
ಶಿವಮೊಗ್ಗ,ಆ.17:
ಶಿವಮೊಗ್ಗ ನಗರದ ಬಸವೇಶ್ವರ ವೃತ್ತದ ಬಳಿ ಇರುವ ಮಹಾತ್ಮ ಗಾಂಧಿ ಪಾರ್ಕ್ ನಲ್ಲಿ ಹಬ್ಬ ಹರಿದಿನಗಳು ಹಾಗೂ ಶನಿವಾರ ಮತ್ತು ಭಾನುವಾರ ರಜೆ ದಿನಗಳಲ್ಲಿ ಸಾರ್ವಜನಿಕರು ಮತ್ತು ಕುಟುಂಬ ವರ್ಗದವರು ತಮ್ಮ ಮಕ್ಕಳೊಂದಿಗೆ ಭೇಟಿ ನೀಡುವರ ಸಂಖ್ಯೆ ಹೆಚ್ಚುತ್ತಿದೆ.
16/08/2026ರ ನಿನ್ನೆ ಭಾನುವಾರ ಬೆಳಿಗ್ಗೆಯಿಂದಲೇ ಸಾರ್ವಜನಿಕ ಕುಟುಂಬ ವರ್ಗದವರು ಒಂದೊಂದು ಗುಂಪು ಕೂಡಿ ಮಕ್ಕಳ ಜತೆ ತಿಂಡಿ ತಿನಿಸುಗಳೊಂದಿಗೆ ತಿನ್ನುತ್ತಾ ಸಂತೋಷ ಸಂಭ್ರಮದಿಂದ ಕಾಲ ಕಳೆಯುತ್ತಿದ್ದರು. ಅವರ ಜತೆ ಬಂದ ಪುಟ್ಟ ಪುಟ್ಟ ಮಕ್ಕಳು ಆಟಿಕೆ ಬಳಿ ಆಟ ಆಡುತ್ತಿದ್ದರು.

ಸ್ವಲ್ಪ ಸಮಯದಲ್ಲೇ ಮಕ್ಕಳು ತಿರುಗಿ ನೋಡಿದರೆ ಹಲವು ಗುಂಪುಗಳು ಅಲ್ಲಲ್ಲೇ ಕುಳಿತು ಊಟ ಮಾಡುತ್ತಿದ್ದವು, ಅದರಲ್ಲಿ ನಮ್ಮ ಕುಟುಂಬ ವರ್ಗದವರು ಹಾಗೂ ನಮ್ಮ ತಾಯಿ ಯಾರು ಎಂಬುದು ಮಕ್ಕಳಿಗೆ ಗುರುತಿಸಲು ಕಷ್ಟವಾಗಿ ಮಕ್ಕಳು ನಮ್ಮ ತಂದೆ ತಾಯಿ ನಮ್ಮನ್ನು ಬಿಟ್ಟು ಹೋದರು ಎಂದು ತಿಳಿದು ಅವರು ಗೇಟಿನ ಬಳಿ ಓಡಿ ಬಂದರು ಅವರು ಹೊರ ಹೋಗುವುದನ್ನು ತಡೆದ ಗೃಹ ರಕ್ಷಕ ಸಿಬ್ಬಂದಿಯವರು ಆ ಮಕ್ಕಳಿಗೆ ಅವರ ತಂದೆ ತಾಯಿಯ ಬಗ್ಗೆ ಮಾಹಿತಿ ಕೇಳಿ ನಂತರ ತಾಯಿಯ ಫೋನ್ ನಂಬರನ್ನು ಪಡೆದು ಕರೆ ಮಾಡಿ ತಾಯಿಯ ಮಡಲಿಗೆ ಮಕ್ಕಳನ್ನು ಒಪ್ಪಿಸಿದರು.
ಆದರೆ ಪಾರ್ಕ್ ನಲ್ಲಿ ಸಂಭ್ರಮದಲ್ಲಿದ್ದ ಆ ಮಕ್ಕಳ ಕುಟುಂಬದವರು ಹಾಗೂ ಅವರ ತಾಯಿಗೆ ಮಕ್ಕಳು ಬಹಳ ಹೊತ್ತಿನಿಂದ ಕಾಣೆಯಾಗಿರುವ ಬಗ್ಗೆ ತಿಳಿದೇ ಇಲ್ಲ, ಹಾಗೂ ಅವರು ಅವರಅವರ ಸಂತೋಷದಲ್ಲಿ ಇದ್ದರು. ಗೃಹರಕ್ಷಕ ಸಿಬ್ಬಂದಿಯವರು ಕರೆ ಮಾಡಿದಾಗಲೇ ಅವರ ಮಕ್ಕಳು ಬಹಳ ಹೊತ್ತಿನಿಂದ ಕಾಣೆಯಾಗಿದ್ದು ಅವರಿಗೆ ತಿಳಿದಿದ್ದು, ನಂತರ ಗೃಹರಕ್ಷಕ ಸಿಬ್ಬಂದಿಯವರು ಮೇಲಾಧಿಕಾರಿಗಳ ಮೂಲಕ ಅವರ ತಾಯಿಗೆ ಮಕ್ಕಳನ್ನು ಒಪ್ಪಿಸಿಸಿದ್ದಾರೆ ಅವರಿಂದ ಮಕ್ಕಳನ್ನು ಪಡೆದ ತಾಯಿ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳು ಹೇಳಿದರು.
