ಶಿವಮೊಗ್ಗ, ನ. 16(ಕರ್ನಾಟಕ ವಾರ್ತೆ): ಶಾಲಾ ಶಿಕ್ಷಣ ಇಲಾಖೆಯು 2026-27ನೇ ಸಾಲಿನ ಸಮನ್ವಯ ಶಿಕ್ಷಣ ಮಧ್ಯವರ್ತನೆಯಡಿಯಲ್ಲಿ ಶಿವಮೊಗ್ಗ ಜಿಲ್ಲೆಯ ಎಲ್ಲಾ 7 ತಾಲೂಕುಗಳಲ್ಲಿ ಖಾಲಿಯಿರುವ ಬಿಐಇಆರ್ಟಿ ವಿಶೇಷ ಶಿಕ್ಷಕರ ಹುದ್ದೆಗಳಿಗೆ ನೇರ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಪ್ರಾಥಮಿಕ ಹಂತ (1 ರಿಂದ2) ತಯಾರಿ ಹಂತ (3 ರಿಂದ 5) – 1 ರಿಂದ 5ನೇ ತರಗತಿಯವರೆಗೆ – ಆರ್.ಸಿ.ಐ. ನಿಂದ ಮಾನ್ಯತೆ ಹೊಂದಿರುವ ಸಂಸ್ಥೆಯಿಂದ ಡಿ.ಇಡಿ. ಪದವಿಯನ್ನು ವಿಶೇಷ ಶಿಕ್ಷಣದಲ್ಲಿ ಹೊಂದಿರಬೇಕು ಹಾಗೂ ಆರ್.ಸಿ.ಐ.ನಿಂದ ಮಾನ್ಯವಾದ ಸಿ.ಆರ್.ಆರ್.ಸಂಖ್ಯೆ

ಪಡೆದಿರಬೇಕು. ಅಥವಾ ಡಿಇಡಿ (ವಿಶೇಷ ಶಿಕ್ಷಣ) ಇದಕ್ಕೆ ಸಮಾನವಾದ ಡಿ.ಇಲ್.ಇಡಿ ಪದವಿ ಹೊಂದಿರಬೇಕು. ಇದು ಮಾನ್ಯತೆ ಹೊಂದಿರುವ ಸಂಸ್ಥೆಯಿಂದ ಪಡೆದಿದ್ದು, ಅರ್.ಸಿ.ಐ. ನಿಂದ ಮಾನ್ಯವಾದ ಸಿ.ಆರ್.ಆರ್. ಸಂಖ್ಯೆ ಪಡೆದಿರಬೇಕು. ಅಥವಾ ಸಮನ್ವಯ ಶಿಕ್ಷಣದಲ್ಲಿ ಪರಸ್ಪರ ವಿಕಲತಾ ಕ್ಷೇತ್ರಗಳಲ್ಲಿ 6 ತಿಂಗಳ ಬೋಧನಾ ತರಬೇತಿ ಹೊಂದಿರಬೇಕು.

ಮಾಧ್ಯಮ ಹಂತ (6 ರಿಂದ 8) ಪ್ರೌಢಶಾಲಾ ಹಂತ (9-12) – 6 ರಿಂದ 12ನೇ ತರಗತಿಯವರೆಗೆ ಆರ್.ಸಿ.ಐ. ನಿಂದ ಮಾನ್ಯತೆ ಹೊಂದಿರುವ ಸಂಸ್ಥೆಯಿಂದ ಬಿ.ಇಡಿ. ಪದವಿಯನ್ನು ವಿಶೇಷ ಶಿಕ್ಷಣದಲ್ಲಿ ಹೊಂದಿರಬೇಕು ಹಾಗೂ ಆರ್.ಸಿ.ಐ.ನಿಂದ ಮಾನ್ಯವಾದ ಸಿ.ಆರ್.ಆರ್.ಸಂಖ್ಯೆ

ಪಡೆದಿರಬೇಕು. ಅಥವಾ ಬಿಇಡಿ (ವಿಶೇಷ ಶಿಕ್ಷಣ) ಪದವಿ ಹೊಂದಿರಬೇಕು. ಇದು ಮಾನ್ಯತೆ ಹೊಂದಿರುವ ಸಂಸ್ಥೆಯಿಂದ ಪಡೆದಿದ್ದು, ಅರ್.ಸಿ.ಐ. ನಿಂದ ಮಾನ್ಯವಾದ ಸಿ.ಆರ್.ಆರ್. ಸಂಖ್ಯೆ ಪಡೆದಿರಬೇಕು. ಅಥವಾ ಸಮನ್ವಯ ಶಿಕ್ಷಣದಲ್ಲಿ ಪರಸ್ಪರ ವಿಕಲತಾ ಕ್ಷೇತ್ರಗಳಲ್ಲಿ 6 ತಿಂಗಳ ಬೋಧನಾ ತರಬೇತಿ ಹೊಂದಿರಬೇಕು.

ಆಸಕ್ತರು ಉಪನಿರ್ದೇಶಕರು, ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಶಿವಮೊಗ್ಗ ಇಲ್ಲಿಗೆ ಅಗತ್ಯ ಪೂರಕ ದಾಖಲೆಗಳೊಂದಿಗೆ ನ.19 ರೊಳಗಾಗಿ ಸಲ್ಲಿಸುವುದು. ಹಾಗೂ ಅರ್ಜಿಯಲ್ಲಿ ತಮ್ಮ ಮೊಬೈಲ್ ಸಂಖ್ಯೆನ್ನು ಕಡ್ಡಾಯವಾಗಿ ನಮೂದಿಸುವಂತೆ ಶಾಲಾ ಶಿಕ್ಷಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.