ಶಿವಮೊಗ್ಗ : ಭದ್ರಾ ಜಲಾಶಯದ ಎಡ-ಬಲದಂಡೆ ನಾಲೆಗಳಿಗೆ ತಕ್ಷಣವೇ ೨೦ ದಿನ ನೀರು ಹರಿಸುವಂತೆ ಹಾಗೂ ಭದ್ರಾ ಎಡನಾಲಾ ಅಚ್ಚುಕಟ್ಟು ಪ್ರದೇಶದಲ್ಲಿ ನಿಂತಿರುವ ಬೆಳೆಗಳಿಗೆ ಡಿ.೨೫ ರಿಂದ ಮೇ ೩೧ ರವರೆಗೂ ನೀರು ಹಡಿಸಲು ವೇಳಾಪಟ್ಟಿ ನೀಡುವಂತೆ ಒತ್ತಾಯಿಸಿ ಭದ್ರಾ ಎಡನಾಲಾ ಅಚ್ಚುಕಟ್ಟುದಾರರ ಹಿತಾರಕ್ಷಣಾ ಸಮಿತಿ ಹಾಗೂ ರಾಜ್ಯ ರೈತ ಸಂಘದ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನರ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರಸ್ತುತ ಬೆಳೆದು ನಿಂತಿರುವ ಬೆಳೆಗಳು ಕಳೆದ ೩೦ ದಿನಗಳಿಂದ ಮಳೆ ನೀರು, ಕಾಲುವೆ ನೀರು ಇಲ್ಲದೇ ಒಣಗುತ್ತಿವೆ. ಕಾಲುವೆಗೆ ನೀರು ಬಿಟ್ಟ ಕ್ಷಣದಿಂದ ಕಾಲುವೆ ಕೊನೆ ಭಾಗ ತಲುಪಲು ಕನಿ? ೧೫ ದಿನಗಳು ಬೇಕಾಗಿದೆ. ಹಾಗಾಗಿ ತೋಟಗಳು ಒಣಗಿ ನಾಶವಾಗುವ ಮುಂಚೆಯೇ

ತತ್ಕ್ಷಣದಿಂದ ಭದ್ರಾ ಎಲ್ಬಿಸಿ ಕಾಲುವೆಗೆ ನೀರು ಹರಿಸಬೇಕು. ನೀರಾವರಿ ಸಲಹಾ ಸಮಿತಿಯ ಸಭೆಯನ್ನು ಕರೆದು ಡಿಸೆಂಬರ್ ೨೫ ರಿಂದ ಮೇ ೩೧ ರವರೆಗೂ ಬೇಸಿಗೆಗೆ ನೀರು ಹರಿಸುವ ವೇಳಾಪಟ್ಟಿಯನ್ನು ನೀಡಬೇಕು ಎಂದು ಪ್ರತಿಭಟನನಕಾರರು ಆಗ್ರಹಿಸಿದರು.

ತಕ್ಷಣವೇ ಭದ್ರಾ ಮೇಲ್ದಂಡೆ ಕಾಲುವೆಗೆ ಹರಿಸುತ್ತಿರುವ ನೀರನ್ನು ನಿಲ್ಲಿಸಬೇಕು ಹಾಗೂ ತುಂಗಾ ಮೇಲ್ದಂಡೆ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಿ ಭದ್ರಾ ಜಲಾಶಯಕ್ಕೆ ನೀರು ಹರಿಸಬೇಕು. ಭದ್ರಾ ಅಚ್ಚುಕಟ್ಟು ನಾಲೆಗಳಿಗೆ ಕನಿ? ೨೦ ದಿನದಂತೆ ವ?ದ ಎಲ್ಲಾ ತಿಂಗಳುಗಳಲ್ಲೂ ಕಾಲುವೆಯಲ್ಲಿ ನೀರು ಹರಿಸಬೇಕು. ಭದ್ರಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಎಲ್ಲಾ ಕೆರೆಗಳನ್ನು ಭದ್ರಾ ಮೇಲ್ದಂಡೆ ಅಭಿವೃದ್ಧಿ ಯೋಜನೆಯಲ್ಲಿ ಸೇರಿಸಿ ಶೀಘ್ರವಾಗಿ ಕೆರೆ ಜೀರ್ಣೋದ್ಧಾರ ಮಾಡಬೇಕು. ಮಳೆಗಾಲದಲ್ಲಿ ಭತ್ತ ಬೆಳೆಯದಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಈ ಬೇಡಿಕೆಗಳನ್ನು ಸರ್ಕಾರ ಪೂರ್ಣಗೊಳಿಸಬೇಕು. ಇಲ್ಲದಿದ್ದರೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಮತ್ತು ಭದ್ರಾ ಎಡನಾಲಾ ಅಚ್ಚುಕಟ್ಟುದಾರರ ಹಿತರಕ್ಷಣಾ ಸಮಿತಿಯು ಪ್ರತಿಭಟನೆ ಹಾಗೂ ಹೋರಾಟವನ್ನು ಮುಂದುವರಿಸಲಾಗುವುದು. ರೈತರ ಕ?ಗಳಿಗೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಿರುತ್ತದೆ ಎಂದು ಸಮಿತಿ ಎಚ್ಚರಿಸಿದೆ.

ಪತ್ರಿಭಟನೆಯಲ್ಲಿ ರೈತ ಚಳವಳಿಯ ಹಿರಿಯ ಸಂಸ್ಥಾಪಕ ಸದಸ್ಯ ಕೆ.ಟಿ.ಗಂಗಾಧರ್, ಪುಟ್ಟಪ್ಪ, ಯಶವಂತರಾವ್ ಗೋರ್ಪಡೆ, ಜೆ. ರಘುನಾಥ್, ಕೆ. ಜಗದೀಶ್, ಮಂಜುನಾಥ್, ಮೋಹನ್ ಕುಮಾರ್, ಬಸವರಾಜ್, ಅವಿನಾಶ್, ವೆಂಕಟೇಶ್ ಸೇರಿದಂತೆ ಹಲವರಿದ್ದರು.