ಶಿವಮೊಗ್ಗ, ನ.13;ಶಿವಮೊಗ್ಗ ತಾಲೂಕು, ಕುಂಸಿ 110/11 ಕೆವಿ ವಿದ್ಯುತ್ ವಿತರಣಣಾ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕುಂಸಿ ಮತ್ತು ಹಾರ್ನಳ್ಳಿ ಶಾಖೆಯ ಹಳೆಯ ಪವರ್ ಕೇಬಲ್ ಹಾಗೂ ಹೊಸದಾಗಿ ಡಿ.ಪಿ ಸ್ಟ್ರಕ್ಚರ್ಗಳನ್ನು ಬದಲಾಯಿಸುವ ಕಾಮಗಾರಿ ಇರುವುದರಿಂದ, ಕುಂಸಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ವಿವಿಧ ಹಳ್ಳಿಗಳಿಗೆ ನೀರಾವರಿ ಕೃಷಿ ಪಂಪ್ ಸೆಟ್ ಗ್ರಾಹಕರಿಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಕುಂಸಿ, ಬಾಳೇಕೊಪ್ಪ, ಚಿಕ್ಕಮರನ, ರೇಚಿಕೊಪ್ಪ, ಹಳೆಶಿಕಾರಿಪುರ ರಸ್ತೆ, ಹುಬ್ಬನಹಳ್ಳಿ, ಹೊಸಕೋಟೆ ದುರ್ಗಮ್ಮ ದೇವಸ್ಥಾನ ಇತರೆ ಸುತ್ತಮುತ್ತಲಿನ ಹಳ್ಳಿಗಳು.

ಹಾರ್ನಳ್ಳಿ ಶಾಖಾ ವ್ಯಾಪ್ತಿ: ಹಾರ್ನಳ್ಳಿ, ಮಲ್ಲಾಪುರ, ರಟ್ಟೆಹಳ್ಳಿ, ಸೊಟ್ಟುಕೋಟೆ, ಹಿಟ್ಟೂರು, ನಾರಾಯಣಪುರ, ಬೈರನಕೊಪ್ಪ, ಮುದುವಾಲ, ವಾಲಾಕೇಶಪುರ, ದೇವಬಾಳು, ಎಡವಾಲ, ತ್ಯಾಗವಳ್ಳಿ, ಕೊನಗವಳ್ಳಿ, ಚಾಮೇನಹಳ್ಳಿ ಹಾಗೂ ಇತರೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ದಿನಾಂಕ 16.11.2026 ರಿಂದ 19.11.2026ರವರೆಗೆ (4 ದಿನಗಳ ಕಾಲ) ನೀರಾವರಿ ಕೃಷಿ ಪಂಪ್ಸೆಟ್ಗಳಿಗೆ (ಐ.ಪಿ) ಸಂಜೆ 06:00 ಗಂಟೆಯಿಂದ ಬೆಳಿಗ್ಗೆ 10:00 ಗಂಟೆಯವರೆಗೆ 3 ಫೇಸ್ ವಿದ್ಯುತ್ ಅನ್ನು ನೀಡಲಾಗುತ್ತದೆ.

ಸಾರ್ವಜನಿಕರು ಹಾಗೂ ಕೃಷಿಕರು ಈ ಅಂಶವನ್ನು ಗಮನಿಸಿ, ವಿದ್ಯುತ್ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಪಾಲನೆ ಮತ್ತು ನಿರ್ವಹಣೆ ಉಪವಿಭಾಗ, ಮೆಸ್ಕಾಂ, ಕುಂಸಿಯ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಕೋರಿದ್ದಾರೆ.