರಣ್ಯೇತರ ಜಾಗವೆಂದು ಘೋಸಿಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ರಾಜ್ಯ ಉಪಮುಖ್ಯಮಂತ್ರಿ ಕೇಂದ್ರ ಸರ್ಕಾರವನ್ನು ಟೀಕೆ ಮಾಡುತ್ತಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ನಾವು ರೈತ ಹಾಗೂ ಪ್ರಜಾಪ್ರಭುತ್ವದ ವಿರೋಧಿಯಾಗಿದ್ದರೆ ೨ ಮತ್ತು ೩ ನೇ ಕರಡು ಪ್ರತಿಯ ವದರಿಯನ್ನು ಜಾರಿ ಮಾಡುತ್ತಿದ್ದೇವು. ಆದರೆ ಅಂತಹ ಯಾವುದೇ ಉದ್ದೇಶ ನಮ್ಮ ಪಕ್ಷಕ್ಕೆ ಇಲ್ಲ. ರೈತರ ಬದುಕು ನಮಗೆ ಮುಖ್ಯ. ರಾಜ್ಯ ಸರ್ಕಾರ ಅಭಿಪ್ರಾಯ ಕೇಳಬೇಕಿರುವುದು ಕೇಂದ್ರ ಸರ್ಕಾರ ಕರ್ತವ್ಯ ಆ ನಿಟ್ಟಿನಲ್ಲಿ ಕೇಳಿದ್ದಾರೆ ಎಂದರು.

ನಮ್ಮ ಪಕ್ಷದ ಪರವಾಗಿ ಸಿಎಂಗೆ ಮನವಿ ಮಾಡುತ್ತೇನೆ. ಕೂಡಲೇ ರಾಜ್ಯದ ೧೦ ಜಿಲ್ಲೆಗಳಲ್ಲಿ ಜಿಲ್ಲಾಡಳಿತಕ್ಕೆ ಈ ಬಗ್ಗೆ ಸರಿಯಾದ ಸೂಚನೆ ನೀಡಿ. ಅರಣ್ಯ ಭಾಗದಲ್ಲಿ ಹೆಚ್ಚು ಅಧಿಕಾರಿಗಳನ್ನು ನೇಮಿಸಿ ಹಾಗೂ ಆಯಾ ಭಾಗದಲ್ಲಿ ಜಂಟಿ ಸಭೆ ಮಾಡಿ. ಶೂನ್ಯ ಬಫರ್ ಸೋನ್ ನಿರ್ಮಿಸಿ ವನ್ಯ ಜೀವಿಧಾಮ, ಅಭಯಾರಣ್ಯ ಹಾಗೂ ಕಿರು ಅರಣ್ಯಗಳಿಗಷ್ಟೇ ಸಿಮೀತ ಮಾಡಿ ಎಂದರು.
ಕಂದಾಯ, ಗ್ರಾಮ ಆಡಳಿತ ಹಾಗೂ ಮುನ್ಸಿಪಾಲ್ ಕಾಯ್ದೆಗಳಿಂದ ರೈತರಿಗೆ ಹಾಗೂ ಅವರ ಭೂಮಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲವೆಂದು ಖಚಿತ ಪಡಿಸಬೇಕು. ಯಾಕೆಂದರೆ ಈ ವರದಿ ಜಾರಿಯಾದರೆ ಕಠಿಣ ಕ್ರಮ ಜಾರಿಯಾಗುತ್ತೆ, ಒತ್ತುವರಿ, ಸಂಪ್ರದಾಯಿಕ ಕೃಷಿಗೆ ದೊಡ್ಡ ಪೆಟ್ಟು ಬೀಳುತ್ತದೆ ಎಂಬ ಆತಂಕ ಸೃಷ್ಟಿಯಾಗತ್ತಿದೆ. ಅರಣ್ಯ ಇಲಾಖೆ ಸ್ಯಾಟಲೇಟ್ ಕ್ಯಾಮರ ಮೂಲಕ ಸರ್ವೇ ಮಾಡಿ ರೈತರ ಭೂಮಿಯನ್ನು ಫಾರೆಸ್ಟ್ ಎಂದು ಬಿಂಬಿಸುತ್ತಿದ್ದಾರೆ. ಹಾಗಾಗಿ ರಾಜ್ಯ ಸರ್ಕಾರ ಕೂಡಲೇ ವಾಸ್ತವಿಕ ಸರ್ವೆ ಮಾಡಿಸಬೇಕು. ನೋಟಿಫೈ ಅರಣ್ಯ ಬಿಟ್ಟು ಮಿಕ್ಕಿದೆಲ್ಲವೂ ಎಕೋ ಸಿಸ್ಟಂ ಸೇರಿಸಬಾರದು. ಆ ಸ್ಪ?ತೆ ಮುಂದಿನ ಕರಡು ಪ್ರತಿಯಲ್ಲಿ ಕೊಡಬೇಕು ಎಂದರು.
ಅನೇಕ ಸಲವತ್ತು ಸಿಕ್ಕಿಲ್ಲ:
ನಮ್ಮ ಪಕ್ಷ ೩೨ ವಿಚಾರಗಳನ್ನು ಇಟ್ಟುಕೊಂಡು ರೈತರು ಹಾಗೂ ಪರಿಸರವಾದಿಗಳ ಜೊತೆ ಚರ್ಚೆ ಮಾಡಿದ್ದೇವೆ. ಮಲೆನಾಡು ಭಾಗದಲ್ಲಿ ಈಗಾಗಲೇ ಡಿಮ್ಡ್ ಫಾರೆಸ್ಟ್ , ಶರಾವತಿ ಸಂತ್ರಸ್ತರು ಹಾಗೂ ಬಗರ್ ಹುಕ್ಕುಂ ಸಮಸ್ಯೆಗಳಿಗೆ ಸಿಗಬೇಕಾದ ಪರಿಹಾರ ಹಾಗೂ ಸವಲತ್ತು ಸಿಕ್ಕಿಲ್ಲ. ಅದಾಗಲೆ ಮತ್ತೇ ಕಸ್ತೂರಿ ರಂಗನ್ ವರದಿ ಜಾರಿ ಮಾಡುವ ನಿಟ್ಟಿನಲ್ಲಿ ಮತ್ತೇ ಇಂತಹ ಸಮಸ್ಯೆಗನ್ನು ಸೃಷ್ಟಿಸುತ್ತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಬಿಜೆಪಿ ಪ್ರಭಾರಿ ಸಿದ್ರಾಮಣ್ಣ, ಮಾಜಿ ಶಾಸಕರುಗಳಾದ ಆಶೋಕ್ ನಾಯ್ಕ, ಕೆ.ಜಿ.ಕುಮಾರಸ್ವಾಮಿ ಪ್ರಮುಖರಾದ ಎಸ್.ಎಸ್.ಜ್ಯೋತಿ ಪ್ರಕಾಶ್, ಮೋಹನ್ ರೆಡ್ಡಿ, ಮಾಲತೇಶ್, ಸಿಂಗನಹಳ್ಳಿ ಸುರೇಶ್, ಗಿರೀಶ್ ಭದ್ರಾಪುರ, ಹರೀಸ್, ಚಂದ್ರಶೇಖರ್.ಎಸ್, ಮಂಜುನಾಥ್.ಎನ್ ಇನ್ನಿತರರು ಇದ್ದರು.