ಶಿವಮೊಗ್ಗ: ವಿಮಾನ ಸಂಚಾರಕ್ಕೆ ಸಂಬAಧಿಸಿದAತೆ ಸಂಸದ ಬಿ.ವೈ. ರಾಘವೇಂದ್ರ ಅವರು ರಾಜಕೀಯ ಬಣ್ಣ ಬೆರೆಸಬಾರದು ಮತ್ತು ರಾಜ್ಯ ಸರ್ಕಾರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೀಶ್ ಹೇಳಿದರು.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗ ವಿಮಾನ ಸಂಚಾರಕ್ಕೆ ಸಂಬAಧಿಸಿದAತೆ ಸಂಸದ ರಾಘವೇಂದ್ರ ಹೇಳಿಕೆ ನೀಡಿ ರಾಜ್ಯ ಸರ್ಕಾರ ಇದಕ್ಕೆ ಹೊಣೆ ಎಂದಿದ್ದಾರೆ. ಆದರೆ, ರಾಜ್ಯ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣವೂ ಸೇರಿದಂತೆ ಅದರ ಹಾರಾಟಕ್ಕೆ ಮತ್ತು ನೈಟ್ ಲ್ಯಾಂಡಿAಗ್ ಗೆ ನೆರವು ನೀಡಿರುವುದನ್ನು ಮರೆತುಬಿಟ್ಟಿದ್ದಾರೆ. ಈಗ ಉಡಾನ್ ಬಗ್ಗೆ ಉಡಾಫೆ ಮಾತಾಡುತ್ತಿದ್ದಾರೆ. ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಹೇಳುತ್ತಿದ್ದಾರೆ ಎಂದು ದೂರಿದರು.

ರಾಜ್ಯ ಸರ್ಕಾರ ಉಡಾನ್ ಯೋಜನೆಗೆ ಸಂಬAಧಿಸಿದAತೆ ಸುಮಾರು 5.60 ಕೋಟಿ ರೂ. ತುಂಬಿಕೊಟ್ಟಿದೆ. ಪ್ರತಿ ದಿನ 156 ಸಂಚಾರಕ್ಕೆ ಪ್ರತಿ ಸಂಚಾರಕ್ಕೂ 500 ರೂ.ನಂತೆ ಕೊಟ್ಟಿದೆ. ಇದು ಸಂಸದರಿಗೆ ಗೊತ್ತಿಲ್ಲವೇ? ಈಗಾಗಲೇ ನೈಟ್ ಲ್ಯಾಂಡಿಗ್ಗಾಗಿ 12.5 ಕೋಟಿ ರೂ. ನೀಡಿದೆ. ಶೇ. 99ರಷ್ಟು ಕೆಲಸವೂ ಮುಗಿದಿದೆ. ಕಲ್ಯಾಣ ಕರ್ನಾಟಕಕ್ಕೆ ಅನುದಾನ ನೀಡಿರುವುದನ್ನು ಅವರು ಪ್ರಶ್ನೆ ಮಾಡಿದ್ದಾರೆ. ಅದು ಸರ್ಕಾರಕ್ಕೆ ಅನಿವಾರ್ಯವಾಗಿತ್ತು ಎಂದರು.
ಉಡಾನ್ ಬಗ್ಗೆ ಮಾತನಾಡುವ ಸಂಸದರಿಗೆ ಅರ್ಥವಾಗಬೇಕು. ಉಡಾನ್ ಸೌಲಭ್ಯ ಪಡೆಯುತ್ತಿದ್ದ ಸ್ಟಾರ್ ಮತ್ತು ಇಂಡಿಗೋ ಸಂಸ್ಥೆಯವರು ತಮ್ಮ ವಿಮಾನಗಳ ಹಾರಾಟವನ್ನು ಒಂದು ವರ್ಷ ಮುಂಚೆಯೇ ಏಕೆ ನಿಲ್ಲಿಸಿದರು? ಅದು ಅವರಿಗೆ ಗೊತ್ತಿಲ್ಲವೇ? ರಾಜ್ಯ ಸರ್ಕಾರ ಈಗಾಗಲೇ 13 ರೂಟ್ ಗಳಿಗೆ ಹಣಕಾಸು ನೆರವು ನೀಡಿದೆ ಎಂದರು.

