ಕರ್ನಾಟಕ ರಕ್ಷಣಾ ವೇದಿಕೆ ಕಾವಲು ಕಡೆ ವತಿಯಿಂದ ರಾಮಣ್ಣ ರಾಗಿಗುಡ್ಡ ಅವರ ನೇತೃತ್ವದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ರಾಗಿ ಗುಡ್ಡದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ಬಿಳಕಿ ಇವರು ಆಗಮಿಸಿ ಸಾನಿದ್ಯ ವಹಿಸಿದ್ದರು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುವ ಬಗ್ಗೆ ಹಿತನುಡಿಗಳನ್ನು ಹೇಳಿದರು.

ಧ್ವಜಾರೋಹಣವನ್ನು ಉದ್ಯಮಿ ಆದಂತಹ ಜ್ಯೋತಿಪ್ರಕಾಶ್ ಅವರು ನೆರವೇರಿಸಿದರು.
ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಅಂಗವಿಕಲ ಮತ್ತು ವಿಕಲಚೇತನರಿಗೆ ವಿಶೇಷವಾದ ಕಿಟ್ ಕೊಡುವುದರ ಮುಖಾಂತರ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಕೀಲ ಅನಿಲ್ ಕುಮಾರ್ ಮತ್ತು ಸಾಹಿತಿ, ಪತ್ರಕರ್ತ ಗಾ. ರಾ. ಶ್ರೀನಿವಾಸ್, ಚಲನಚಿತ್ರ ನಟ ರಘು ಮಲ್ನಾಡ್, ಕರವೇ ಕಾವಲು ಪಡೆಯ ಜಿಲ್ಲಾಧ್ಯಕ್ಷರಾದ ಶಿವಕುಮಾರ್ ಎಸ್, ಬಿ, ಪ್ರಧಾನ ಕಾರ್ಯದರ್ಶಿ ಕೆಬಿ ಉಮೇಶ್, ಉಪಾಧ್ಯಕ್ಷರ ರಮೇಶಣ್ಣ ಮಲ್ಲಿಗೆನಹಳ್ಳಿ, ಪತ್ರಿಕಾ ವಿತರಕರ ಸಂಘದ ಸಂಚಾಲಕರಾದ ಎನ್, ಮಾಲತೇಶ್, ರಾಮು, ಕರವೇ ಮಹಿಳಾ ಘಟಕದ

ಅಧ್ಯಕ್ಷೆ ಶಾರದಾ ಶ್ರೀಧರಮೂರ್ತಿ, ಉಪಾಧ್ಯಕ್ಷೆ ಅನ್ನಪೂರ್ಣ ಕೃಷ್ಣವೇಣಿ ಹಾಗೂ ಕರವೇ ಕಾವಲುಪಡೆಯ ಹೊಸದುರ್ಗ ಅಧ್ಯಕ್ಷೆ ವೀಣಾ ಮತ್ತು ಅವರ ಪದಾಧಿಕಾರಿಗಳು ಉಪಸ್ಥಿತರಿದ್ದರು.