ಶಿವಮೊಗ್ಗ,ನ.೧೬: ಹಾಲು, ಬಸ್ ದರ ಏರಿಕೆ ವಿರೋಧಿಸಿ, ಸ್ಟಿಂಗ್ ಆಪರೇ?ನ್ ವಿವಾದದ ತನಿಖೆ ಹಾಗೂ ಗೃಹ ಸಚಿವರ ಅನುಚಿತ ಹೇಳಿಕೆ ಕುರಿತು ರಾಜ್ಯಪಾಲರು ಮಧ್ಯಪ್ರವೇಶಿಸಲು ಆಗ್ರಹಿಸಿ ಇಂದು ಜಿಲ್ಲಾ ಜೆಡಿಎಸ್ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಹಾಲು ಒಕ್ಕೂಟ ಮಹಾಮಂಡಳಿಯು ಹಾಲು, ಮೊಸರು, ತುಪ್ಪ, ಬೆಣ್ಣೆ, ಪನೀರ್ ಸೇರಿದಂತೆ ಹಾಲಿನ ಉತ್ಪನ್ನಗಳ ಬೆಲೆಯನ್ನು ರೂ. ೮ ರಿಂದ ೩೫ ರೂ. ವರೆಗೆ ಏರಿಸಿದೆ. ಕೆಎಸ್ಆರ್ಟಿಸಿ ಬಸ್ ದರವನ್ನು ಶೇ. ೨೩ ರ? ಏರಿಸಿದೆ. ಇದರಿಂದ ಬಡ, ಕೆಳ ಮಧ್ಯಮ ಹಾಗೂ ಮಧ್ಯಮ ವರ್ಗದ ಜನರ ಮೇಲೆ ಭಾರೀ ಆರ್ಥಿಕ ಹೊರೆ ಬಿದ್ದಿದೆ. ಹೋಟೆಲ್, ಖಾನಾವಳಿಗಳ ಆಹಾರದ ಬೆಲೆಯೂ ಏರಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ರೈತರು, ಗ್ರಾಮೀಣ ಜನತೆ ಸಂಕ?ದಲ್ಲಿದ್ದಾರೆ ಎಂದು ಆರೋಪಿಸಿದರು.

ಸ್ಟಿಂಗ್ ಆಪರೇ?ನ್ ವಿವಾದದ ತನಿಖೆಯು ವಿಶ್ವಾಸ ಮೂಡಿಸುವ ರೀತಿಯಲ್ಲಿ ನಡೆದಿಲ್ಲ. ಈ ?ಡ್ಯಂತ್ರದಲ್ಲಿ ಭಾಗಿಯಾಗಿರುವವರನ್ನು ಗುರುತಿಸಿ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಕೇಂದ್ರ ಸಚಿವರು ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಡಿ. ಕುಮಾರಸ್ವಾಮಿಯವರು ನಿರಂತರವಾಗಿ ಆಗ್ರಹಿಸುತ್ತಿದ್ದಾರೆ. ಪಾರದರ್ಶಕ ತನಿಖೆಗಾಗಿ ಅವರು ಬೆಂಗಳೂರು ಪೊಲೀಸ್ ಆಯುಕ್ತರು ಹಾಗೂ ಡಿಜಿಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಈ ವಿವಾದದ ಬಗ್ಗೆ ನ್ಯಾಯಯುತ, ನಿ?ಕ್ಷಪಾತ, ಕಾಲಮಿತಿಯ ತನಿಖೆ ನಡೆಸಬೇಕು ಹಾಗೂ ಹೆಸರು ಕೇಳಿಬಂದ ಎಲ್ಲರನ್ನೂ ಕಾನೂನಿನಂತೆ ವಿಚಾರಣೆ ಮಾಡಬೇಕು ಎಂದು ಆಗ್ರಹಿಸಿದರು.

ಗೃಹ ಸಚಿವ ಶ್ರೀ ಪ್ರಿಯಾಂಕ್ ಖರ್ಗೆ ಅವರು ಶ್ರೀ ಕುಮಾರಸ್ವಾಮಿಯವರ ಬಗ್ಗೆ ‘ಹಳ್ಳಿಗುಗ್ಗು’ ಎಂಬ ನಿಂದನಾತ್ಮಕ ಪದ ಬಳಸಿದ್ದಾರೆ. ಇದು ಸಾಂವಿಧಾನಿಕ ಹುದ್ದೆಗೆ ಶೋಭೆ ತರುವುದಿಲ್ಲ. ಇದರಿಂದ ಪ್ರಜಾಸತ್ತಾತ್ಮಕ ಘನತೆ, ಸಾರ್ವಜನಿಕ ವಿಶ್ವಾಸಕ್ಕೆ ಧಕ್ಕೆ ತಂದಿದೆ ಎಂದು ಆಕೇಕ್ಷ ವ್ಯಕ್ತಿಪಡಿಸಿದ್ದರು.

ಹಾಲಿನ ದರ ಮತ್ತು ಪ್ರಯಾಣ ದರವನ್ನು ವಾಪಾಸ್ ತೆಗೆದುಕೊಳ್ಳಬೇಕು. ಏರಿಸಿರುವ ಬಸ್ ದರವನ್ನು ಕೂಡಲೇ ಹಿಂಪಡೆಯಬೇಕು. ರೈತ ಬಗ್ಗೆ ಕಾಳಜಿ ವಹಿಸಬೇಕು. ಅಗತ್ಯವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು. ಎಲ್ಲಾ ಗ್ರಾಮಗಳಲ್ಲೂ ಕುಡಿಯುವ ನೀರನ್ನ ಒದಗಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಪತ್ರಿಭಟನೆಯಲ್ಲಿ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯನಾಯ್ಕ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ರಾಮಕೃಷ್ಣ, ನಗರ ಅಧ್ಯಕ್ಷ ದೀಪಕ್ ಸಿಂಗ್, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಸತೀಶ್, ಪ್ರಮುಖರುಗಳಾದ, ಕಡಿದಾಳ್ ಗೋಪಾಲ, ವಿನಯ್, ದಾದಾಪೀರ್, ನರಸಿಂಹಗಂಧದಮನೆ, ತಪ್ಪೇಸ್ವಾಮಿ, ಶ್ರೀನಿವಾಸ್, ಉಮಾಶಂಕರ ಉಪಾಧ್ಯ,
ಹೆಚ್.ಆರ್.ತಂಗರಾಜ್, ರಮೇಶ್ ಬಿ.ನಾಯ್ಕ, ಈಶ್ವರಚಾರಿ, ಕೆ.ಎಂ. ನಾಗೇಶ್, ಹೆಚ್.ಎಂ.ಸಂಗಯ್ಯ, ರಾಕೇಶ್ ಡಿಸೋಜಾ, ಸಂಜಯ್ ಕಶ್ಯಪ್, ಉಷಾ ನಾಯ್ಕ, ದಯಾನಂದ, ಗೋಪಿ ಮೊದಲಿಯಾರ್, ರಾಘವೇಂದ್ರ ಉಡುಪ ಸೇರಿದಂತೆ ಹಲವರಿದ್ದರು.