ಶಿವಮೊಗ್ಗ: ಶ್ರಾವಣ ಮಾಸದ ಮೊದಲ ಹಬ್ಬ ನಾಗರಪಂಚಮಿಯನ್ನು ಸೋಮವಾರ ಜಿಲ್ಲಾದ್ಯಂತ ಸಡಗರ, ಸಂಭ್ರಮ, ಭಕ್ತಿ ಭಾವದಿಂದ ಆಚರಿಸಲಾಯಿತು.

ಬೆಳಗಿನ ಜಾವದಿಂದಲೇ ನಾಗ ದೇವಾಲಯಗಳಲ್ಲಿ ವಿಶೇ? ಪೂಜೆ ಏರ್ಪಡಿಸಲಾಗಿತ್ತು. ಹಾಲಿನ ಅಭಿ?ಕ, ವೇದಪಾರಾಯಣ, ಪವಮಾನ ಅಭಿ?ಕ, ಆಶ್ಲೇ?ಬಲಿ, ಕಾಳಸರ್ಪಶಾಂತಿ, ಮಹಾಮಂಗಳಾರತಿ ನೆರವೇರಿದವು. ಜನರು ನಾಗರ ಕಲ್ಲಿಗೆ ಭಕ್ತಿ, ಭಾವದಿಂದ ವಿಶೇ? ಪೂಜೆ ಸಲ್ಲಿಸಿದರು.
ಶಿವಮೊಗ್ಗದ ಸ್ವಾಮಿ ವಿವೇಕಾನಂದ ಬಡಾವಣೆಯ ನಾಗಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇ? ಪೂಜೆ ನಡೆಯಿತು. ಬಸವನಗುಡಿ, ಕೀರ್ತಿನಗರದ ನಾಗರಕಟ್ಟೆ, ಸೀಗೆಹಟ್ಟಿ, ರವೀಂದ್ರನಗರ, ಗಾಂಧಿನಗರ, ವಿದ್ಯಾನಗರದ ಅರಳೀಕಟ್ಟೆ, ಬೊಮ್ಮನಕಟ್ಟೆ ಆಶ್ರಯ ಬಡಾವಣೆಯ ಗಣಪತಿ ದೇವಸ್ಥಾನದಲ್ಲಿನ ನಾಗರಕಲ್ಲಿಗೆ ಸಾರ್ವಜನಿಕರು ಹಣ್ಣು, ಕಾಯಿ ಅರ್ಪಿಸಿ, ಹಾಲಿನ ಅಭಿ?ಕ ಮಾಡಿದರು.

ಕೆಲವೆಡೆ ಹುತ್ತದ ಮಣ್ಣಿನಿಂದ ಮಾಡಿದ ಮಣ್ಣಿನ ನಾಗರಕ್ಕೆ ಹಾಲೆರೆದರು. ಇನ್ನು ಕೆಲ ಬಡಾವಣೆಗಳಲ್ಲಿ ಮಹಿಳೆಯರು ಭಕ್ತಿಯಿಂದ ಹುತ್ತಕ್ಕೆ ಹಾಲೆರೆದರು. ವಿವಿಧ ದೇವಾಲಯಗಳಲ್ಲಿ ಪಂಚಮಿ ಅಂಗವಾಗಿ ವಿಶೇ? ಅಲಂಕಾರ ಮಾಡಲಾಗಿತ್ತು. ಶ್ರಾವಣ ಮಾಸದ ಪ್ರಥಮ ಹಬ್ಬ ಇದಾಗಿದ್ದು, ನಾಗರಪಂಚಮಿಯೊಂದಿಗೆ ವಿವಿಧ ಹಬ್ಬಗಳಿಗೂ ಚಾಲನೆ ದೊರೆಯುತ್ತದೆ. ನಾಗಚೌತಿಯ ನಂತರ ಬರುವ ಪಂಚಮಿಯಂದು ಹಾಲೆರೆದರೆ ಒಳಿತಾಗುತ್ತದೆ ಎಂಬ ಭಾವನೆ ಜನರಲ್ಲಿದೆ. ನಾಗಾರಾಧನೆಗೆ ಹೆಚ್ಚು ಪ್ರಾಶಸ್ತ್ಯ ನೀಡುವುದರಿಂದ ನಾಗರಪಂಚಮಿ ಪ್ರಮುಖ ಹಬ್ಬವಾಗಿದೆ. ಸಂಭ್ರಮದಿಂದ ಹಬ್ಬವನ್ನು ಆಚರಿಸಿದರು.

