ಶಿವಮೊಗ್ಗ,ಆ.18:
ಇಲ್ಲಿನ ರಸ್ತೆಯ ಬಾಲರಾಜ್ ಅರಸ್ ರಸ್ತೆಯ ಸರ್ಕಾರಿ ನೌಕರರ ಸಹಕಾರ ಸಂಘದ 85ನೇ ವಾರ್ಷಿಕ ಸರ್ವ ಸದಸ್ಯರ ಸಭೆ ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಸಮಾರಂಭ ಸೆಪ್ಟಂಬರ್ 20ರ ಭಾನುವಾರ ಅಧ್ಯಕ್ಷ ಕೆ ಈಶ್ವರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ 2025-26ರ ಸಾಲಿನಲ್ಲಿ ಸಂಘದ ಸದಸ್ಯರ ಮಕ್ಕಳು ಎಸ್.ಎಸ್. ಎಲ್. ಸಿ. ಹಾಗೂ ಪಿ.ಯು.ಸಿ.ಯಲ್ಲಿ ಗಳಿಸಿದ ಅಂಕಪಟ್ಟಿಯನ್ನು ಗಮನಿಸಿ ಮೊದಲ ಮೂರು ಸ್ಥಾನಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಲಿದೆ. ಅಂತೆಯೇ ರಾಷ್ಟ್ರೀಯ

ಕ್ರೀಡಾಕೂಟದಲ್ಲಿ ಭಾಗವಹಿಸಿದ ಮಕ್ಕಳು ಸಹ ಪುರಸ್ಕಾರಕ್ಕೆ ಭ ಅದರ ಬಾಜನರಾಗುತ್ತಾರೆ.

ಆಸಕ್ತ ಸದಸ್ಯರು ಸೆಪ್ಟೆಂಬರ್ ಹತ್ತರ ಒಳಗೆ ಸಂಘಕ್ಕೆ ಅರ್ಜಿ ಹಾಗೂ ಭಾವಚಿತ್ರ ಮತ್ತು ದೃಢೀಕೃತ ಅಂಕ ಪಟ್ಟಿಯನ್ನು ಉಪಾಧ್ಯಕ್ಷ ಜಿ ಮಂಜಪ್ಪ ಮೊ: 81971 82092 ಅಥವಾ ಕಾರ್ಯದರ್ಶಿ ರವಿಕುಮಾರ್ ಮೊ: 89048 90290 ಗೆ ಸಂಪರ್ಕಿಸಿ ತಲುಪಿಸಲು ಕೋರಲಾಗಿದೆ.