ಭದ್ರಾವತಿ, ಅ.೦೧:
ನಗರಸಭೆ ವತಿಯಿಂದ ೫೦ ಲಕ್ಷ ವೆಚ್ಚದಲ್ಲಿ ನಾಡಹಬ್ಬ ದಸರಾ ಆಚರಿಸಲಾಗು ವುದು’ ಎಂದು ಆಯುಕ್ತ ಹೇಮಂತ್ ಕೆ.ಎನ್. ಹೇಳಿದರು.

ದಸರಾ ಆಚರಣೆಯ ಸಿದ್ಧತೆಗಚಿಳ ಬಗ್ಗೆ ಚರ್ಚಿಸಲು ಕರೆದಿದ್ದ ವಿವಿಧ ಸಂಘ-ಸಂಸ್ಥೆ ಗಳ ಸದಸ್ಯರ ಸಭೆ ಉದ್ದೇಶಿಸಿ ಮಾತನಾಡಿ ದರು. ದಸರಾ ಅಂಗವಾಗಿ ೯ ದಿನಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದು ತಿಳಿಸಿದರು.
ಹೂವು, ವಾಹನದ ಬಾಡಿಗೆ, ವಾದ್ಯ ಕಲಾವಿದರಿಗೆ ನೀಡುವ ಸಂಭಾವನೆಯಲ್ಲಿ ಏರಿಕೆಯಾಗಿರುವುದರಿಂದ ಈ ಬಾರಿ ಅನು ದಾನ ಹೆಚ್ಚಿಸಬೇಕು’ ಎಂದು ಅಂತರಘಟ್ಟಮ್ಮ ದೇವಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯ ಶ್ರೀನಿವಾಸ್ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಜಿಲ್ಲಾಧಿಕಾರಿ ನೇತೃತ್ವದ ಸಭೆಯಲ್ಲಿ ಮೆರವಣಿಗೆಗೆ ನೀಡುವ ಅನುದಾನ ಹೆಚ್ಚಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸಿ ತೀರ್ಮಾನ ಕೈಗೊಳ್ಳ ಲಾಗುವುದು. ಲಕ್ಷ್ಮಿನರಸಿಂಹ ಸ್ವಾಮಿ ದೇವಾ ಲಯದ ಆಡಳಿತ ಮಂಡಳಿ ಸದಸ್ಯ ನರಸಿಂಹಾಚಾರ್, ’ಮೆರವಣಿಗೆ ಆರಂಭಕ್ಕೂ ಮುನ್ನ ನಿಗದಿತ ಸ್ಥಳದಲ್ಲಿ ದೇವರನ್ನು ಹೊತ್ತ ವಾಹನಗಳು ಹಾಜರಿರುವಂತೆ ಸೂಚಿಸ ಬೇಕು. ಮೆರವಣಿಗೆ ಆರಂಭದ ನಂತರ ವಾಹನಗಳು ಬಂದು ಸೇರಿದರೆ ಗೊಂದಲ ವುಂಟಾಗುತ್ತದೆ’ ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕನಕ ಮಂಟಪ ಮೈದಾನದಲ್ಲಿ ಆಯೋಜಿಸಬೇಕು. ಇದರಿಂದ ಹೆಚ್ಚು ಪ್ರೇಕ್ಷಕರನ್ನು ಸೆಳೆಯಲು ಸಾಧ್ಯ’ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಚ್. ತಿಮ್ಮಪ್ಪ ತಿಳಿಸಿದರು.

ನಗರಸಭೆ ಅಧ್ಯಕ್ಷೆ ಜೆ.ಸಿ. ಗೀತಾ ರಾಜ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಪ್ರೇಮಾ ಬದರೀನಾರಾಯಣ ಉಪಸ್ಥಿತರಿದ್ದರು.