ನಾಗ ದೇವನ ಬಳಿ ಭಕ್ತರು, ನಾಗ ದೇವನ ಮೂರ್ತಿಯನ್ನು ಸ್ವಚ್ಚಗೊಳಿಸಿ, ಅರಿಶಿನ ಕುಂಕುಮವನ್ನು ಹಚ್ಚಿ, ಹತ್ತಿ ಹಾರವನ್ನು ಹಾಕಿ, ಹೂವುಗಳಿಂದ ಅಲಂಕರಿಸಿ, ಬಳಿಕ ವಿವಿಧ ಹಣ್ಣು, ಎಳ್ಳುಂಡೆ ಇಟ್ಟು ಪೂಜೆ ಸಲ್ಲಿಸಿ ನೈವೇದ್ಯ ಸಲ್ಲಿಸಿ. ನಂತರ ನಾಗಪ್ಪನಿಗೆ ಹಾಲನ್ನು ಸಮರ್ಪಿಸಿದರು.

ನಾಗನಿಗೆ ಭಕ್ತರಿಂದ ಪೂಜೆ:
ಶಿವಮೊಗ್ಗದ ರವೀಂದ್ರನಗರ ಗಣಪತಿ ದೇವಾಲಯದ ಮುಂಭಾಗದ ನಾಗರಕಟ್ಟೆಗೆ ಬೆಳ್ಳಗ್ಗೆಯಿಂದಲೇ ಭಕ್ತರು ಕುಟುಂಬ ಸಮೇತರಾಗಿ ಆಗಮಿಸಿ ನಾಗ ದೇವನಿಗೆ ಪೂಜೆ ಸಲ್ಲಿಸಿದರು. ನಾಗರ ಪಂಚಮಿ ಪ್ರಯುಕ್ತ ಭಕ್ತರು ಆಗಮಿಸಿ, ನಾಗ ದೇವನಿಗೆ ಹಾಲೆರೆದು ಪಂಚಾಮೃತ ಅಭಿ?ಕ, ಎಳ್ಳುಂಡೆ, ನೈವೇದ್ಯ ಪ್ರಸಾದ ಅರ್ಪಿಸಿದರು.

ನಾಗಪಂಚಮಿಯಂದು ದೇಶಿ ಆಟಗಳಿಗೆ ಎಲ್ಲೆಡೆ ಮೆರಗು ದೊರೆಯಿತು. ಗ್ರಾಮೀಣ ಭಾಗದಲ್ಲಿ ನಾಗರ ಪಂಚಮಿಯನ್ನು ಶ್ರದ್ದಾಭಕ್ತಿಯಿಂದ ಆಚರಿಸಿದರು. ವಿಶೇ?ವಾಗಿ ಮಹಿಳೆಯರು, ಮಕ್ಕಳು ಮರಗಳಿಗೆ, ಮನೆಯಲ್ಲಿ ಜೋಕಾಲಿ ಕಟ್ಟಿ ಆಡಿ ಸಂಭ್ರಮಿಸಿದರು.
ಮತ್ತೊಂದೆಡೆ ಎಲ್ಲೆಡೆ ಯುವಕರು ದೇಸಿ ಆಟಗಳಾದ ಲಿಂಬೆ ಹಣ್ಣು, ತೆಂಗಿನಕಾಯಿ ಎಸೆತ, ಕಣ್ಣು ಕಟ್ಟು ಆಟ, ಕಬ್ಬಡ್ಡಿ, ಗುಂಡು ಕಲ್ಲು ಎತ್ತುವ ಸ್ಪರ್ಧೆ, ಹಣ ಚಿಮ್ಮಿಸುವ ಆಟ ಸೇರಿ ಹಲವು ದೇಸಿ ಸ್ಪರ್ಧೆಗಳನ್ನು ಆಡುವುದರ ಸಂಭ್ರಮಿಸಿದರು.
—–===