ಇನ್ನೊಂದು ಕುಟುಂಬ ಗಂಡ ಹೆಂಡತಿ ಹಾಗೂ ಅವರ ಮೂರು ವರ್ಷದ ಹೆಣ್ಣು ಮಗು ಪಾರ್ಕ್ ಒಳಗೆ ಬಂದು ಆಟ ಆಡಲು ಬಿಟ್ಟು ಮಾತಾಡುತ್ತಾ ಇರುವಾಗ ಮಗುವಿನ ಜ್ಞಾನ ಮರತೆ ಹೋಗಿದೆ, ಮಗುವಿನ ನೆನೆಪು ಬಂದು ನೋಡಿದಾಗ ಮಗು ಆ ಸ್ಥಳದಲ್ಲಿ ಇಲ್ಲ ಪಾರ್ಕ್ ಸುತ್ತಲೂ ಹುಡುಕಲು ಶುರು ಮಾಡಿರುವರು, ಅಷ್ಟರಲ್ಲಿ ಮಗು ಮೇನ್ ಗೇಟ್ ದಾಟಿ ಬೇರೆಯವರ ಜತೆ ಹೊರಹೋಗಿತ್ತು. ಹೊರಕ್ಕೆ ಬೇರೆಯವರ ಜತೆ ಇರುವ ಮಗುವನ್ನು ಕಂಡ ಗೃಹರಕ್ಷಕ ಸಿಬ್ಬಂದಿ ಅನುಮಾನಗೊಂಡು ಮಗುವನ್ನು ತಮ್ಮ ವಶಕ್ಕೆ ಪಡೆದು ಇಟ್ಟುಕೊಂಡಿರುತ್ತಾರೆ.

ಪಾರ್ಕಿನಲ್ಲಿ ಪಾಯಿಂಟ್ ಪಾಯಿಂಟ್ ನಲ್ಲಿ ಗಸ್ತು ಮಾಡುತ್ತಿದ್ದ ಗೃಹ ರಕ್ಷಕ ದಳದ ಸಿಬ್ಬಂದಿಗಳು ಪಾರ್ಕಿನಲ್ಲಿ ಆಟಿಕೆ ಬಳಿ ಆಟ ಆಡುತ್ತಿದ್ದ ಮಗು ಕಾಣೆಯಾಗಿರುವುದನ್ನು ಕಂಡು ತಂದೆ-ತಾಯಿ ಮಗುವಿಗಾಗಿ ಒದ್ದಾಡುತ್ತಾ ದುಃಖಿಸುತ್ತಾ ಹುಡುಕಾಡುತ್ತಿದ್ದನ್ನು ಕಂಡು ಆ ಪಾಯಿಂಟಿನ ಗೃಹ ರಕ್ಷಕ ಸಿಬ್ಬಂದಿ ತಕ್ಷಣ ಎಲ್ಲಾ ಸಿಬ್ಬಂದಿಗಳಿಗೆ ಮಗುವಿನ ಕಾಣೆಯ ಬಗ್ಗೆ ಮಾಹಿತಿ ನೀಡಿರುತ್ತಾರೆ, ಮಗುವನ್ನು ಗೇಟಿನ ಬಳಿ ತಡೆಹಿಡಿದ ಸಿಬ್ಬಂದಿ ಮಗು ತಮ್ಮ ಬಳಿ ಇರುವ ಬಗ್ಗೆ ಮಾಹಿತಿ ನೀಡಿರುತ್ತಾರೆ. ಆ ಸ್ಥಳಕ್ಕೆ ಬಂದ ತಂದೆ ತಾಯಿಗೆ ಮಗುವನ್ನು ಪಡೆದು ಗೃಹರಕ್ಷಕ ಸಿಬ್ಬಂದಿ ವರ್ಗದವರಿಗೆ ಧನ್ಯವಾದಗಳು ಹೇಳಿದರು.