ಕೇAದ್ರದಿAದ ವಿಮಾನ ನಿಲ್ದಾಣ ಮಾಡಿದ್ದೇವೆ. ನಮ್ಮ ಪಾತ್ರವೇ ದೊಡ್ಡದು ಎಂದು ಹೇಳುವ ಸಂಸದರಿಗೆ ಅರ್ಥವಾಗಬೇಕು. ರೈತರಿಗೆ ಹಣ ಕೊಟ್ಟಿದ್ದೂ ಕೂಡ ರಾಜ್ಯ ಸರ್ಕಾರವೇ. ಈಗ ಅಲ್ಲಿನ 100 ಕ್ಕಿಂತ ಹೆಚ್ಚು ಕೆಲಸಗಾರರಿಗೆ ಕೆಲಸ ಇಲ್ಲದಿದ್ದರೂ ಸಂಬಳ ಕೊಡುವುದೂ ರಾಜ್ಯ ಸರ್ಕಾರವೇ. ಉಡಾನ್ ಯೋಜನೆಯನ್ನು ಏಕೆ ಇವರು ವಿಸ್ತರಿಸಲು ಪ್ರಯತ್ನಿಸಿಲ್ಲ. ಒಂದು ನಿಲ್ದಾಣವನ್ನು ಆರಂಭಿಸುವಾಗ ಅದರ ನೈಟ್ ಲ್ಯಾಂಡಿAಗ್ ಕೆಲಸವೂ ಕೇಂದ್ರ ಸರ್ಕಾರದಿಂದಲೇ ಆಗಬಹುದಿತ್ತಲ್ಲವೇ? ಕಮಲದಂತೆ ವಿಮಾನ ನಿಲ್ದಾಣವನ್ನು ಶೃಂಗಾರ ಮಾಡಿರುವ ಅವರಿಗೆ ಈಗ ಕಮಲವನ್ನು ಅರಳಿಸಲು ಆಗುವುದಿಲ್ಲವೇ ಎಂದು ವ್ಯಂಗ್ಯವಾಡಿದರು.
ಇAಡಿಗೋ ಸಂಸ್ಥೆಯಲ್ಲಿ ಪೈಲಟ್ ಕೊರತೆ ಇದೆ. ಅಲ್ಲಿನ ಉದ್ಯೋಗಿಗಳಿಗೆ ಸಂಬಳ ನೀಡಲು ಕೂಡ ಕಷ್ಟವಾಗುತ್ತಿದೆ. ಕೇಂದ್ರ ವಿಮಾನಯಾನ ಸಚಿವರೊಂದಿಗೆ ಸಂಸದರು ಸಂಪರ್ಕವನ್ನೇ ಮಾಡಿಲ್ಲ. ಮತ್ತು ಉಡಾನ್ ಯೋಜನೆಗೆ ಕೇಂದ್ರ ಸರ್ಕಾರದ ಜೊತೆಗೆ ರಾಜ್ಯ ಸರ್ಕಾರದ ಅನುದಾನವೂ ಇದೆ. ಹಾಗಾಗಿ ಕಾಂಗ್ರೆಸ್ ಸರ್ಕಾರವನ್ನು ದೂಷಿಸುವುದನ್ನು ಬಿಟ್ಟು ಸಂಸದರು ವಿಮಾನ ಸಂಚಾರ ಪುನರರಾಂಭಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಿ ಎಂದರು.

ರಾಜ್ಯ ಸರ್ಕಾರ ತನ್ನ ನೆರವನ್ನು ನೀಡುತ್ತದೆ. ಆದರೆ, ಕೇಂದ್ರ ಸರ್ಕಾರದಿಂದ ಮುಂದಿನ ಕನಿಷ್ಠ 5 ವರ್ಷಗಳಿಗಾದರೂ ಉಡಾನ್ ಯೋಜನೆ ವಿಸ್ತರಣೆಗೊಳ್ಳಬೇಕು. ಯಾವ ರಾಜಕೀಯ ಬಣ್ಣವನ್ನೂ ಸಂಸದರು ಬೆರೆಸಬಾರದು. ಮತ್ತು ಅದಾನಿಯನ್ನು ವಿಮಾನ ನಿಲ್ದಾಣಕ್ಕೆ ಕರೆತರುವ ಪ್ರಯತ್ನವನ್ನು ಮಾಡಬಾರದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಸ್.ಟಿ. ಹಾಲಪ್ಪ, ಉತ್ತರ ಮತ್ತು ದಕ್ಷಿಣ ಬ್ಲಾಕ್ ಅಧ್ಯಕ್ಷರಾದ ಶಿವಕುಮಾರ್, ಕಲೀಂ ಪಾಷಾ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ಒ. ಶಿವಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪಿ.ಎಸ್. ಗಿರೀಶ್ ರಾವ್, ಬಸವ ಕಲ್ಯಾಣ ಅಭಿವೃದ್ಧಿ ಮಂಡಳಿ ನಿರ್ದೇಶಕ ಹೆಚ್.ಪಿ. ಗಿರೀಶ್, ಯು. ಶಿವಾನಂದ್, ವಿಶ್ವನಾಥಕಾಶಿ, ಶ್ಯಾಮಸುಂದರ್, ಜಗನ್ನಾಥ್ ಮುಂತಾದವರಿದ್ದರು.