
ಶಿವಮೊಗ್ಗ,ಅ.01:
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಯುವ ನಾಯಕ ವಿದ್ಯಾರ್ಥಿ ಸಂಘಟನೆಯ ಯುವ ಮುಖಂಡ ಹಾಗೆ ಸದ್ದಿಲ್ಲದ ಪಕ್ಷದ ಸಂಘಟನೆಗೋಸ್ಕರ ಅವಿರತವಾಗಿ ಶ್ರಮಿಸಿದ ಗಿರಿಜಮ್ಮ ಟೀಚರ್ ಮಗ ಮಧುಸೂದನ್ ಅವರಿಗೆ ಈಗ ಕಾಂಗ್ರೆಸ್ ಪಕ್ಷ ಬಹುದೊಡ್ಡ ಮನ್ನಣೆ ನೀಡಿ ಗೌರವಿಸಿರುವುದನ್ನು ಇಡೀ

ಕಾಂಗ್ರೆಸ್ ಬಳಗ ಹಾಗೂ ಯುವ ಕಾಂಗ್ರೆಸ್ ಶಕ್ತಿ ವಿದ್ಯಾರ್ಥಿ ಸಂಘಟನೆ ಹಾಗೂ ಎಲ್ಲ ಯುವ ನಾಯಕರು ಪ್ರಶಂಸಿದ್ದಾರೆ.

ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಯುವ ಕಾಂಗ್ರೆಸ್ನ ಪ್ರಮುಖ ಮಧುಸೂದನ್ ಅವರನ್ನು ಆಯ್ಕೆ ಮಾಡಿರುವುದನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ, ಮೆಚ್ಚಿಕೊಂಡಿದ್ದಾರೆ.

ಹಾಲಿ ಸೂಡಾ ಅಧ್ಯಕ್ಷರಾಗಿ ಮಧುಸೂದನ್ ಅವರು ಅಧಿಕಾರ ಸ್ವೀಕರಿಸುವ ಸಮಯ ಕ್ಷಣ ಹತ್ತಿರವಾಗಿದೆ.
ಬೆಂಗಳೂರು, ಅ.1: ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಕುವೆಂಪು ನಗರದ ಸಿ.ಜೆ. ಮಧುಸೂದನ್ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಇಂದು (ಅ.1) ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ.
ಆದೇಶದಲ್ಲಿ ಏನಿದೆ?
ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987 ರ ಕಲಂ 3(3) ಮತ್ತು 3(4) ರ ಅನ್ವಯ, ಶಿವಮೊಗ್ಗದ ಕುವೆಂಪು ನಗರದ ಎ ಬ್ಲಾಕ್, ನಂ. 217 ರ ನಿವಾಸಿ, ಸಿ. ಗಂಗಾಧರಪ್ಪ ಅವರ ಪುತ್ರ ಶ್ರೀ ಸಿ.ಜೆ. ಮಧುಸೂದನ್ ಅವರನ್ನು ಈ ತಕ್ಷಣದಿಂದ ಜಾರಿಗೆ ಬರುವಂತೆ ಅಧ್ಯಕ್ಷರನ್ನಾಗಿ ನಾಮನಿರ್ದೇಶನ ಮಾಡಲಾಗಿದೆ. ಮುಂದಿನ ಆದೇಶದವರೆಗೂ ಅವರು ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.